ಜುಲೈ ತಿಂಗಳು ಬಂತೆಂದರೆ ಸಂಬಳ ಪಡೆಯುವ ಪ್ರತಿ ವ್ಯಕ್ತಿಗೆ ಒಂದೇ ಚಿಂತೆ. ಇನ್ಕಂ ಟ್ಯಾಕ್ಸ್ ರಿಟರ್ನ್ ಅನ್ನು ಎಲ್ಲಿ ಫೈಲ್ ಮಾಡುವುದು, ಹೇಗೆ ಮಾಡುವುದು, ಯಾರ ಬಳಿ ಮಾಡಿಸುವುದು ಎಂದು. ಈ ಪ್ರಕ್ರಿಯೆಯ ಸಂಕೀರ್ಣತೆಯೇ ಅನೇಕರನ್ನು ಗೊಂದಲಕ್ಕೀಡು ಮಾಡುತ್ತದೆ. ಹಲವಾರು ಜನರು ರಗಳಯೇ ಬೇಡವೆಂದು ಟ್ಯಾಕ್ಸ್ ರಿಟರ್ನ್ ಫೈಲಿಂಗ್ ಮಾಡುವುದೇ ಇಲ್ಲ.
ಜೊತೆಗೆ, ಈ-ಫೈಲಿಂಗ್ ಮಾಡುವ ಕುರಿತು ಹಲವರ ಬಳಿ ಸೂಕ್ತವಾದ ಮಾಹಿತಿ ಇರುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಆನ್ ಲೈನ್ ನಲ್ಲಿ ರಿಟರ್ನ್ ಫೈಲಿಂಗ್ ಮಾಡಿದರೆ ಹಣಕಾಸಿಗೆ ಸಂಬಂಧಿಸಿದ ಅತ್ಯಂತ ಪ್ರಮುಖವಾದ ಮಾಹಿತಿಗಳನ್ನು ಹಂಚಿಕೊಳ್ಳಬೇಕಾಗುತ್ತದಲ್ಲ ಎಂಬ ಆತಂಕ ಕೂಡ ಮನೆ ಮಾಡಿರುತ್ತದೆ..

ಇದನ್ನು ಮನಗಂಡಿರುವ ಎಚ್ ಅಂಡ್ ಆರ್ ಬ್ಲಾಕ್ ಕಂಪನಿ, ಇನ್ಕಂ ಟ್ಯಾಕ್ಸ್ ರಿಟರ್ನ್ ಈ-ಫೈಲಿಂಗನ್ನು ಅತ್ಯಂತ ಸರಳೀಕರಿಸಿದ್ದು, ಬೇರೆ ಯಾವುದೇ ಆನ್ ಲೈನ್ ವಹಿವಾಟಿನಂತೆ ಆದಾಯ ತೆರಿಗೆ ಮರುಪಾವತಿಯನ್ನೂ ಸರಳವಾಗಿ ಮಾಡಬಹುದು. ಆನ್ ಲೈನ್ ನಲ್ಲಿ ಶಾಪಿಂಗ್ ಮಾಡಿದಂತೆ, ಇತರರ ಸಹಾಯವಿಲ್ಲದೆ ನೀವಾಗಿಯೇ ಟ್ಯಾಕ್ಸ್ ರಿಟರ್ನ್ ಈ-ಫೈಲಿಂಗ್ ಮಾಡಬಹುದು.
www.hrblock.in ವೆಬ್ ತಾಣದಲ್ಲಿ ಕಂಪನಿ ನೀಡುವ ಫಾರಂ 16ನ್ನು ಅಪ್ಲೋಡ್ ಮಾಡಿ, ಮತ್ತೆ ಕೆಲವು ಸರಳ ಹಂತಗಳನ್ನು ದಾಟಿದರೆ ಯಾವುದೇ ಶುಲ್ಕವಿಲ್ಲದೆ ಈ-ಫೈಲಿಂಗ್ ಮಾಡಬಹುದಾಗಿದೆ. ಇದು ಎಷ್ಟು ಸುರಕ್ಷಿತ? ಎಂದು ನೀವು ಕೇಳಬಹುದು. ರಿಟರ್ನ್ ಮಾಡಲು ಸಹಕಾರಿಯಾಗಲೆಂದು ಭಾರತ ಸರಕಾರವೇ ಎಚ್ಆರ್ ಬ್ಲಾಕ್ ಕಂಪನಿಗೆ ಅಧಿಕಾರ ನೀಡಿದೆ. ಜಾಗತಿಕವಾಗಿ, ಈ ಕಂಪನಿ ವೈಯಕ್ತಿಕ ತೆರಿಗೆ ಮರುಪಾವತಿ ವಿಷಯದಲ್ಲಿ ಅಗ್ರಗಣ್ಯ ಎಂದು ಹೆಸರು ಪಡೆದಿದೆ.
ವಿಡಿಯೋ : ಇಲ್ಲಿ ನೀಡಲಾಗಿರುವ 1 ನಿಮಿಷದ ವಿಡಿಯೋದಲ್ಲಿ ಎಚ್ಆರ್ ಬ್ಲಾಕ್ ಕಂಪನಿ ಏನೇನು ಸೇವೆ ನೀಡುತ್ತಿದೆ ಮತ್ತು ಇನ್ಕಂ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡಲು ಈ ಕಂಪನಿಯೇ ಯಾಕೆ ಅತ್ಯುತ್ತಮವಾದುದು ಎಂಬುದನ್ನು ಸ್ಪಷ್ಟವಾಗಿ ವಿವರಿಸಲಾಗಿದೆ.
