ದೇಶದಲ್ಲಿ ದಿನೇ ದಿನೇ ನಿರುದ್ಯೂಗ ಸಮಸ್ಯೆ ಕಡಿಮೆ ಆಗುತ್ತಿದೆ ಎಂಬ ಮಾಹಿತಿ ಹೊರ ಬಂದಿದೆ. ಹೀಗೆ ಹೇಳಲು ಬೇರೆ ಯಾವುದೇ ಕಾರಣ ಅಲ್ಲ. ಸರ್ಕಾರಿ ಸಂಸ್ಥೆಯೊಂದು ಈ ಬಗ್ಗೆ ಅಂಕಿ ಅಂಶಗಳನ್ನು ಬಹಿರಂಗ ಪಡಿಸಿದೆ. ಹಾಗಿದರೆ ಆ ಸಂಸ್ಥೆ ಯಾವುದು ಅನ್ನೋದನ್ನು ನೋಡೋಣ..
ದೇಶದಲ್ಲಿ ಉದ್ಯೋಗಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಮಂಗಳವಾರ ಬಿಡುಗಡೆ ಮಾಡಿರುವ ಅಂಕಿಅಂಶಗಳು ಬೆಳಕಿಗೆ ಬಂದಿವೆ. ಅಂಕಿ ಅಂಶದ ಪ್ರಕಾರ, ಡಿಸೆಂಬರ್ 2023 ರಲ್ಲಿ 15.62 ಲಕ್ಷ ಸದಸ್ಯರು ಇಪಿಎಫ್‌ಒಗೆ ಸೇರಿದ್ದಾರೆ. ಇದು ಕಳೆದ 3 ತಿಂಗಳಲ್ಲೇ ಗರಿಷ್ಠ ಸಂಖ್ಯೆ ಆಗಿದೆ. ಇದರಿಂದ ದೇಶದಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ ಎಂಬುದು ಸ್ಪಷ್ಟವಾಗುತ್ತದೆ.

ಡಿಸೆಂಬರ್ 2022 ಕ್ಕೆ ಹೋಲಿಸಿದರೆ ಈ ಅಂಕಿ ಅಂಶದಲ್ಲಿ ಶೇಕಡಾ 4.62 ರಷ್ಟು ಹೆಚ್ಚಳವಾಗಿದೆ. ಕಾರ್ಮಿಕ ಸಚಿವಾಲಯದ ಪ್ರಕಾರ, ಡಿಸೆಂಬರ್ 2023 ರಲ್ಲಿ 8.41 ಲಕ್ಷ ಹೊಸ ಸದಸ್ಯರು ಇಪಿಎಫ್‌ಒಗೆ ಸೇರಿದ್ದಾರೆ. ನವೆಂಬರ್ 2023 ಕ್ಕೆ ಹೋಲಿಸಿದರೆ ಈ ಅಂಕಿ ಅಂಶವು ಶೇಕಡಾ 11.97 ರಷ್ಟು ಹೆಚ್ಚಾಗಿದೆ.
ಯಾವ ರಾಜ್ಯದಲ್ಲಿ ಉದ್ಯೋಗ ಹೆಚ್ಚು?
ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಕರ್ನಾಟಕ ಮತ್ತು ಹರಿಯಾಣದಿಂದ ಗರಿಷ್ಠ 58.33 ಪ್ರತಿಶತ ಸದಸ್ಯರು ಉದ್ಯೋಗಿಗಳಾಗಿದ್ದಾರೆ. ನವೆಂಬರ್ 2023 ಕ್ಕೆ ಹೋಲಿಸಿದರೆ ಇಪಿಎಫ್‌ಒಗೆ ಮರುಸೇರ್ಪಡೆಗೊಳ್ಳುವವರ ಸಂಖ್ಯೆಯು ಶೇಕಡಾ 12.61 ರಷ್ಟು ಹೆಚ್ಚಾಗಿದೆ. ಗರಿಷ್ಠ ಇಪಿಎಫ್‌ಒ ಸದಸ್ಯರು ಕಬ್ಬಿಣ ಮತ್ತು ಉಕ್ಕು, ಕಟ್ಟಡ ಮತ್ತು ನಿರ್ಮಾಣ, ಮಾನವಶಕ್ತಿ ಪೂರೈಕೆ, ಭದ್ರತಾ ಸೇವೆಗಳು ಮತ್ತು ಸಾಮಾನ್ಯ ವಿಮಾ ಕ್ಷೇತ್ರಗಳೊಂದಿಗೆ ಸಂಬಂಧ ಹೊಂದಿದ್ದಾರೆ.

