ಕೇವಲ 14 ದಿನಗಳಲ್ಲಿ ಸುಮಾರು 37 ವಹಿವಾಟು ನಡೆಸಿ ಫಿನ್‌ಟೆಕ್ ಕಂಪನಿ ಕ್ರೆಡಿಟ್ ಕಾರ್ಡ್ (CRED) ಪಾವತಿ ವೇದಿಕೆ ಕ್ರೆಡ್ ಗೆ ಬರೋಬ್ಬರಿ 12.5 ಕೋಟಿ ರೂಪಾಯಿಗಳನ್ನು ವಂಚಿಸಿದ ಆರೋಪಿಗಳನ್ನು ಬೆಂಗಳೂರು ಪೊಲೀಸರು ಹೆಡೆಮುರಿ ಕಟ್ಟಿದ್ದು ಗುಜರಾತ್‌ನ ನಾಲ್ವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ವಂಚನೆ ಎಸಗಲು ಕೆಲ ಸೂಕ್ಷ್ಮ ಡೇಟಾವನ್ನು ಕದ್ದಿದ್ದು ಮಾತ್ರವಲ್ಲದೇ ಕಾರ್ಪೊರೇಟ್ ದಾಖಲೆಗಳನ್ನು ನಕಲಿ ಮಾಡಿದೆ.
ಬಂಧಿತರನ್ನು ವೈಭವ್ ಪಿತಾಡಿಯಾ (ರಾಜ್‌ಕೋಟ್‌ನ ಆಕ್ಸಿಸ್ ಬ್ಯಾಂಕ್‌ನ ರಿಲೇಷನ್ ಶಿಪ್ ಮ್ಯಾನೇಜರ್), ಪರ್ಮಾರ್ ನೇಹಾ ಬೆನ್ ವಿಪುಲ್ಭಾಯ್ (ಬ್ಯಾಂಕಿಂಗ್ ಏಜೆಂಟ್ ಮತ್ತು ಸೂರತ್‌ನ ನಿವಾಸಿ), ಶೈಲೇಶ್ (ರಾಜ್‌ಕೋಟ್‌ನ ವಿಮಾ ಏಜೆಂಟ್ ಮತ್ತು ವೈಭವ್ ಅವರ ಸಹೋದ್ಯೋಗಿ), ಮತ್ತು ಶುಭಂ (ರಾಜ್‌ಕೋಟ್‌ನ ಕಮಿಷನ್ ಏಜೆಂಟ್) ಎಂದು ಗುರುತಿಸಲಾಗಿದೆ.

ಆಕ್ಸಿಸ್ ಬ್ಯಾಂಕ್ ಉದ್ಯೋಗಿ 12.5 ಕೋಟಿ ರೂ. ವಂಚನೆಯ ಮಾಸ್ಟರ್ ಮೈಂಡ್
ಈ ಪ್ರಕರಣದ ಆರೋಪಿಯಾಗಿರುವ ಗುಜರಾತಿನ ಆಕ್ಸಿಸ್ ಬ್ಯಾಂಕಿನ ರಿಲೇಶನ್ ಶಿಪ್ ಮ್ಯಾನೇಜರ್ 33 ವರ್ಷದ ವೈಭವ್ ಪಿಟಾಡಿಯಾ ಇದರ ಮಾಸ್ಟರ್ ಮೈಂಡ್ ಎಂದು ಆರೋಪಿಸಲಾಗಿದೆ. ಕಾರ್ಪೊರೇಟ್ ಖಾತೆಯಲ್ಲಿನ ದೋಷಗಳನ್ನು ಬಳಸಿಕೊಂಡು ತನ್ನ ಆಂತರಿಕ ಜ್ಞಾನವನ್ನು ಬಳಸಿದ್ದಾನೆ. ಬೆಂಗಳೂರಿನ ಆಕ್ಸಿಸ್ ಬ್ಯಾಂಕ್‌ನ ಇಂದಿರಾನಗರ ಶಾಖೆಯಿಂದ ನಿರ್ವಹಿಸಲ್ಪಡುವ ಖಾತೆಯು ಪ್ರತಿದಿನ ₹ 2 ಕೋಟಿಗೂ ಹೆಚ್ಚಿನ ವಹಿವಾಟುಗಳನ್ನು ನಿರ್ವಹಿಸುತ್ತದೆ ಎಂದು ಕಂಡು ಹಿಡಿದು ಪ್ಲ್ಯಾನ್ ರೂಪಿಸಿದ್ದಾನೆ.
