ಮುಂಬೈ, ಜೂ. 08: ಕೇಂದ್ರ ಗೃಹ ಸಚಿವಾಲಯದಿಂದ ಭದ್ರತಾ ಅನುಮತಿ ಪಡೆಯುವಲ್ಲಿ ವಿಫಲವಾಗಿರುವ ಸನ್ ನೆಟ್ವರ್ಕ್ ಸಂಸ್ಥೆಗೆ ಈಗ ಲೈಸನ್ಸ್ ರದ್ದಾಗುವ ಭೀತಿಯೂ ಎದುರಾಗಿದೆ. ಸನ್ ಟಿವಿ ಷೇರುಗಳು ಸೋಮವಾರ (ಜೂ. 8) ಭಾರಿ ಕುಸಿತ ಕಂಡಿದೆ.
ಸೋಮವಾರ ಬೆಳಗ್ಗೆ 320.75 ರು ಬೆಲೆಯಂತೆ ಬಿಎಸ್ ಇನಲ್ಲಿ ವಹಿವಾಟು ಆರಂಭಿಸಿದ ಸನ್ ಟಿವಿ ಷೇರುಗಳು ಮಧ್ಯಾಹ್ನ 12.15 ರ ಸುಮಾರಿಗೆ ಶೇ 25.16ರಷ್ಟು ಕುಸಿತ ಕಂಡು 266.70 ರು (89.65 ರು ನಷ್ಟ) ನಷ್ಟಿದೆ. ಇದೇ ವೇಳೆ ಎನ್ ಎಸ್ ಇ ನಲ್ಲಿ 266.65 ರು ನಂತೆ ಶೇ 25.18ರಷ್ಟು ಕುಸಿತ ಕಂಡಿದೆ. [ಸಚಿವ ಅರುಣ್ ಜೇಟ್ಲಿ ಕೈಲಿ ಸನ್ ಟಿವಿ ಭವಿಷ್ಯ?]

ಮಾರನ್ ಬ್ರದರ್ಸ್ ಒಡೆತನ ಸನ್ ಟಿವಿ ಸೇರಿದಂತೆ 33 ಟಿವಿ ಚಾನೆಲ್ ಹಾಗೂ 45ಕ್ಕೂ ಅಧಿಕ ಎಫ್ ಎಂ ವಾಹಿನಿಗಳ ಭವಿಷ್ಯ ತೂಗೂಯಾಲ್ಯೆಯಾಡುತ್ತಿದೆ. ಭಾರತದ ಅತಿದೊಡ್ಡ ಟಿವಿ ಜಾಲ ಹೊಂದಿರುವ ಸಂಸ್ಥೆಗಳ ಪೈಕಿ ಸನ್ ನೆಟ್‍ವರ್ಕ್ ಕೂಡಾ ಒಂದಾಗಿದೆ. ಸುಮಾರು 95 ದಶಲಕ್ಷಕ್ಕೂ ಅಧಿಕ ಮನೆಗಳನ್ನು ತಲುಪುತ್ತಿದೆ.
ಭ್ರಷ್ಟಾಚಾರ, ಮನಿ ಲಾಂಡ್ರಿಂಗ್ ಹಾಗೂ ಅಕ್ರಮವಾಗಿ ಟೆಲಿಕಾಂ ಸಂಪರ್ಕ ಹೊಂದಿದ ಆರೋಪ ಇರುವುದರಿಂದ ಸನ್ ನೆಟ್ವರ್ಕ್ ಸಲ್ಲಿಸಿದ ಲೈಸನ್ ನವೀಕರಣ ಅರ್ಜಿ ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವಾಲಯ ಸ್ಪಷ್ಟವಾಗಿ ಹೇಳಿದ್ದು, ಲೈಸನ್ಸ್ ರದ್ದುಪಡಿಸುವ ಬಗ್ಗೆ ನಿರ್ಧರಿಸುವಂತೆ ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಕೋರಿದೆ. [ಸನ್ ನೆಟ್ವರ್ಕ್ 33 ಟಿವಿ ವಾಹಿನಿ, 45 ಎಫ್ ಎಂ ಬಂದ್]
ಈಗ ವಾರ್ತಾ ಮತ್ತು ಪ್ರಸಾರ ಸಚಿವ ಅರುಣ್ ಜೇಟ್ಲಿ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯ ಪ್ರವೇಶದಿಂದ ಮಾತ್ರ ಸನ್ ಟಿವಿ ಪ್ರಸಾರ ಎಲ್ಲೆಡೆ ಸರಾಗವಾಗಿ ಸಾಗಬಹುದಾಗಿದೆ. ಇಲ್ಲದಿದ್ದರೆ, ಸನ್ ಟಿವಿ ಜಾಲ ಬಂದ್ ಆಗಲಿದೆ, ಸನ್ ಟಿವಿ ಷೇರುದಾರರಿಗೆ ಕಷ್ಟದ ದಿನಗಳು ಶುರುವಾಗಲಿದೆ. (ಪಿಟಿಐ)


Click it and Unblock the Notifications