ಬೆಂಗಳೂರು, ಫೆಬ್ರವರಿ 14: ಬಜಾಜ್ ಫಿನ್‌ಸರ್ವ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿ ಬಜಾಜ್ ಫಿನ್‌ಸರ್ವ್ ಅಸೆಟ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ 2,51,000 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ಬೃಹತ್ ಸಂಸ್ಥೆಯಾಗಿದೆ. ಈ ಸಂಸ್ಥೆಯನ್ನು ಗಣೇಶ್ ಮೋಹನ್ ಅವರು ಸಿಇಒ ಆಗಿ ಮುನ್ನಡೆಸುತ್ತಿದ್ದಾರೆ.
ಗಣೇಶ್ ಮೋಹನ್ ಅವರು 2015 ರಲ್ಲಿ ಬಜಾಜ್ ಫಿನ್‌ಸರ್ವ್ ಲಿಮಿಟೆಡ್‌ಗೆ ಗ್ರೂಪ್ ಹೆಡ್ ಆಫ್ ಸ್ಟ್ರಾಟಜಿಯಾಗಿ ಸೇರ್ಪಡೆಗೊಂಡಿದ್ದು, ಇವರು ಬಂದ ನಂತರ ಕಂಪನಿಯಲ್ಲಿ ಹಲವಾರು ಮಹತ್ವದ ಪರಿವರ್ತನಾ ಉಪಕ್ರಮಗಳನ್ನು ತಂದಿದ್ದಾರೆ. ಮಾತ್ರವಲ್ಲದೇ ಹೊಸತನವನ್ನು ಉತ್ತೇಜಿಸಿ, ವ್ಯವಹಾರಗಳಲ್ಲಿ ಹೊಸ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಒತ್ತು ನೀಡಿದ್ದಾರೆ. ನವೆಂಬರ್ 2021 ರಿಂದ, ಅವರು ಕಂಪನಿಯ CEO ಆಗಿ ಸೇವೆ ಸಲ್ಲಿಸಿದ್ದಾರೆ.

ತಮ್ಮ ವೃತ್ತಿಜೀವನದ ಪ್ರೀತಿಸುವುದರ ಜೊತೆಗೆ, ಮೋಹನ್ ಅವರಿಗೆ ಭಾರತೀಯ ಶಾಸ್ತ್ರೀಯ ಸಂಗೀತ ಕೇಳುವುದು ಅವರ ಹವ್ಯಾಸವಾಗಿದೆ. ಇದರೊಂದಿಗೆ ಆಗಾಗ್ಗೆ ತಮ್ಮ ಮಕ್ಕಳೊಂದಿಗೆ ಹೈಕಿಂಗ್ ಹೋಗುವುದನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.ಗಣೇಶ್ ಮೋಹನ್ ಅವರು IIT ಖರಗ್‌ಪುರದಿಂದ (1992-1996) ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ B.Tech (ಆನರ್ಸ್) ಮತ್ತು IIM ಕೋಲ್ಕತ್ತಾದಿಂದ ಫೈನಾನ್ಸ್ ಅಂಡ್ ಸ್ಟ್ರಾಟೆಜಿ ಯಲ್ಲಿ ಎಂಬಿಎ ಪದವಿಯನ್ನು ಪಡೆದಿದ್ದಾರೆ.
ಗಣೇಶ್ ಮೋಹನ್ ಅವರು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ನಲ್ಲಿ ಪಾಲುದಾರರಾಗಿ ಸುಮಾರು16 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಅಲ್ಲಿ ಅವರು ಫೈನಾನ್ಸಿಯಲ್ ಸರ್ವಿಸಸ್ ಅಂಡ್ ಆರ್ಗನೈಜೇಷನ್ ಪ್ರಾಕ್ಟಿಕ್ಸ್ ನಲ್ಲಿ ಹೆಚ್ಚು ಕಾಲ ತಮ್ಮನ್ನು ತೊಡಗಿಸಿಕೊಂಡಿದ್ದರು.ಅವರು ಬಜಾಜ್ ಫಿನ್‌ಸರ್ವ್ ಲಿಮಿಟೆಡ್‌ಗೆ ಸೇರುವ ಮೊದಲು ಯುಎಸ್, ಯುರೋಪ್, ಮಧ್ಯಪ್ರಾಚ್ಯ ದೇಶ ಮತ್ತು ಭಾರತದಲ್ಲಿಯೂ ಕೆಲಸ ಮಾಡಿದ್ದಾರೆ.
ಬಜಾಜ್ ಫಿನ್‌ಸರ್ವ್ ಲಿಮಿಟೆಡ್‌ನ ಹೊಸ ಪ್ರಯತ್ನವಾಗಿ ಬಜಾಜ್ ಫಿನ್‌ಸರ್ವ್ ಅಸೆಟ್ ಮ್ಯಾನೇಜ್‌ಮೆಂಟ್ ಹುಟ್ಟಿಕೊಂಡಿದ್ದು, ಇದು ವಿವಿಧ ಅತ್ಯಾಧುನಿಕ ನಿಧಿಗಳು ಮತ್ತು ಹೂಡಿಕೆ ಪರಿಹಾರಗಳನ್ನು ಒದಗಿಸುವ ಮೂಲಕ ಹೂಡಿಕೆದಾರರು ತಮ್ಮ ಹಣಕಾಸಿನ ಉದ್ದೇಶಗಳನ್ನು ತಲುಪಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.


Click it and Unblock the Notifications