
ಸ್ವಯಂ ಲೆಕ್ಕಾಚಾರ ಮಾಡಿ ತೆರಿಗೆ ಪಾವತಿಸ ಬೇಕಾಗಿ 73,388 ಮಂದಿ ಒಟ್ಟು ರೂ. 3,859 ಕೋಟಿ ತೆರಿಗೆ ಬಾಕಿ ಮಾಡಿದ್ದಾರೆಂದು ಕಂದಾಯ ಇಲಾಖೆ ತಿಳಿಸಿದೆ.
ಒಪ್ಪಿರುವಷ್ಟು ತೆರಿಗೆಯನ್ನು ಪಾವತಿ ಮಾಡದೆ ರಿಟರ್ನ್ ದಾಖಲಿಸುವುದು ಐ.ಟಿ. ಕಾಯ್ದೆಯನ್ವಯ ‘ತೆರಿಗೆ ಗಳ್ಳತನ'ವಾಗುತ್ತದೆ. ಅಂತಹ ತೆರಿಗೆದಾರರು ಕಾನೂನು ಕ್ರಮ ಎದುರಿಸಬೇಕಾಗುತ್ತದೆಂದು ವಿತ್ತ ಸಚಿವಾಲಯವು ಹೇಳಿಕೆಯೊಂದರಲ್ಲಿ ಎಚ್ಚರಿಸಿವೆ.
ಆದಾಯ ತೆರಿಗೆ ಇಲಾಖೆ ಈ ವಿತ್ತ ವರ್ಷದಲ್ಲಿ ರಿಟರ್ನ್‌ಗಳನ್ನು ಸಲ್ಲಿಸಿರುವ ಹಾಗೂ ಸ್ವಯಂ ವೌಲ್ಯಮಾಪಿತ ತೆರಿಗೆಯನ್ನು ಕಟ್ಟಲು ಬಾಕಿಯಿರುವ ತೆರಿಗೆದಾರರು ಕೂಡಲೇ ಮುಂದೆ ಬಂದು 2013ರ ಮಾರ್ಚ್‌ನೊಳಗೆ ನಿಗದಿತ ತೆರಿಗೆ ಪಾವತಿಸುವಂತೆ ಒತ್ತಾಯಿಸಿದೆ.
ಮುಂದೆ, ಸ್ವಯಂ ವೌಲ್ಯಮಾಪನ ಪ್ರಕರಣಗಳಲ್ಲಿ ಬಾಕಿ ತೆರಿಗೆಯನ್ನು ರಿಟರ್ನ್ ಸಲ್ಲಿಕೆಯ ವೇಳೆ ಸಲ್ಲಿಸಬೇಕೆಂದು ಅದು ಹೇಳಿದೆ.
ಈ ಮಾರ್ಚ್ 31ಕ್ಕೆ ಅಂತ್ಯವಾಗುವ ಹಾಲಿ ವಿತ್ತ ವರ್ಷದಲ್ಲಿ ನೇರ ತೆರಿಗೆ ವರ್ಗದಲ್ಲಿ ರೂ. 5.65 ಲಕ್ಷ ಕೋಟಿ ಸಂಗ್ರಹದ ಗುರಿ ಸಾಧಿಸಲು ಕಂದಾಯ ಇಲಾಖೆ ಆದಾಯದ ಪ್ರತಿಯೊಂದು ಮೂಲ ದಿಂದಲೂ ಪ್ರಯತ್ನಿಸುತ್ತಿದೆ.
ತೆರಿಗೆ ತಪ್ಪಿಸುವಿಕೆ ತಡೆಯುವ ನಿಟ್ಟಿನಲ್ಲಿ ಸರಕಾರ ರಿಟರ್ನ್ ಸಲ್ಲಿಸದ ತೆರಿಗೆದಾರರಿಗೆ 35,000 ನೋಟಿಸ್‌ಗಳನ್ನು ಕಳುಹಿಸಿವೆ ಹಾಗೂ ಅಷ್ಟೇ ಸಂಖ್ಯೆಯ ನೋಟಿಸ್‌ಗಳನ್ನು ಕಳುಹಿಸುವ ಪ್ರಕ್ರಿಯೆ ಚಾಲ್ತಿಯಲ್ಲಿವೆ.


Click it and Unblock the Notifications