ಸನ್ ಟಿವಿ ಷೇರುದಾರರಿಗೆ ದೊಡ್ಡ ಹೊಡೆತ

ಸನ್ ಟಿವಿ ಷೇರುದಾರರಿಗೆ ದೊಡ್ಡ ಹೊಡೆತ
ಚೆನ್ನೈ, ಮಾ. 19: ಯುಪಿಎ 2 ಸರ್ಕಾರಕ್ಕೆ ಬೆಂಬಲ ನೀಡುತ್ತಾ ಸರ್ಕಾರದ ಮಿತ್ರಪಕ್ಷವಾಗಿದ್ದ ಡಿಎಂಕೆ ಪಕ್ಷ ಮಾ.19 ರಂದು ಬೆಂಬಲ ವಾಪಸ್ ಪಡೆದಿದೆ. ಇದರ ನೇರ ಪರಿಣಾಮ ಡಿಎಂಕೆ ನಾಯಕರ ಅಧೀನದಲ್ಲಿರುವ ಸನ್ ಟಿವಿ,ಸ್ಪೈಸ್ ಜೆಟ್ ಸಂಸ್ಥೆಗಳ ಷೇರುಗಳ ಮೇಲೆ ಬಿದ್ದಿದೆ.

ಡಿಎಂಕೆ ಅಧಿನಾಯಕ ಅವರ ಎಂ ಕರುಣಾನಿಧಿ ಅವರ ಅಳಿಯ ಮುರಸೋಳಿ ಮಾರನ್ ಮಕ್ಕಳಾದ ಕಳಾನಿಧಿ ಮಾರನ್ ಹಾಗೂ ದಯಾನಿಧಿ ಮಾರನ್ ಅವರು ಪ್ರಭಾವಿ ಉದ್ಯಮಿಗಳಾಗಿದ್ದಾರೆ. ಕಳಾನಿಧಿ ಮಾರನ್ ಪತ್ನಿ ಕೊಡಗು ಮೂಲದ ಕಾವೇರಿ ಅವರು ಸನ್ ನೆಟ್ವರ್ಕ್ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ.

ಹೀಗಾಗಿ ಡಿಎಂಕೆಯಲ್ಲಿ ಏನಾದರೂ ಅನಾಹುತವಾದರೆ ಪರೋಕ್ಷವಾಗಿ ಸನ್ ನೆಟ್ ವರ್ಕ್ ಹಾಗೂ ಸ್ಪೈಸ್ ಜೆಟ್ ಷೇರುಗಳು ಏರುಪೇರಾಗುತ್ತದೆ. ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರು ಯುಪಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದವರು. ಈಗ ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾಗಿರುವ ಮಾರನ್ ಬ್ರದರ್ಸ್ ಗೆ ಶ್ರೀಲಂಕಾ ಆಟಗಾರರಿಗೆ ತಂಡದಲ್ಲಿ ಆಡಲು ಅನುಮತಿ ನೀಡದೆ ಇರಬೇಕಾದ ಪರಿಸ್ಥಿತಿ ಒದಗಿದೆ.

ನೆಲ ಕಚ್ಚಿದ ಷೇರುಗಳು: ಮಂಗಳವಾರ ಸನ್ ಟಿವಿ ಷೇರುಗಳು ಮಧ್ಯಾಹ್ನ 16.40ರ ವೇಳೆಗೆ ಬಿಎಸ್ ಇ ನಲ್ಲಿ 410.95 ರು ನಂತೆ ಶೇ 5.98 ರು ನಷ್ಟು ಕುಸಿತ ಕಂಡು 5.98 ರು ಕಳೆದುಕೊಂಡಿದೆ. ಇದೇ ವೇಳೆ ಎನ್ ಎಸ್ ಇನಲ್ಲಿ 412.40 ರು ನಂತೆ ಶೇ 5.74ರ ರಷ್ಟು ಕುಸಿತ ಕಂಡು 25.10 ರು ಕಳೆದುಕೊಂಡಿದೆ.

ಇದೇ ರೀತಿ ಸ್ಪೈಸ್ ಜೆಟ್ ಷೇರುಗಳು ಬಿಎಸ್ ಇನಲ್ಲಿ 31.85 ರು ನಂತೆ ಶೇ 4.35 ರಷ್ಟು ಕುಸಿತ ಕಂಡಿದೆ. ಎನ್ ಎಸ್ ಇನಲ್ಲಿ ಕಳೆದ 30 ದಿನಗಳಿಂದ ವಹಿವಾಟು ನಡೆಸಿಲ್ಲ. ಸನ್ ಟಿವಿ ಷೇರುಗಳು ಇದೇ ಪರಿಸ್ಥಿತಿಯಲ್ಲಿ ಹೆಚ್ಚು ಕಮ್ಮಿ ಎರಡು ಮೂರು ದಿನವಾದರೂ ಮುಂದುವರೆಯುವ ಸಾಧ್ಯತೆಯಿದೆ.

ಮಾರನ್ ಬ್ರದರ್ಸ್ ಈ ಎರಡು ಕಂಪನಿಗಳಲ್ಲದೆ ರೆಡ್ ಎಫ್ ಎಂ, ಸೂರ್ಯನ್ ಎಫ್ ಎಂ, ದಿನಕರನ್, ಕುಂಕುಮಂ ಸೇರಿದಂತೆ ಹಲವು ಪತ್ರಿಕೆಗಳನ್ನು ಹೊಂದಿದ್ದಾರೆ. ಸನ್ ಡಿಟಿಎಚ್, ಸನ್ ಪಿಕ್ಚರ್ಸ್, ಸನ್ 18 ಜೊತೆಗೆ ಹೊಸದಾಗಿ ಸನ್ ರೈಸರ್ಸ್ ಹೈದರಾಬಾದ್ ಐಪಿಎಲ್ ತಂಡ ಕೂಡಾ ಸೇರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+