ಮುಂಬೈ, ಜುಲೈ 27: ಮಾರನ್ ಬ್ರದರ್ಸ್ ಒಡೆತನದ ಸನ್ ನೆಟ್ವರ್ಕ್ಸ್ ಸಂಸ್ಥೆ ಷೇರು ಹೊಂದಿರುವವರಿಗೆ ಶುಭ ಸುದ್ದಿ ಸಿಕ್ಕಿದೆ. ಎಫ್ ಎಂ ರೇಡಿಯೋ ವಾಹಿನಿಗಾಗಿ ನಡೆಯುವ ಇ ಹರಾಜಿನಲ್ಲಿ ಸನ್ ನೆಟ್ವರ್ಕ್ ಪಾಲ್ಗೊಳ್ಳಲು ಅನುಮತಿ ಸಿಕ್ಕ ಬೆನ್ನಲ್ಲೇ ಷೇರುಪೇಟೆಯಲ್ಲಿ ಸೋಮವಾರ ಸಂಸ್ಥೆಯ ಷೇರುಗಳು ಭರ್ಜರಿ ಜಿಗಿತ ಕಂಡಿದೆ.
ಸನ್ ನೆಟ್ವರ್ಕ್ ಗೆ ಸೇರಿದ 33 ಟಿವಿ ಚಾನೆಲ್ ಹಾಗೂ 45 ಎಫ್ ಎಂ ವಾಹಿನಿಗಳಿಗೆ ಭದ್ರತಾ ಅನುಮತಿ ನೀಡಲು ಗೃಹ ಸಚಿವಾಲಯ ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.. ಸನ್ ನೆಟ್ವರ್ಕ್ ಸಂಸ್ಥೆ ಪರವಾನಗಿ ರದ್ದು, ಪ್ರಸಾರ ಸ್ಥಗಿತದ ಭೀತಿ ಎದುರಿಸುತ್ತಿದೆ. [ಸನ್ ನೆಟ್ವರ್ಕ್ 33 ಟಿವಿ ವಾಹಿನಿ, 45 ಎಫ್ ಎಂ ಬಂದ್?]
ಭಾರತದ ಅತಿದೊಡ್ಡ ಟಿವಿ ಜಾಲ ಹೊಂದಿರುವ ಸಂಸ್ಥೆಗಳ ಪೈಕಿ ಸನ್ ನೆಟ್‍ವರ್ಕ್ ಕೂಡಾ ಒಂದಾಗಿದೆ. ಸುಮಾರು 95 ದಶಲಕ್ಷಕ್ಕೂ ಅಧಿಕ ಮನೆಗಳನ್ನು ತಲುಪುತ್ತಿರುವ ಮಾರನ್ ಸೋದರರ ಸನ್ ನೆಟ್ವರ್ಕ್ ಇತ್ತೀಚೆಗೆ ತಮ್ಮ ಟಿವಿ ಚಾನೆಲ್ ಹಾಗೂ ಎಫ್ ಎಂ ವಾಹಿನಿಗಳ ಭದ್ರತಾ ಪರವಾನಗಿ ನವೀಕರಣ ಅರ್ಜಿ ಸಲ್ಲಿಸಿತ್ತು. ಅದರೆ, ಆರ್ಥಿಕ ಸುರಕ್ಷತಾ ನಿಯಮಗಳನ್ನು ಪಾಲಿಸುವಲ್ಲಿ ಕಲಾನಿಧಿ ಮಾರನ್ ಅವರ ಸಂಸ್ಥೆ ವಿಫಲವಾಗಿರುವುದರಿಂದ ಲೈಸನ್ಸ್ ನವೀಕರಣವಾಗಿರಲಿಲ್ಲ.

ಹರಾಜಿನಲ್ಲಿ ಪಾಲ್ಗೊಳ್ಳಲು ಅನುಮತಿ: ಸನ್ ನೆಟ್ವರ್ಕ್ ಒಡೆತನದ 33ಕ್ಕೂ ಅಧಿಕ ಟಿವಿ ಚಾನೆಲ್ ಗಳು ಹಾಗೂ 45ಕ್ಕೂ ಅಧಿಕ ಎಫ್ ಎಂ ಚಾನೆಲ್, ಸೂರ್ಯನ್ ಎಫ್ ಎಂ ಹಾಗೂ ರೆಡ್ ಎಫ್ ಎಂ ಎಲ್ಲವೂ ಪ್ರಸಾರ ಸ್ಥಗಿತಗೊಳಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಸನ್ ನೆಟ್ವರ್ಕ್ ಇದೆ. ಅದರೆ, ಎಫ್ ಎಂ ವಾಹಿನಿ ಇ ಹರಾಜಿನಲ್ಲಿ ಪಾಲ್ಗೊಳ್ಳಲು ಅನುಮತಿ ಕೋರಿ ಮದ್ರಾಸ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು. [ಷೇರುಪೇಟೆಯಲ್ಲಿ ಸನ್ ಟಿವಿ ನೆಟ್ವರ್ಕ್ ಈ ದಿನ ವಹಿವಾಟು]
ಈ ಬಗ್ಗೆ ಆದೇಶ ನೀಡಿದ ಮದ್ರಾಸ್ ಹೈಕೋರ್ಟ್, ಮುಂದಿನ ಆದೇಶದ ತನಕ ಹರಾಜಿನ ಫಲಿತಾಂಶ ಗೌಪ್ಯವಾಗಿ ಮುಚ್ಚಿದ ಲಕೋಟೆಯಲ್ಲಿಡಬೇಕು ಎಂದು ಹೇಳಿತ್ತು. ನಂತರ ದೆಹಲಿ ಹೈಕೋರ್ಟ್ ರೆಡಿಯೋ ಎಫ್ ಎಂ ಇ ಹರಾಜು ಮೂರನೇ ಹಂತದಲ್ಲಿ ಪಾಲ್ಗೊಳ್ಳಲು ಯಾವುದೇ ಅಡ್ಡಿಯಿಲ್ಲ ಎಂದು ತೀರ್ಪು ನೀಡಿತು.
ಈ ಸುದ್ದಿ ಹೊರಬರುತ್ತಿದ್ದಂತೆ ಸನ್ ಟಿವಿ ಷೇರುಗಳು ಶೇ 7ರಷ್ಟು ಮೇಲಕ್ಕೇರಿತ್ತು. ಬಿಎಸ್ ಇಯಲ್ಲಿ ಸನ್ ಟಿವಿ ಷೇರುಗಳು ಸೋಮವಾರ ಬೆಳಗ್ಗೆ 295.00 ರು ಮುಖಬೆಲೆಯಂತೆ ಆರಂಭವಾಗಿ 12.70 ರು ನಂತೆ ಶೇ 4.54 ರಷ್ಟು ಏರಿಕೆ ಕಂಡಿತು. ಇದೇ ವೇಳೆ ಎನ್ ಎಸ್ ಇನಲ್ಲಿ 295 ರು ನಂತೆ ವಹಿವಾಟು ನಡೆಸಿ 292.35 ರು ನಂತೆ ಶೇ 4.52 ರಷ್ಟು ಏರಿಕೆ ಕಂಡು 12.65 ರು ನಷ್ಟು ಮೇಲಕ್ಕೇರಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications