ಬೆಂಗಳೂರು, ಅ. 7 : ಆರು ವರ್ಷಗಳಿಂದ ಏರುಹಾದಿಯಲ್ಲಿ ಸಾಗುತ್ತಿದ್ದ ಚಿನ್ನದ ಬೆಲೆ ಕಳೆದ ಒಂದು ವರ್ಷದಿಂದ ಈಚೆಗೆ ಇಳಿಮುಖವಾಗಿದೆ. ಈ ಪರಿಸ್ಥಿತಿ ಭಾರತ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆ ಎರಡರಲ್ಲೂ ಒಂದೇ ತೆರನಾಗಿದೆ.[ಯಾರೋ ಯುದ್ಧಮಾಡಿದರೆ ಕಿವಿಯೋಲೆ ದುಬಾರಿǃ]
ಹಾಗಾದರೆ ಚಿನ್ನದ ಬೆಲೆ ಇಳಿಕೆಗೆ ಕಾರಣಗಳೇನು? ಮತ್ತೆ ಚಿನ್ನದ ಮೇಲೆ ಹಣ ಹೂಡಿಕೆ ಮಾಡಬಹುದೆ? ಹೂಡಿಕೆ ಮಾಡಿದರೆ ಎದುರಾಗುವ ಸಂಕಷ್ಟಗಳೇನು? ಬೆಲೆ ಎಲ್ಲಿಗೆ ಹೋಗಿ ನಿಲ್ಲಬಹದು ಎಂಬುದಕ್ಕೆಲ್ಲ ಉತ್ತರ ಹುಡುಕುವ ಪ್ರಯತ್ನ ಆಗಬೇಕಿದೆ. ಆದರೂ ಚಿನ್ನ ಖರೀದಿಗೆ ಯೋಚಿಸುವ ಮುನ್ನ ಕೆಲ ರಿಸ್ಕ್‌ಗಳನ್ನು ತೆಗೆದುಕೊಳ್ಳಲೇ ಬೇಕಾಗುತ್ತದೆ.
ಬದಲಾದ ಬಂಡವಾಳದಾರರ ಮನೋಭಾವ
ಕಳೆದ ಒಂದು ವರ್ಷದ ಅವಧಿಯಲ್ಲಿ ಆರ್ಥಿಕ ಚಟುವಟಿಕೆಗಳು ತುಂಬಾ ತೀವ್ರವಾಗಿತ್ತು. ಭಾರತದಲ್ಲಿ ಶೇ.15 ರಷ್ಟು ಚಿನ್ನದ ಬೆಲೆ ಇಳಿಕೆಗೆ ಇದು ಕಾರಣವಾಯಿತು. ಲೆಹಮೆನ್ ಬ್ರದರ್ಸ್ ಕಂಪನಿ ಬಿಕ್ಕಟ್ಟಿನ ನಂತರ ಹಣದ ಹರಿವು ಹೆಚ್ಚಾಗಿ ಚಿನ್ನದ ಬೆಲೆ ಇಳಿಯಿತು ಎಂದು ವಿಶ್ಲೇಷಕರು ಹೇಳುತ್ತಾರೆ.
ಡಾಲರ್ ಮತ್ತು ಚಿನ್ನ
ಡಾಲರ್ ಬೆಲೆ ಮತ್ತು ಚಿನ್ನದ ಮೌಲ್ಯ ಒಂದಕ್ಕೊಂದು ವಿಲೋಮವಾಗಿ ಸಂಚರಿಸುತ್ತಿರುವುದನ್ನು ಕಾಣಬಹುದು. ಡಾಲರ್ ತನ್ನ ಮೌಲ್ಯ ಹೆಚ್ಚಿಸಿಕೊಂಡರೆ ಚಿನ್ನ ತನ್ನ ಬೆಲೆಯಲ್ಲಿ ಇಳಿಕೆ ಕಾಣುತ್ತದೆ. ಅದೇ ಚಿನ್ನ ಏರಿದರೆ ಅದು ಡಾಲರ್ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಎರಡೂ ಏರುಗತಿಯಲ್ಲಿ ಸಾಗಿದ ಉದಾಹರಣೆಗಳು ಇವೆ.
ಭಾರತದಲ್ಲೂ ಚಿನ್ನಕ್ಕೆ ಕಡಿಮೆಯಾದ ಬೇಡಿಕೆ
ಭಾರತ ಮತ್ತು ಚೀನಾದಲ್ಲಿ ಚಿನ್ನದ ಬೇಡಿಕೆ ಕುಸಿದಿದ್ದು ಬಹುಮುಖ್ಯ ಅಂಶ. ಸಕರ್ಕಾರದ ನೀತಿಗಳು, ತೆರಿಗೆ, ಆಮದು ಸುಂಕ ಮತ್ತಿತರೇ ಕಾರಣಗಳು ಚಿನ್ನದ ಬೆಲೆ ನಿರ್ಧರಿಸುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ.
ಕ್ಯೂಇ-3
ಅಮೆರಿಕದ ಫೆಡರಲ್ ಬ್ಯಾಂಕ್ ಈ ತಿಂಗಳ ಅಂತ್ಯಕ್ಕೆ ಕ್ಯೂಇ-3 ಜಾರಿ ಮಾಡಲು ಮುಂದಾಗಿದೆ. ಇದರ ಅನ್ವಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೃವ್ಯದ ಪ್ರಮಾಣ ಕಡಿಮೆಯಾಗಲಿದ್ದು ಚಿನ್ನದ ಬೆಲೆ ಮೇಲೆ ಪರಿಣಾಮ ಬೀರಲಿದೆ.


Click it and Unblock the Notifications