
ಒಟ್ಟಾರೆ 475 ಫೇಯ್ಡ್ ಅಪ್ ಶೇರ್ ಕ್ಯಾಪಿಟಲ್ ಹೊಂದಿರುವ ಇಂಡಿಯಾಫಸ್ಟ್ ಭಾರತದಾದ್ಯಂತ 1000ಕ್ಕೂ ಹೆಚ್ಚು ನಗರಗಳಲ್ಲಿ ಅಸ್ತಿತ್ವ ಹೊಂದಿದ್ದು, 5000ಕ್ಕೂ ಹೆಚ್ಚು ಬ್ಯಾಂಕ್ ಗಳೊಂದಿಗೆ ಸಹಭಾಗಿತ್ವದಲ್ಲಿ ಕೆಲಸ ಮಾಡುತ್ತಿದೆ. 2009ರ ನವೆಂಬರ್ 16ರಂದು ಕಾರ್ಯ ನಿರ್ವಹಿಸಲು ಆರಂಭಿಸಿದ ಕಂಪನಿ, ಸುಲಭವಾಗ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುತ್ತ ಬಂದಿದೆ.
ಈ ಸಂದರ್ಭದಲ್ಲಿ ಇಂಡಿಯಾಫಸ್ಟ್ ಲೈಫ್ ಇನ್ಶೂರನ್ಸ್‌ನ ಸಿಇಓ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಡಾ. ಪಿ. ನಂದಗೋಪಾಲ್ ಅವರು, ಕಳೆದ ನಾಲ್ಕು ವರ್ಷಗಳು ಸವಾಲಿನಿಂದ ಕೂಡಿದ್ದವಾದರೂ ಸಂತೃಪ್ತಿಯನ್ನು ತಂದಿವೆ. ಮೊದಲು 'ಗ್ರಾಹಕ' ಎಂಬ ನಮ್ಮ ನಂಬಿಕೆಗೆ ಬದ್ಧರಾಗಿದ್ದು, ವಿನೂತನ ಸೇವೆ ಮತ್ತು ತಂತ್ರಜ್ಞಾನದ ಸಹಾಯದಿಂದ ಉತ್ತಮ ಸೇವೆಯನ್ನೂ ನೀಡುತ್ತಿದ್ದೇವೆ ಎಂದಿದ್ದಾರೆ.
ಭಾರತದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದ್ದರೂ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದ್ದು, 2012-13ರಲ್ಲಿ ಶೇ.34ರಷ್ಟು ಅಭಿವೃದ್ಧಿಯನ್ನು ಕಂಡಿದೆ ಮತ್ತು 17.4 ಲಕ್ಷ ಗ್ರಾಹಕರಿಗೆ ವಿಮೆ ಮಾಡಿಸಿದೆ. ಕಾರ್ಪೋರೇಟ್ ಬಿಸಿನೆಸ್ ಕ್ಷೇತ್ರದಲ್ಲಿಯೂ 200 ಕಾರ್ಪೋರೇಟ್ ಗ್ರಾಹಕರನ್ನು ಹೊಂದಿದ್ದು, ಅಲ್ಲಿಯೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಮೈಕ್ರೋ, ಆರೋಗ್ಯ ಮತ್ತು ಪಿಂಚಣಿ ಕ್ಷೇತ್ರದಲ್ಲಿ ಹೆಚ್ಚಿನ ನಿಗಾ ವಹಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಇರುವ ಉತ್ಪನ್ನಗಳು ಆರೋಗ್ಯ, ಭದ್ರತೆ, ಉಳಿತಾಯ ಮತ್ತು ಆಸ್ತಿಯ ವಿಮಾ ರಕ್ಷಣೆಯನ್ನು ಹೊಂದಿದೆ. ಕ್ರಿಡಿಟ್ ಲೈಫ್, ಟರ್ಮ್ ಮತ್ತು ಉದ್ಯೋಗಿ ಹೊರೆ ಮುಂತಾದ ಗುಂಪು ವಿಮೆಯನ್ನು ಕೂಡ ಹೊಂದಿದೆ. ವಿಭಿನ್ನ ಆರ್ಥಿಕ ವಲಯದಲ್ಲಿರುವ ಭಾರತೀಯ ಗ್ರಾಹಕರ ಅಗತ್ಯತೆಗಳನ್ನು ಮನದಲ್ಲಿಟ್ಟುಕೊಂಡು ಉತ್ಪನ್ನಗಳನ್ನು ರೂಪಿಸುತ್ತೇವೆ. ಮುಂದಿನ 2-3 ವರ್ಷಗಳಲ್ಲಿ ಶೇ.10-20ರಷ್ಟು ಬೆಳವಣಿಗೆ ಹೊಂದುವ ಗುರಿ ಇದೆ ಎಂದು ಅವರು ನುಡಿದ್ದಾರೆ.
ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಇಂಡಿಯಾಫಸ್ಟ್ ಇನ್ಶೂರನ್ಸ್ ಕಂಪನಿಯನ್ನು ಭಾರತದ ದೊಡ್ಡ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ಗಳಾದ ಬ್ಯಾಂಕ್ ಆಪ್ ಬರೋಡಾ ಮತ್ತು ಆಂಧ್ರ ಬ್ಯಾಂಕ್ ಗಳು, ಮತ್ತು ಯುಕೆಯ ರಿಸ್ಟ್, ವೆಲ್ತ್ ಮತ್ತು ಇನ್ವೆಸ್ಟ್ ಮೆಂಟ್ ಕಂಪನಿಯಾದ ಲೀಗಲ್ ಅಂಡ್ ಜನರಲ್ ಬೆಂಬಲ ನೀಡುತ್ತಿವೆ. ಬ್ಯಾಂಕ್ ಆಫ್ ಬರೋಡಾ ಶೇ.44ರಷ್ಟು, ಆಂಧ್ರ ಬ್ಯಾಂಕ್ ಶೇ.30ರಷ್ಟು ಮತ್ತು ಲೀಗಲ್ ಅಂಡ್ ಜನರಲ್ ಶೇ.26ರಷ್ಟು ಪಾಲುದಾರಿಕೆ ಹೊಂದಿವೆ.
ಹೆಚ್ಚಿನ ವಿವರ ಬೇಕಿದ್ದರೆ ಸಂಪರ್ಕಿಸಿ
ತಮನ್ನಾ ಖನ್ನಾ
+ 91 98206 02369
[email protected]
ಟಿ. ಆನಂದ್ ಮಹೇಶ್
+ 91 98707 16285
[email protected]
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications