ಮುಂಬೈ, ನ.04: ವಿಜಯ್ ಮಲ್ಯ ಒಡೆತನದ ಯುನೈಟೆಡ್ ಸ್ಪಿರೀಟ್ಸ್ ಷೇರುಗಳನ್ನು ಹೊಂದಿರುವವರ ಮುಖದಲ್ಲಿ ಎಷ್ಟೋ ದಿನಗಳ ನಂತರ ಮಂದಹಾಸ ಮೂಡಿದೆ. ಯುನೈಟೆಡ್ ಸ್ಪಿರೀಟ್ಸ್ ಎರಡನೇ ತ್ರೈಮಾಸಿಕ ವರದಿ ಪ್ರಕಟಗೊಂಡ ನಂತರ ಸಂಸ್ಥೆಯ ಷೇರುಗಳು ಏರುತ್ತಲೇ ಇವೆ. ಸೋಮವಾರ ಹಾಗೂ ಮಂಗಳವಾರ ಸೇರಿದಂತೆ ಶೇ 8ರಷ್ಟು ಏರಿಕೆ ಕಂಡ ಷೇರುಗಳು ಸಕತ್ ಕಿಕ್ ನೀಡುತ್ತಿವೆ.
ಯುನೈಟೆಡ್ ಸ್ಪಿರೀಟ್ಸ್ ಸಂಸ್ಥೆ ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕ ವರದಿಯಲ್ಲಿ 929.3 ನಿವ್ವಳ ಲಾಭ ಗಳಿಸಿದೆ. ವರದಿ ಪ್ರಕಟವಾದ ಬಳಿಕ ಸೋಮವಾರದಂದು ಷೇರುಗಳು ಬಿಎಸ್ ಇನಲ್ಲಿ ಶೇ 7.68ರಂತೆ 3,499 ರುಗೆ ಏರಿಕೆ ಕಂಡಿತ್ತು. ಎನ್ ಎಸ್ ಇನಲ್ಲಿ ಶೇ 7358ರಂತೆ 3,499 ರು ಮುಟ್ಟಿತ್ತು.

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 2,122 ಕೋಟಿ ರು ನಿವ್ವಳ ಮಾರಾಟ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2,007 ಕೋಟಿ ರು ಮಾರಾಟ ಕಂಡಿತ್ತು.
ಮಂಗಳವಾರ ಕೂಡಾ ಯುನೈಟೆಡ್ ಸ್ಪಿರೀಟ್ಸ್ ಷೇರುಗಳು ಮೇಲ್ಮುಖವಾಗಿ ಚಲಿಸಿದೆ. ಮಧ್ಯಾಹ್ನ 2.33ರ ವೇಳೆಗೆ ಬಿಎಸ್ ