ಮುಂಬೈ: ನ, 28 : ನಿರಂತರ ಏರಿಕೆ ದಾಖಲಿಸಿದ ಮುಂಬೈ ಷೇರು ಮಾರುಕಟ್ಟೆ ಶುಕ್ರವಾರ ಸರ್ವಕಾಲಿಕ ದಾಖಲೆ ನಿರ್ಮಿಸಿದೆ. ಸೆನ್ಸೆಕ್ಸ್ ಹಾಗೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಹೊಸ ಎತ್ತರ ತಲುಪಿದೆ.
ಒಂದು ಹಂತದಲ್ಲಿ ಸೆನ್ಸೆಕ್ಸ್ 28,765.52 ಅಂಕ ದಾಖಲಿಸಿ ದಾಖಲೆ ಬರೆಯಿತು. ನಿಫ್ಟಿ 108 ಅಂಕ ಏರಿಕೆ ಕಂಡು 8,602 ಅಂಕ ಗಳ ಸಾರ್ವಕಾಲಿಕ ದಾಖಲೆಯ ಎತ್ತರ ಮುಟ್ಟಿತು.(ಚೀನಾ ನೆರವು: ಮಾರಿಕಟ್ಟೆ ನಾಗಾಲೋಟ)

ಶುಕ್ರವಾರದ ಆರಂಭಿಕ ವ್ಯವಹಾರದಲ್ಲಿ ಸೆನ್ಸೆಕ್ಸ್ ಏಕಾಏಕಿ 326.61 ಜಿಗಿತ ಕಂಡು 28,541.96 ಅಂಕ ತಲುಪಿತು. ನಂತರ ಮತ್ತಷ್ಟು ಎರಿಕೆ ಕಂಡಿತು. ಸೆನ್ಸೆಕ್ಸ್ ಒಟ್ಟು ಶೇ. 1.11 ರಷ್ಟು ಏರಿಕೆ ದಾಖಲಿಸಿದರೆ ನಿಫ್ಟಿ ಶೇ. 1.28 ಏರಿಕೆ ಕಂಡಿತು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯೆಯಾಗುತ್ತಿರುವುದು. ರೂಪಾಯಿ ಮೌಲ್ಯ ವೃದ್ಧಿಗೊಳ್ಳುತ್ತಿರುವುದು, ಡಾಲರ್ ಎದುರು ರೂಪಾಯಿ ಸ್ಥಿರತೆ ಕಾಯ್ದುಕೊಂಡಿದ್ದು, ಲೋಹಗಳ ಮೇಲೆ ಚೀನಾ ತೆರಿಗೆ ವಿನಾಯಿತಿ ನೀಡಿದ್ದು ಈ ರೀತಿಯ ಅನೇಕ ಅಂಶಗಳು ಮಾರುಕಟ್ಟೆ ಹೂಡಿಕೆ ಮೇಲೆ ನೇರ ಪರಿಣಾಮ ಬೀರಿವೆ. ಇವು ಬಂಡವಾಳದ ಹರಿವು ಹೆಚ್ಚಾಗಲು ಕಾರಣವಾಗಿದೆ.
ಸಾಫ್ಟ್ ವೇರ್, ತೈಲ ಸಂಬಂಧಿ ಷೇರುಗಳು ಏರಿಕೆ ಹಾದಿಯಲ್ಲೇ ಸಾಗಿದ್ದವು. ಉಳಿದಂತೆ ರಿಲಾಯನ್ಸ್ ಇಂಡಸ್ಟ್ರೀಸ್, ಒಎನ್ ಜಿಸಿ, ಮತ್ತು ಟಾಟಾ ಮೋಟಾರ್ಸ್ ಷೇರುಗಳು ಆರಂಭಿಕ ಹಂತದಲ್ಲಿ ಹಿನ್ನಡೆ ಅನುಭವಿಸಿದವು. ಮಧ್ಯವ ವರ್ಗದ ಷೇರುಗಳು ಉತ್ತಮ ಗಳಿಕೆ ಸಾಧಿಸಿದವು. ಸೋಮವಾರದಿಂದ ಮಾರುಕಟ್ಟೆ ಏರಿಕೆ ಹಾದಿಯಲ್ಲೇ ಸಾಗುತ್ತಿರುವುದು ವಿಶೇಷ.


Click it and Unblock the Notifications