
ಎಚ್ ಸಿಎಲ್ ಇನ್ಫೋಸಿಸ್ಟಮ್ ಸಂಸ್ಥೆಯನ್ನು ಲೆನೊವೋ ಸಮೂಹ ಖರೀದಿಸಲು ಮುಂದಾಗಿದೆ. ಎಚ್ ಸಿಎಲ್ ನ ಶೇ 50.7 ರಷ್ಟು ಷೇರುಗಳು ಲೆನೆವೋ ಪಾಲಾಗಲಿದೆ ಎಂಬ ಸುದ್ದಿ ಹಬ್ಬಿತ್ತು.
ಬಿಎಸ್ ಇಯಲ್ಲಿ ಆ.28ರ ಮಧ್ಯಾಹ್ನ 13.10ರ ವೇಳೆಗೆ ಎಚ್ ಸಿಎಲ್ ಷೇರುಗಳು 44.40 ರು ದರದಂತೆ ಶೇ 22.15 ರಷ್ಟು ಏರಿಕೆ ಕಂಡಿತ್ತು. ಎನ್ ಎಸ್ ಇನಲ್ಲಿ 45.10 ರು ದರದಂತೆ ಶೇ 24.76 ರಷ್ಟು ಏರಿಕೆ ಕಂಡಿದೆ.
ಸೋಮವಾರ ಷೇರುಪೇಟೆ ಅಂತ್ಯಗೊಂಡಾಗ 42.80 ರು ನಂತೆ ಶೇ 17 ರಷ್ಟು ಏರಿಕೆ ಕಂಡಿತ್ತು. ಮಂಗಳವಾರ ಮೊದಲಾರ್ಧದಲ್ಲಿ ಷೇರುಗಳು ಏರಿಕೆಯ ಗತಿಯಲ್ಲೇ ಸಾಗಿದೆ.
ಬಿಎಸ್ ಇನಲ್ಲಿ ಸುಮಾರು 9.09 ಲಕ್ಷ ಎಚ್ ಸಿಎಲ್ ಷೇರುಗಳು ಹಾಗೂ ಎನ್ ಎಸ್ ಇನಲ್ಲಿ ಸುಮಾರು 27 ಲಕ್ಷ ಷೇರುಗಳು ಕೈಬದಲಾಯಿಸಿ ವಹಿವಾಟು ನಡೆಸಿದೆ.
ಭಾರತದ ಅಗ್ರಗಣ್ಯ ಹಾರ್ಡ್ ವೇರ್ ಸಂಸ್ಥೆ ಎಚ್ ಸಿಎಲ್ ಇನ್ಪೋಸಿಸ್ಟಮ್ : ಹಾರ್ಡ್ವೇರ್ ಹಾಗೂ ಐಸಿಟಿ ಸಿಸ್ಟಮ್ ಇಂಟಿಗ್ರೇಷನ್ ಸಂಸ್ಥೆಯಾಗಿದ್ದು, ಐಸಿಟಿ ಉತ್ಪನ್ನಗಳಿಗೆ ಸೇವೆ ಒದಗಿಸುತ್ತದೆ. ಕಂಪ್ಯೂಟಿಂಗ್, ಶೇಖರಣೆ, ನೆಟ್ವರ್ಕಿಂಗ್, ಸುರಕ್ಷತೆ, ಟೆಲಿಕಾಂ, ಇಮೇಜಿಂಗ್ ಹಾಗೂ ರೀಟೇಲ್ ಸೇವೆಯನ್ನು ಒದಗಿಸುತ್ತದೆ. ಟೆಲಿಕಾಂ, ಬಿಎಫ್ ಎಸ್ ಐ, ಇ ಆಡಳಿತ ಹಾಗೂ ಇಂಧನ ಕ್ಷೇತ್ರದಲ್ಲಿ ಎಚ್ ಸಿಎಲ್ ಸೇವೆ ಒದಗಿಸುತ್ತಿದೆ.
ಲಭ್ಯ ಮಾಹಿತಿ ಪ್ರಕಾರ ಎಚ್ ಸಿಎಲ್ ಇನ್ಫೋಸಿಸ್ಟಮ್ ಸಂಸ್ಥೆಯನ್ನು ಖರೀದಿಸಲು ಲೆನೊವೋ ಸಂಸ್ಥೆ ಸುಮಾರು 500 ಕೋಟಿ ಡೀಲ್ ಮಾಡಿಕೊಂಡಿದೆ. ಏಪ್ರಿಲ್ ಜೂನ್ ತ್ರೈಮಾಸಿಕದಂತೆ ಖರೀದಿದಾರ ಸಂಸ್ಥೆ ಶೇ 50.7ಪಾಲು ಹಾಗೂ ಎಚ್ ಸಿಎಲ್ ಸಂಸ್ಥೆ 42.85 ಪಾಲು ಹೊಂದಲಿದೆ.


Click it and Unblock the Notifications