ಯುವಕರಿಗೆ ಉದ್ಯೋಗ ನೀಡುವಲ್ಲಿ ಕಂಪನಿಗಳು ಮುಂದೆ ಬರುತ್ತಿವೆ. ಡೇಟಾ ಪ್ರಕಾರ, ಡಿಸೆಂಬರ್ 2023 ರಲ್ಲಿ, ಇಪಿಎಫ್‌ಒ ಯೋಜನೆಗಳಿಂದ ಹೊರಗೆ ಹೋಗಿದ್ದ ಸುಮಾರು 12.02 ಲಕ್ಷ ಸದಸ್ಯರು ಹಿಂತಿರುಗಿದ್ದಾರೆ. ಕೆಲಸ ಬಿಟ್ಟ ನಂತರ ಬೇರೆ ಕಡೆ ಕೆಲಸಕ್ಕೆ ಸೇರುವುದರಿಂದ ಹೀಗಾಗುತ್ತದೆ.
ಇಪಿಎಫ್‌ಒ ವೇತನದಾರರ ಮಾಹಿತಿಯ ಪ್ರಕಾರ, ಈ ಅವಧಿಯಲ್ಲಿ ಸೇರಿಸಲಾದ ಒಟ್ಟು ಹೊಸ ಸದಸ್ಯರಲ್ಲಿ 18 ರಿಂದ 25 ವಯೋಮಾನದವರ ಪಾಲು ಶೇಕಡಾ 57.18 ರಷ್ಟಿದೆ. ದೇಶದ ಸಂಘಟಿತ ವಲಯದಲ್ಲಿ ಕೆಲಸಕ್ಕೆ ಸೇರುವ ಹೆಚ್ಚಿನ ಸದಸ್ಯರು ಯುವಕರು ಎಂದು ಇದು ತೋರಿಸುತ್ತದೆ.
ಪ್ರತಿ ತಿಂಗಳು ಹೆಚ್ಚುತ್ತಿದೆ ಸದಸ್ಯರ ಸಂಖ್ಯೆ
ಡಿಸೆಂಬರ್ 2023 ರಲ್ಲಿ ಒಟ್ಟು 2.90 ಲಕ್ಷ ಮಹಿಳೆಯರು ಇಪಿಎಫ್‌ಒ ಸದಸ್ಯರಾಗಿದ್ದಾರೆ. ನವೆಂಬರ್, 2023 ಕ್ಕೆ ಹೋಲಿಸಿದರೆ ಶೇಕಡಾ 3.54 ರಷ್ಟು ಹೆಚ್ಚಳವಾಗಿದೆ. ಅಂಕಿಅಂಶಗಳ ಪ್ರಕಾರ, ಪ್ರತಿ ತಿಂಗಳು ಹೊಸ ಸದಸ್ಯರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಇವರಲ್ಲಿ ಹೆಚ್ಚಿನವರು ಮೊದಲ ಬಾರಿಗೆ ಉದ್ಯೋಗವನ್ನು ಪಡೆದಿದ್ದಾರೆ. ಹೊಸದಾಗಿ ಸೇರ್ಪಡೆಯಾದ 8.41 ಲಕ್ಷ ಸದಸ್ಯರಲ್ಲಿ ಸುಮಾರು 2.09 ಲಕ್ಷ ಮಹಿಳೆಯರು. ಇಪಿಎಫ್‌ಒಗೆ ಸೇರಿದ್ದು ಇದೇ ಮೊದಲ ಬಾರಿ.
ಇಪಿಎಫ್‌ಒ ಪ್ರತಿ ತಿಂಗಳು ಈ ಡೇಟಾವನ್ನು ಬಿಡುಗಡೆ ಮಾಡುತ್ತದೆ. ಇದನ್ನು ಸೆಪ್ಟೆಂಬರ್ 2017 ರಿಂದ ಪ್ರಾರಂಭಿಸಲಾಯಿತು. ಇಪಿಎಫ್‌ಒ ಸದಸ್ಯರನ್ನು ಆಧಾರ್ ಮೂಲಕ ಸಾರ್ವತ್ರಿಕ ಖಾತೆ ಸಂಖ್ಯೆ (UAN) ಮೂಲಕ ಸಂಖ್ಯೆ ಮಾಡಲಾಗುತ್ತದೆ.


Click it and Unblock the Notifications