ಷೇರುದಾರರ ತರಾಟೆಗೆ ಬೆದರದ ಕಿಂಗ್ ಮಲ್ಯ

ಷೇರುದಾರರ ತರಾಟೆಗೆ ಬೆದರದ ಕಿಂಗ್ ಮಲ್ಯ
ಬೆಂಗಳೂರು, ಸೆ.27: ಆರ್ಥಿಕ ನಷ್ಟಕ್ಕೆ ತುತ್ತಾಗಿರುವ ಕಿಂಗ್ ಫಿಷರ್, ಯುಬಿ ಸಮೂಹ ಸಂಸ್ಥೆ ವಾರ್ಷಿಕ ಷೇರುದಾರರ ಸಭೆಯಲ್ಲಿ ಮಾಲೀಕ ವಿಜಯ್ ಮಲ್ಯ ತೀವ್ರ ಪೇಚಾಟಕ್ಕೆ ಸಿಲುಕಿದ ಪ್ರಸಂಗ ನಡೆದಿದೆ. ಯುಬಿ ಗ್ರೂಪ್ ಬಿಕ್ಕಟ್ಟಿನಲ್ಲಿರುವುದಕ್ಕೆ ಕಂಪನಿಯ ಷೇರುದಾರರು ವಿಜಯ ಮಲ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, ಇದರ ನಡುವೆ ಗುರುವಾರ (ಸೆ.27) ಕಿಂಗ್ ಫಿಷರ್ ಷೇರುಗಳು ಶೇ 8 ರಷ್ಟು ಏರಿಕೆ ಕಂಡು ಅಚ್ಚರಿ ಮೂಡಿಸಿದೆ.

ಬಿಎಸ್ ಇನಲ್ಲಿ ಕಿಂಗ್ ಫಿಷರ್ ಏರ್ ಲೈನ್ಸ್ ಷೇರುಗಳು ಸಂಜೆ ಮಾರುಕಟ್ಟೆ ಮುಕ್ತಾಯದ ಹೊತ್ತಿಗೆ 16.96 ರು.ನಂತೆ ಶೇ 8.03ರಷ್ಟು ಏರಿಕೆಯಾಗಿತ್ತು. ಎನ್ ಎಸ್ ಇನಲ್ಲಿ 16.96 ರು ನಂತೆ ಶೇ 7.96 ರಷ್ಟು ಪ್ರಗತಿ ಕಂಡಿತ್ತು.

ಮೊದಲು ಯುನೈಟೆಡ್ ಬ್ರೇವರೀಸ್ ಮತ್ತು ಆನಂತರ ಕಿಂಗ್ ಫಿಷರ್ ಏರ್ ಲೈನ್ಸ್ ಷೇರುದಾರರ ಸಭೆ ನಡೆಯಿತು. 17ಕ್ಕೂ ಅಧಿಕ ಬ್ಯಾಂಕಿಂಗ್ ಸಂಸ್ಥೆಗಳಿಂದ ಸುಮಾರು 7000 ಕೋಟಿ ರು ಸಾಲ ಹೊಂದಿರುವ ಕಿಂಗ್ ಫಿಷರ್ ಏರ್ ಲೈನ್ಸ್ ಮೇಲಕ್ಕೆತ್ತುವ ಬಗ್ಗೆ ಪ್ರಶ್ನಿಸಲಾಯಿತು.

ಎಸ್ ಬಿಐಗೆ 1,500 ಕೋಟಿ ಸಾಲ ನೀಡಬೇಕಾಗಿರುವ ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆಗೆ ಸಾಲಗಾರರಿಗಿಂತ ತನ್ನ ಷೇರುದಾರರನ್ನು ಸಂಭಾಳಿಸುವುದೇ ಕಷ್ಟವಾಗುವ ಪರಿಸ್ಥಿತಿ ತಲೆದೋರಿದೆ.

ಷೇರು ದರ ಕುಸಿತ, ಸಿಬ್ಬಂದಿಗೆ ವೇತನ ವಿಳಂಬ, ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳು ಸಾಲ ಮರುಪಾವತಿಗೆ ಒತ್ತಾಯಿಸುತ್ತಿರುವುದು ಸೇರಿದಂತೆ ಎಲ್ಲ ವಿಷಯಗಳ ಕುರಿತು ಮಲ್ಯ ಮತ್ತು ಕಂಪನಿ ಆಡಳಿತ ಮಂಡಳಿಯನ್ನು ಪ್ರಶ್ನಿಸಿದರು.

ವಿಮಾನಯಾನ ಕ್ಷೇತ್ರದಲ್ಲಿ ಶೇ 49ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ಅಸ್ತು ಎಂದ ಮೇಲೆ ಇದೇ ಮೊದಲ ಬಾರಿಗೆ ವಿಜಯ್ ಮಲ್ಯ ಒಡೆತನದ ಕಂಪನಿಗಳ ವಾರ್ಷಿಕ ಸಭೆ ನಡೆದಿರುವುದು ಮಹತ್ವದ ಬೆಳವಣಿಗೆಯಾಗಿದೆ.

ಡಿಯಾಜಿಯೋ ಸಂಸ್ಥೆ ಯುನೈಟೆಡ್ ಸ್ಪಿರೀಟ್ಸ್ ಹಾಗೂ ಯುಬಿ ಸಮೂಹದ ಷೇರುಗಳಲ್ಲಿ ಪಾಲು ಹೊಂದುವ ಮೂಲಕ ಕಿಂಗ್ ಫಿಷರ್ ಸಾಲದ ಭಾರ ಇಳಿಸುವ ಪ್ರಕ್ರಿಯೆ ಬಗ್ಗೆ ಕೂಡಾ ಪ್ರಶ್ನೆಗಳು ಎದ್ದಿದೆ.

ಈ ಮಧ್ಯೆ ಎಸ್ ಬಿಐ ಚೇರ್ಮನ್ ಪ್ರತೀಪ್ ಚೌಧುರಿ ಅವರು ಮಲ್ಯ ಅವರು ತಮ್ಮ ಒಡೆತನದ ಯುಬಿ ಸಮೂಹದ ಕೆಲವು ಹೂಡಿಕೆ ಬೇಡದ ಆಸ್ತಿಗಳನ್ನು ಉದಾ: ಮಂಗಳೂರಿನ ಫರ್ಟಿಲೈಜರ್ಸ್ ಕಂಪನಿಯನ್ನು ಮಾರಾಟ ಮಾಡುವಂತೆ ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+