ವಂಚನೆ ನಡೆದಿದ್ದು ಹೇಗೆ?
ಕ್ರೆಡಿಟ್ ಕಾರ್ಡ್ ಬಿಲ್‌ಗಳಿಗಾಗಿ ಪ್ರತಿಫಲ-ಸಕ್ರಿಯ ಪಾವತಿ ವೇದಿಕೆಯಾದ ಡ್ರೀಮ್ ಪ್ಲಗ್‌ಪೇ ಟೆಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ (CRED) ಗೆ ಲಿಂಕ್ ಮಾಡಲಾದ ನೋಡಲ್ ಕಾರ್ಪೊರೇಟ್ ಖಾತೆಯು ದೈನಂದಿನ 2 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ ಎಂದು ತಿಳಿದ ನಂತರ ಪಿಟಾಡಿಯಾ ಈ ಸ್ಕ್ಯಾಮ್ ನಡೆಸಲು ಸಂಚು ರೂಪಿಸಿದ್ದಾನೆ. ನೋಡಲ್ ಖಾತೆಗೆ ಲಿಂಕ್ ಮಾಡಲಾದ ಎರಡು ನಿಷ್ಕ್ರಿಯ ಕಾರ್ಪೊರೇಟ್ ಖಾತೆಗಳನ್ನು ಆರೋಪಿಗಳು ಗುರುತಿಸಿದ್ದು ಅವರು ಈ ಖಾತೆಗಳನ್ನು ಹೇಗೆ ಪುನಃ ಸಕ್ರಿಯಗೊಳಿಸಬೇಕು ಎಂಬ ಪ್ಯ್ಲಾನ್ ರೂಪಿಸಿದರು.
ವ್ಯವಹಾರಗಳನ್ನು ಆರಂಭ ಮಾಡಲು ಪಿಟಾಡಿಯಾ ಅವರು ಕಂಪನಿಯ ಕಾರ್ಪೊರೇಟ್ ಖಾತೆಗೆ ಇನ್ನೊಬ್ಬ ಬಳಕೆದಾರರನ್ನು ಸೇರ್ಪಡೆ ಮಾಡಬೇಕಿತ್ತು. ಕಾರ್ಪೊರೇಟ್ ವಿಭಾಗದಲ್ಲಿ ನಿರ್ವಹಿಸಲಾಗುವ ಖಾತೆಗಳಿಗೆ, ಖಾತೆದಾರರು ಆಕ್ಸಿಸ್ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಬಳಕೆದಾರರನ್ನು ಸೇರಿಸಲು ರಿಕ್ವೆಸ್ಟ್ ಮಾಡಬಹುದು.
ಪಿಟಾಡಿಯಾ ಲೋಪದೋಷಗಳನ್ನು ಬಳಸಿಕೊಳ್ಳಲು ನಿರ್ಧರಿಸಿ ಈ ಖಾತೆಗಳಿಗೆ ಲಿಂಕ್ ಇರುವ ಇ-ಮೇಲ್ ಮತ್ತು ಮೊಬೈಲ್ ನಂಬರ್ ಹಾಗೂ ಕಂಪನಿಯ ಮಾಹಿತಿಯ ಡೇಟಾವನ್ನು ಆರೋಪಿಗಳು ಕಳವು ಮಾಡಿದ್ದರು. ಅವರ ಇನ್ಸ್ಟಾಗ್ರಾಮ್ ಸ್ನೇಹಿತರಲ್ಲಿ ಒಬ್ಬರಾದ ನೇಹಾ ಬೆನ್ ಅವರನ್ನು ಈ ವಂಚನೆಗೆ ಕೈ ಜೋಡಿಸುವಂತೆ ಮನವರಿಕೆ ಮಾಡಿ CRED ನ ವ್ಯವಸ್ಥಾಪಕ ನಿರ್ದೇಶಕರಂತೆ (MD) ಸೋಗು ಹಾಕಿಸಿ ನೈಜವೆಂಬಂತೆ ಬಿಂಬಿಸಲು ಫಾರ್ಮ್ಗಳಲ್ಲಿ ಸಹಿ ಮತ್ತು ಸೀಲುಗಳನ್ನು ನಕಲಿ ಮಾಡಿದರು. ಹೊಸ ಗುರುತು ಪಡೆದು ಖಾತೆ ಪ್ರವೇಶಿಸಿ ಅನಧಿಕೃತ ವಹಿವಾಟುಗಳನ್ನು ನಡೆಸಿತು. ಕದ್ದ ಹಣವನ್ನು ಅಲ್ಲಿಂದ ಬೇರೇಡೆ ವರ್ಗಾಯಿಸಲು ಪಿಟಾಡಿಯಾ , ಶೈಲೇಶ್ ಮತ್ತು ಶುಭಂ ಎಂಬ ಇಬ್ಬರು ಸಹಚರರನ್ನು ಕರೆತಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ವರ್ಗಾವಣೆಗೆ ಅನುಕೂಲವಾಗುವಂತೆ ಮ್ಯೂಲ್ ಖಾತೆಗಳನ್ನು ತೆರೆದರು. ಅಕ್ಟೋಬರ್ 29 ರಿಂದ ನವೆಂಬರ್ 11 ರವರೆಗೆ 14 ದಿನಗಳಲ್ಲಿ 37 ವಹಿವಾಟುಗಳು ನಡೆಸಿ 15.2 ಕೋಟಿ ರೂಪಾಯಿಗಳ ದೊಡ್ಡ ಮೊತ್ತವನ್ನು ವರ್ಗಾಯಿಸಲು ಪ್ರಯತ್ನಿಸಲಾಯಿತು, ಆದರೆ ಕೇವಲ 12.2 ಕೋಟಿ ರೂಪಾಯಿಗಳನ್ನು ವರ್ಗಾಯಿಸಲಾಯಿತು. ನಕಲು ಮಾಡಿ ಕಂಪನಿಗೆ ಸಂಬಂಧಿಸಿದ 12.51 ಕೋಟಿ ರೂ. ಅನ್ನು 17 ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದರು.
ನವೆಂಬರ್ 13 ರಂದು CRED ನ ವಾಡಿಕೆಯ ಬ್ಯಾಂಕ್ ಖಾತೆಯ ಟ್ಯಾಲಿ ಮಾಡುವ ಸಮಯದಲ್ಲಿ ವಂಚನೆ ಬೆಳಕಿಗೆ ಬಂದಿತು. ಫಿನ್‌ಟೆಕ್ ಕಂಪನಿಯು 12.5 ಕೋಟಿ ರೂಪಾಯಿಗಳ ವ್ಯತ್ಯಾಸವನ್ನು ಕಂಡು ತಕ್ಷಣವೇ ಆಕ್ಸಿಸ್ ಬ್ಯಾಂಕ್ ಅನ್ನು ಎಚ್ಚರಿಸಿ ಖಾತೆ ತಡೆಹಿಡಿದಿದೆ.
ಬೆಂಗಳೂರಿನ ಪೂರ್ವ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಆಧಾರದ ಮೇಲೆ ಸೈಬರ್ ಪೊಲೀಸರು ಆಕ್ಸಿಸ್ ಬ್ಯಾಂಕ್‌ನ ಅಂಕಲೇಶ್ವರ ಶಾಖೆಯಲ್ಲಿ ವಂಚನೆ ಚಟುವಟಿಕೆಗಳನ್ನು ಪತ್ತೆಹಚ್ಚಿದ್ದಾರೆ. ನಕಲಿ ನಮೂನೆಗಳನ್ನು ಸಲ್ಲಿಸಿದ ನೇಹಾ ಅವರನ್ನು ಡಿಸೆಂಬರ್ 21 ರಂದು ಬಂಧಿಸಲಾಯಿತು. ವಿಚಾರಣೆಯ ಸಮಯದಲ್ಲಿ, ಅವರು ಪಿಟಾಡಿಯಾ ಮತ್ತು ಇತರರ ಶಾಮೀಲಾಗಿರುವುದನ್ನು ಬಹಿರಂಗಪಡಿಸಿದರು. ಪೊಲೀಸರು ತನಿಖೆಯನ್ನು ಮುಂದುವರಿಸಿದಾಗ ಆರೋಪಿ ವೈಭವ್ ಗುಜರಾತ್ ರಾಜ್ಯದ ಅಕ್ಸಿಸ್ ಬ್ಯಾಂಕ್ ನ ಕಾರ್ಪೋರೆಟ್ ವಿಭಾಗದ ಮ್ಯಾನೇಜರ್ ಆಗಿರುವುದು ಕಂಡು ಬಂದಿತ್ತು.


Click it and Unblock the Notifications