
ಬಿಎಸ್ ಇನಲ್ಲಿ ಬುಧವಾರ ಮಧ್ಯಾಹ್ನದ 1.20 ವೇಳೆಗೆ 39.35 ರು. ನಂತೆ ಶೇ 10.16 ರಷ್ಟು ಇಳಿಕೆ ಕಂಡಿತ್ತು. ಎನ್ ಎಸ್ ಇನಲ್ಲಿ 39.35 ರು ನಂತೆ ಶೇ 10.26 ರಷ್ಟು ಇಳಿಮುಖವಾಗಿತ್ತು. ಸದ್ಯದ ಪರಿಸ್ಥಿತಿ ಗಮನಿಸಿದರೆ ಒಂದೆರಡು ದಿನ ಎಚ್ ಸಿಎಲ್ ಷೇರುಗಳು ಏರಿಕೆಯಾಗುವ ಲಕ್ಷಣಗಳಿಲ್ಲ.
ಸೋಮವಾರ ಷೇರುಪೇಟೆ ಅಂತ್ಯಗೊಂಡಾಗ 42.80 ರು ನಂತೆ ಶೇ 24 ರಷ್ಟು ಏರಿಕೆ ಕಂಡಿತ್ತು. ಮಂಗಳವಾರ ಮೊದಲಾರ್ಧದಲ್ಲಿ ಷೇರುಗಳು ಏರಿಕೆಯ ಗತಿಯಲ್ಲೇ ಸಾಗಿದೆ.
ಮಂಗಳವಾರ(ಆ.28) ಎಚ್ ಸಿಎಲ್ ಕಂಪನಿ ಷೇರುಗಳು ಶೇ 16 ರಷ್ಟು ಏರಿಕೆ ಕಂಡಿತ್ತು. ಆದರೆ, ಎಚ್ ಸಿಎಲ್ ನ ಶೇ 50.7 ರಷ್ಟು ಷೇರುಗಳು ಲೆನೆವೋ ಪಾಲಾಗಲಿದೆ. ಎಚ್ ಸಿಎಲ್ ಇನ್ಫೋಸಿಸ್ಟಮ್ ಸಂಸ್ಥೆಯನ್ನು ಲೆನೊವೋ ಸಮೂಹ ಖರೀದಿಸಲು ಮುಂದಾಗಿದೆ ಎಂಬ ಸುದ್ದಿ ಸತ್ಯಕೆಕ್ ದೂರವಾಗಿದೆ. ನಮ್ಮ ಸಂಸ್ಥೆಯ ಮುಂದೆ ಈ ರೀತಿ ಯಾವುದೇ ಪ್ರಸ್ತಾಪಗಳಿಲ್ಲ ಎಂದು ಎಚ್ ಸಿಎಲ್ ಸಂಸ್ಥೆ ಬಿಎಸ್ ಇಗೆ ಹೇಳಿಕೆ ನೀಡಿದೆ.
ಎಚ್ ಸಿಎಲ್ ಇನ್ಫೋಸಿಸ್ಟಮ್ ಸಂಸ್ಥೆಯನ್ನು ಖರೀದಿಸಲು ಲೆನೊವೋ ಸಂಸ್ಥೆ ಸುಮಾರು 500 ಕೋಟಿ ಡೀಲ್ ಮಾಡಿಕೊಂಡಿದೆ. ಏಪ್ರಿಲ್ ಜೂನ್ ತ್ರೈಮಾಸಿಕದಂತೆ ಖರೀದಿದಾರ ಸಂಸ್ಥೆ ಶೇ 50.7ಪಾಲು ಹಾಗೂ ಎಚ್ ಸಿಎಲ್ ಸಂಸ್ಥೆ 42.85 ಪಾಲು ಹೊಂದಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಭಾರತದ ಅಗ್ರಗಣ್ಯ ಹಾರ್ಡ್ ವೇರ್ ಸಂಸ್ಥೆ ಎಚ್ ಸಿಎಲ್ ಇನ್ಪೋಸಿಸ್ಟಮ್ : ಹಾರ್ಡ್ವೇರ್ ಹಾಗೂ ಐಸಿಟಿ ಸಿಸ್ಟಮ್ ಇಂಟಿಗ್ರೇಷನ್ ಸಂಸ್ಥೆಯಾಗಿದ್ದು, ಐಸಿಟಿ ಉತ್ಪನ್ನಗಳಿಗೆ ಸೇವೆ ಒದಗಿಸುತ್ತದೆ. ಕಂಪ್ಯೂಟಿಂಗ್, ಶೇಖರಣೆ, ನೆಟ್ವರ್ಕಿಂಗ್, ಸುರಕ್ಷತೆ, ಟೆಲಿಕಾಂ, ಇಮೇಜಿಂಗ್ ಹಾಗೂ ರೀಟೇಲ್ ಸೇವೆಯನ್ನು ಒದಗಿಸುತ್ತದೆ. ಟೆಲಿಕಾಂ, ಬಿಎಫ್ ಎಸ್ ಐ, ಇ ಆಡಳಿತ ಹಾಗೂ ಇಂಧನ ಕ್ಷೇತ್ರದಲ್ಲಿ ಎಚ್ ಸಿಎಲ್ ಸೇವೆ ಒದಗಿಸುತ್ತಿದೆ.


Click it and Unblock the Notifications