ಮುಂಬೈ, ನ.02: ಕರ್ನಾಟಕದ ಮೂಲದ ದೇಶದ ಪ್ರಮುಖ ಕಾಫಿ ಉತ್ಪಾದನಾ ಸಂಸ್ಥೆ ಕಾಫಿ ಡೇ ಸಂಸ್ಥೆ ಸೋಮವಾರ ಅಧಿಕೃತವಾಗಿ ಷೇರುಪೇಟೆಗೆ ಎಂಟ್ರಿ ಕೊಟ್ಟಿದೆ. ಅದರೆ, ಷೇರುದಾರರಿಗೆ ಪ್ರಥಮ ಚುಂಬನದಲ್ಲೇ ಕಾಫಿ ಡೇ ಕಾಫಿ ಕಹಿಯಾಗಿದೆ. ಐಪಿಒ ಬೆಲೆಗಿಂತ ಕಡಿಮೆ ಬೆಲೆಗೆ ಲಿಸ್ಟಿಂಗ್ ಸೇರಿದರೂ ಕಾಫಿ ಡೇ ಷೇರುಗಳು ನೆಲಕಚ್ಚಿವೆ.
ಕರ್ನಾಟಕದ ಚಿಕ್ಕಮಗಳೂರಿನ ವಿ.ಜಿ ಸಿದ್ದಾರ್ಥ ಅವರ ಒಡೆತನದ ಕೆಫೆ ಕಾಫಿ ಡೇ ಸಂಸ್ಥೆ ಇತ್ತೀಚೆಗೆ ಐಪಿಒ ಬಿಡುಗಡೆ ಮಾಡಿ ಸುಮಾರು 334 ಕೋಟಿ ರು ಗಳಿಸಿತ್ತು.
ಅದರೆ, ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ (ಬಿಎಸ್ ಇ) ಹಾಗೂ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್(ಎನ್ ಎಸ್ ಇ) ಪಟ್ಟಿಯಲ್ಲಿ ಸೋಮವಾರ ಮೊದಲ ಬಾರಿಗೆ ಕಾಣಿಸಿಕೊಂಡ ಕಾಫಿ ಡೇಗೆ ಶುಭ ಸುದ್ದಿ ಸಿಗಲಿಲ್ಲ. ಷೇರುಗಳ ಮುಖಬೆಲೆ 328 ರು ಗಿಂತ ಕಡಿಮೆ ಮೊತ್ತಕ್ಕೆ ಲಿಸ್ಟಿಂಗ್ ಆಗಿದ್ದಲ್ಲದೆ, ಶೇ 17ರಷ್ಟು ಕುಸಿತ ಕಂಡಿದೆ.

ಬಿಎಸ್ ಇ ನಲ್ಲಿ 313 ರು ಗೆ ಲಿಸ್ಟಿಂಗ್ ಆಗಿದ್ದ ಸಿಸಿಡಿ ಷೇರುಗಳು ಮಧ್ಯಾಹ್ನದ ವೇಳೆಗೆ 270.90 ರು ಗೆ ಕುಸಿತ ಕಂಡು ಶೇ 17.4ರಷ್ಟು ಇಳಿಮುಖವಾಯಿತು.
ಇದೇ ವೇಳೆ ಎನ್ ಎಸ್ ಇನಲ್ಲಿ 317ರು ನಂತೆ ಎಂಟ್ರಿ ಪಡೆದ ಷೇರುಗಳು ಆರಂಭದಲ್ಲಿ ಶೇ 3.35ರಂತೆ ಕುಸಿತ ಕಂಡು ನಂತರ ಇಂಟ್ರಾ ಡೇನಲ್ಲಿ ಶೇ 16.95ರಂತೆ 272.40 ರು ಗೆ ಕುಸಿದಿದೆ. ಕೆಫಿ ಕಾಫಿ ಡೇ ಸಂಸ್ಥೆಯ ಮಾರುಕಟ್ಟೆ ಮೌಲ್ಯ 5,588 ಕೋಟಿ ರು ನಷ್ಟಿದೆ.
ಕಳೆದ ತಿಂಗಳು ಸಿಸಿಡಿ ಐಪಿಒ 316-328 ಪ್ರತಿ ಷೇರಿನಂತೆ ಮಾರುಕಟ್ಟೆಗೆ ಬಿಡಲಾಗಿತ್ತು. 1,150 ಕೋಟಿ ರು ಸಂಗ್ರಹ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. 334 ಕೋಟಿ ರು ಹೂಡಿಕೆದಾರರು ಹಾಗೂ ಐಪಿಒ ರಿಲೀಸ್ ಗೂ ಮುನ್ನ 100 ಕೋಟಿ ರು (ನಂದನ್ ನಿಲೇಕಣಿ ಮತ್ತು ರೇರ್ ಎಂಟರ್ ಪ್ರೈಸಸ್ (ರಾಕೇಶ್ ಜುಂಜನ್ ವಾಲಾ ಮತ್ತು ರಮೇಶ್ ದಮಾನಿ ಒಡೆತನ) (ಒನ್ ಇಂಡಿಯಾ ಸುದ್ದಿ)


Click it and Unblock the Notifications