ಮಾರುಕಟ್ಟೆ ನೇತಾರ
ವಿಶ್ವದ ಅತಿದೊಡ್ಡ ಗ್ರಾಹಕ ತೆರಿಗೆ ಸೇವೆ ನೀಡುವ ಕಂಪನಿ ಎಂಬ ಹೆಗ್ಗಳಿಕೆಗೆ ಎಚ್ಆರ್ ಬ್ಲಾಕ್ ಪಾತ್ರವಾಗಿದೆ. ಜಾಗತಿಕವಾಗಿ 80 ಸಾವಿರಕ್ಕೂ ಹೆಚ್ಚು ತೆರಿಗೆ ತಜ್ಞರು ಮತ್ತು ಅಮೆರಿಕ, ಭಾರತ, ಕೆನಡ, ಆಸ್ಟ್ರೇಲಿಯಾ, ಬ್ರಜಿಲ್ ಮುಂತಾದ 12 ಸಾವಿರಕ್ಕೂ ಹೆಚ್ಚು ರಿಟೇಲ್ ಮಳಿಗೆಗಳನ್ನು ಹೊಂದಿದೆ. ಅಮೆರಿಕದಲ್ಲಿ ನಾಲ್ಕನೇ ಅತಿದೊಡ್ಡ ರಿಟೇಲರ್ ಎಂದು ಹೆಸರುವಾಸಿಯಾಗಿದ್ದು, ಡಂಕಿನ್ ಡೋನಟ್ಸ್ ಅಂಡ್ ವಾಲ್‌ಗ್ರೀನ್ಸ್ ಕಂಪನಿಗಿಂತಲೂ ದೊಡ್ಡ ಕಂಪನಿಯಾಗಿದೆ.
60 ವರ್ಷಗಳ ಟ್ಯಾಕ್ಸ್ ಫೈಲಿಂಗ್ ಅನುಭವ
ಅಮೆರಿಕದಲ್ಲಿ ಏಳರಲ್ಲಿ ಒಬ್ಬರು ಎಚ್ಆರ್ ಬ್ಲಾಕ್ ಮೂಲಕ ಇನ್ಕಂ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುತ್ತಿದ್ದಾರೆ. 1955ರಿಂದ ಇಲ್ಲಿಯವರೆಗೆ ಜಾಗತಿಕವಾಗಿ 650 ಮಿಲಿಯನ್ ತೆರಿಗೆ ಮರುಪಾವತಿ ಮಾಡಲಾಗಿದೆ. ಎಚ್ಆರ್ ಬ್ಲಾಕ್ ತೆರಿಗೆ ತಂತ್ರಾಂಶ ಬಳಸಿ ವಿಶ್ವದಾದ್ಯಂತ 12 ಸಾವಿರಕ್ಕೂ ಹೆಚ್ಚು ಟ್ಯಾಕ್ಸ್ ರಿಟರ್ನ್ ತಜ್ಞರನ್ನೊಳಗೊಂಡ ಕಂಪನಿಗಳು ತೆರಿಗೆ ಮರುಪಾವತಿ ಮಾಡುವ ಸೇವೆಯನ್ನು ಒದಗಿಸುತ್ತಿವೆ.
ಈ-ಫೈಲಿಂಗ್ ಎಕ್ಸ್‌ಪರ್ಟ್
15 ವರ್ಷಗಳಿಂದ ಗ್ರಾಹಕರು ತಾವಾಗಿಯೇ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡಲು ಸಹಾಯ ಮಾಡುತ್ತಿದೆ. ಕಳೆದ ಹಣಕಾಸು ವರ್ಷದಲ್ಲಿ 7.2 ಮಿಲಿಯನ್ ತೆರಿಗೆದಾರರು ಕಂಪನಿಯ ಡಿಜಿಟಲ್ ಸಲ್ಯೂಷನ್ಸ್ ಮುಖಾಂತರ ತೆರಿಗೆ ಮರುಪಾವತಿ ಮಾಡಿದ್ದಾರೆ. ಭಾರತದಲ್ಲಿ ಕೂಡ ತೆರಿಗೆದಾರರು ತಾವಾಗಿಯೇ ಆನ್ ಲೈನ್ ಮೂಲಕ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡಬಹುದು ಅಥವಾ ಕಂಪನಿಯ ಸಹಾಯವನ್ನು ಪಡೆಯಬಹುದು.
ಆದ್ದರಿಂದ, ತೆರಿಗೆ ಮರುಪಾವತಿ ಹೇಗೆ ಮಾಡುವುದು ಎಂಬ ಚಿಂತೆಯನ್ನು ಬಿಡಿ. www.hrblock.in ವೆಬ್ ಸೈಟನ್ನು ಟ್ಯಾಕ್ಸ್ ರಿಟರ್ನ್ ಅನ್ನು ಅತ್ಯಂತ ಸರಳವಾಗಿ ಮತ್ತು ಸುರಕ್ಷಿತವಾಗಿ ಹೇಗೆ ಮಾಡಬಹುದೆಂಬುದನ್ನು ತಿಳಿದುಕೊಳ್ಳಿ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications