ನೆಲಕಚ್ಚಿದ ಮಾರನ್ ಒಡೆತನದ ಸನ್ ಟಿವಿ ಷೇರು

ಮುಂಬೈ, ಜ.22: ಸನ್ ಟಿವಿ ಸಮೂಹಕ್ಕೆ ಲಾಭ ತಂದುಕೊಟ್ಟ ಡೀಲ್ ಗೆ ಸಂಬಂಧಿಸಿದಂತೆ ಮಾರನ್ ಅವರ ಆಪ್ತ ಬಳಗದ ಪೈಕಿ ಇಬ್ಬರನ್ನು ಸಿಬಿಐ ವಿಚಾರಣೆಗೆ ಒಳಪಡಿಸುವ ಸುದ್ದಿ ಷೇರುಪೇಟೆಯಲ್ಲೂ ಸಂಚಲನ ಮೂಡಿಸಿದೆ. ಗುರುವಾರ ಬಹುತೇಕ ಸನ್ ನೆಟ್ವರ್ಕ್ ಷೇರುಗಳು ಅಧೋಮುಖ ಮಾಡಿಕೊಂಡಿತ್ತು.

ದಯಾನಿಧಿ ಮಾರನ್ ಅವರ ಮಾಜಿ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಗೌತಮನ್ ಹಾಗೂ ಸನ್ ಟಿವಿಯ ಮುಖ್ಯ ತಾಂತ್ರಿಕ ಅಧಿಕಾರಿ ಎಸ್ ಕಮ್ಮಂ ಮತ್ತು ಸನ್ ಟಿವಿ ಚಾನೆಲ್ ಎಲೆಕ್ಟ್ರಿಷಿಯನ್ ಕೆಎಸ್ ರವಿ ಅವರು ವಿಚಾರಣೆ ಭೀತಿ ಎದುರಿಸುತ್ತಿದ್ದಾರೆ. ಅಕ್ರಮವಾಗಿ ಟೆಲಿಫೋನ್ ವಿನಿಮಯ ಕೇಂದ್ರ ಸ್ಥಾಪನೆ, ದುರ್ಬಳಕೆ ಆರೋಪ ಇವರ ಮೇಲಿದೆ. [ದಯಾನಿಧಿ ಮಾರನ್ ಪರಮಾಪ್ತರಿಗೆ ಸಿಬಿಐ ಹೊಡೆತ]

ಗುರುವಾರ ಸೆನ್ಸೆಕ್ಸ್ 29,000 ಅಂಶಗಳಷ್ಟು ಮೇಲೇರಿದ್ದರೆ, ಬಿಎಸ್ ಇನಲ್ಲಿ ಸನ್ ಟಿವಿ ನೆಟ್ವರ್ಕ್ ಷೇರುಗಳು ಶೇ 9.54ರಷ್ಟು ಕಳೆದುಕೊಂಡು 372.70 ರು ಗೆ ಕುಸಿದಿತ್ತು. ಎನ್ಎಸ್ ಇನಲ್ಲೂ ಶೇ 9.89ರಷ್ಟು ಇಳಿಮುಖ ಕಂಡು 371.55 ರುಗೆ ಕುಸಿಯಿತು.

ನೆಲಕಚ್ಚಿದ ಮಾರನ್ ಒಡೆತನದ ಸನ್ ಟಿವಿ ಷೇರು

ದಿನದ ಅಂತ್ಯಕ್ಕೆ ಸನ್ ಟಿವಿ ಸ್ವಲ್ಪ ಚೇತರಿಕೆ ಕಂಡುಕೊಂಡರೂ ಬಿಎಸ್ ಇನಲ್ಲಿ ಶೇ 4.84ರಷ್ಟು ಕುಸಿತ ಕಂಡು 392.10 ರು ಹಾಗೂ ಎನ್ ಎಸ್ ಇನಲ್ಲಿ ಶೇ 5.06ರಷ್ಟು ಇಳಿಮುಖವಾಗಿ 391.50 ರುಗೆ ಕುಸಿದಿದೆ.

ಚೆನ್ನೈನ ತಮ್ಮ ನಿವಾಸಕ್ಕೆ ಅಕ್ರಮವಾಗಿ 300 ದೂರವಾಣಿ ಸಂಪರ್ಕ ಪಡೆದು ನಂತರ ಸೋದರ ಕಲಾನಿಧಿ ಮಾರನ್ ಒಡೆತನದ ಸನ್ ನೆಟ್ವರ್ಕ್ ಕಚೇರಿಗೆ ನೀಡಲಾಗಿತ್ತು ಎಂಬ ಆರೋಪ ಮಾರನ್ ಸೋದರರು ಹೊತ್ತಿದ್ದರು. ಇದರ ಜೊತೆಗೆ ಏರ್ ಸೆಲ್ ಹಾಗೂ ಮಾಕ್ಸಿಸ್ ಒಪ್ಪಂದ, 2ಜಿ ಹಗರಣ, ಟೆಲಿಕಾಂ ನಿಯಮ ಉಲ್ಲಂಘನೆ ಮುಂತಾದ ಆರೋಪಗಳು ಮಾರನ್ ವಿರುದ್ಧ ಕೇಳಿ ಬಂದಿದೆ. (ಗುಡ್ ರಿಟರ್ನ್ಸ್.ಇನ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+