ಬಿಎಸ್ ಇನಲ್ಲಿ ಬೆಳಗ್ಗೆ 9.55 ಗಂಟೆಗೆ 2147 ರು ನಂತೆ ಹರಿದಾಡುತ್ತಿತ್ತು. ಮಧ್ಯಾಹ್ನ 11.30 ರ ವೇಳೆಗೆ 2151.30 ರು ನಂತೆ -17.95ರಷ್ಟು ಕುಸಿತ ಕಂಡಿದೆ.
NSEನಲ್ಲಿ ಸಮಯ 11.35ಕ್ಕೆ 2152.65 ರು ನಂತೆ -15.90 (-0.73%) ಕುಸಿತ ಕಂಡಿದೆ.
ಅತ್ತ NASDAQ ನಲ್ಲೂ ಇನ್ಫೋಸಿಸ್ ಷೇರುಗಳು 38.28 ರಂತೆ ಆರಂಭಗೊಂಡು ಶೇ 0.42ರಷ್ಟು ಕುಸಿತ ಕಂಡು 38.17ಕ್ಕೆ ಇಳಿದಿದೆ(4:00pm ET)
2013-14 ಆರ್ಥಿಕ ವರ್ಷಕ್ಕೆ ಬೇಕಾದ ಸೂಕ್ತ ಮಾರ್ಗದರ್ಶನ ಸೂತ್ರಗಳನ್ನು ಪ್ರಕಟಿಸಲು ಸೋತಿರುವ ಇನ್ಫೋಸಿಸ್ ಸಂಸ್ಥೆ ಷೇರು ಮಾರುಕಟ್ಟೆಯಲ್ಲಿ 52 ವಾರಗಳ ಸಾರ್ವಕಾಲಿಕ ಪತನ ಕಂಡಿದೆ.
ದೇಶದ ಎರಡನೆ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ಗುರುವಾರ( ಜು.13) ಪ್ರಕಟಿಸಿದ ಮೊದಲ ತ್ರೈಮಾಸಿಕ ವರದಿಯಲ್ಲಿ 2,290 ಕೋಟಿ ನಿವ್ವಳ ಲಾಭ ಮಾಡಿದೆಯಾದರೂ ನಿರೀಕ್ಷಿತ ಮಟ್ಟಕ್ಕೇ ಏರಿರಲಿಲ್ಲ. ಮಾರುಕಟ್ಟೆ ತಜ್ಞರ 2483 ಕೋಟಿ ರು ಲಾಭದ ನಿರೀಕ್ಷೆ ಟುಸ್ ಆಗಿತ್ತು. ಒಟ್ಟು ಆದಾಯ 9,616 ಕೋಟಿ ರು ಬಂದಿತ್ತು. 9,715.2 ಕೋಟಿ ರು ನಿರೀಕ್ಷೆ ಹೊಂದಲಾಗಿತ್ತು.
ಅಮೆರಿಕ ವೀಸಾ ವಂಚನೆ ಪ್ರಕರಣದಲ್ಲಿ ಸಿಲುಕಿರುವ ಇನ್ಫೋಸಿಸ್ 1752 ಮಿಲಿಯನ್ ಡಾಲರ್ ಆದಾಯ ಗಳಿಸಿದ್ದು, ಆದರಲ್ಲೂ PAT ನಿರೀಕ್ಷೆ 1771 ಮಿಲಿಯನ್ ಡಾಲರ್ ಇತ್ತು.
ಇದರ ಬೆನ್ನಲ್ಲೇ ಈ ಬಾರಿ ಕೇವಲ 20,000 ಉದ್ಯೋಗಿಗಳಿಗೆ ಮಾತ್ರ ಸಂಬಳ ಏರಿಕೆ ಮಾಡಲಾಗುವುದು. Team Leads ಹಾಗೂ business heads ಗಳಿಗೆ ಯಾವುದೇ ರೀತಿ ಸಂಬಳ ಏರಿಕೆ ಕನಸು ಕಾಣುವಂತಿಲ್ಲ ಎಂದು ಸಂಸ್ಥೆ ಇನ್ಫೋಸಿಸ್ ಸಂಸ್ಥೆ ಎಚ್ ಆರ್ ನಂದಿತಾ ಗುರ್ಜಾರ್ ಹೇಳಿದ್ದರು.
ಈ ಎಲ್ಲಾ ಅಂಶಗಳ ಜೊತೆಗೆ ಬಹುಮುಖ್ಯವಾಗಿ ಷೇರುಪೇಟೆಯಲ್ಲಿ ಕರಡಿ ಹೊಡೆತ ಸಿಕ್ಕಲು ಕಾರಣ ತನ್ನ ಷೇರುದಾರರಿಗೆ ಯಾವುದೇ ಇನ್ಫೋಸಿಸ್ ಆದಾಯ ದೂರದರ್ಶಿತ್ವ ಘೋಷಿಸದಿರುವುದು, ಗ್ರಾಹಕರ ಜೊತೆ ಸರಿಯಾದ ನಿರ್ವಹಣೆ ಕೊರತೆ, ಪ್ರಮುಖ ಮಾರುಕಟ್ಟೆ ಕ್ಷೇತ್ರಗಳಿಂದ ಹಿಂದಕ್ಕೆ ಸರಿದಿರುವುದು. ಹೊಸ ಬಂಡವಾಳ ಹೂಡಿಕೆ ಆಕರ್ಷಣೆಗೆ ಸೂಕ್ತವಾದ ವಾತಾವರಣ ಸೃಷ್ಟಿಸಲು ವಿಫಲವಾಗಿರುವುದು ಕಾರಣವಾಗಿದೆ.
ಇನ್ಫೋಸಿಸ್ ಗೆ ಸೆಡ್ಡು ಹೊಡೆದಿರುವ ಪ್ರತಿಸ್ಪರ್ಧಿ ಎಚ್ ಸಿಎಲ್ ಆಯಾಕಟ್ಟಿನ ಸ್ಥಳಗಳಲ್ಲಿ ಸ್ಥಾನ ಬದಲಾವಣೆ ಮಾಡುವ ಮೂಲಕ ತ್ರೈಮಾಸಿಕ ಹಾಗೂ ಷೇರು ಮಾರುಕಟ್ಟೆಯಲ್ಲೂ ವಿಜೃಂಭಿಸುತ್ತಿದೆ.


Click it and Unblock the Notifications

