
ಈ ಕುರಿತಂತೆ ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 119ರ ಅಡಿಯಲ್ಲಿ ಇನ್ಕಂ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವ ದಿನಾಂಕವನ್ನು ಜುಲೈ 31ರಿಂದ ಆಗಸ್ಟ್ 31ರವರೆಗೆ ವಿಸ್ತರಿಸಬೇಕೆಂದು ಇಲಾಖಾ ಅಧಿಕಾರಿಗಳು ಸಂದೇಶ ರವಾನಿಸಿದ್ದಾರೆ.
10 ಲಕ್ಷ ರು.ಗಿಂತ ಹೆಚ್ಚು ಆದಾಯ ಇರುವವರು ಆನ್‌ಲೈನ್ ಮುಖಾಂತರ ರಿಟರ್ನ್ ಫೈಲ್ ಮಾಡುವುದು ಕಡ್ಡಾಯವಾಗಿದೆ. ಆದರೆ, ವಿದ್ಯುತ್ ವ್ಯತ್ಯಯದಿಂದಾಗಿ ಕರ್ನಾಟಕವೂ ಸೇರಿದಂತೆ ದೇಶದ 22 ರಾಜ್ಯಗಳಲ್ಲಿ ಜನಜೀವನವೇ ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆಯಲ್ಲಿ ಗಡುವು ವಿಸ್ತರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಗಡುವು ವಿಸ್ತರಿಸಲು ಇಲಾಖೆಗೆ ಸಿಕ್ಕ ಮತ್ತೊಂದು ಕಾರಣವೆಂದರೆ, ಇಲಾಖೆಯ ವೆಬ್‌ಸೈಟ್ ಆಗಾಗ ಕ್ರಾಶ್ ಆಗಿರುವುದು. ಲಕ್ಷಾಂತರ ಆದಾಯ ತೆರಿಗೆ ಕಟ್ಟುವವರು ವೆಬ್ ಸೈಟಿಗೆ ದಾಳಿ ಇಟ್ಟಿದ್ದರಿಂದ ಸರ್ವರ್‌ಗಳು ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರಿಂದಾಗಿ, ಲಕ್ಷಾಂತರ ಜನರಿಗೆ ತೊಂದರೆಯಾಗಿದೆ. ದೇಶದಲ್ಲಿ 85 ಲಕ್ಷಕ್ಕೂ ಹೆಚ್ಚು ಆದಾಯ ತೆರಿಗೆ ಕಟ್ಟುವ ಸಂಬಳದಾರರಿದ್ದಾರೆ.
ಜುಲೈ 31ರೊಳಗೆ ರಿಟರ್ನ್ ಫೈಲ್ ಮಾಡಲು ವಿಫಲರಾದವರಿಗೆ ರಿಟರ್ನ್ ಫೈಲ್ ಮಾಡಲು ಮತ್ತೊಂದು ಅವಕಾಶ ಸಿಕ್ಕಂತಾಗಿದೆ. ಒಂದು ತಿಂಗಳ ಹೆಚ್ಚುವರಿ ಗಡುವು ಸಿಕ್ಕಿರುವುದರಿಂದ ಮತ್ತೆ ಆಗಸ್ಟ್ 31ರವರೆಗೆ ಕಾಯದೆ, ಕೊಟ್ಟ ಅವಕಾಶವನ್ನು ಬಳಸಿಕೊಂಡು ತ್ವರಿತಗತಿಯಲ್ಲಿ ರಿಟರ್ನ್ ಫೈಲ್ ಮಾಡುವುದು ಜಾಣತನ.


Click it and Unblock the Notifications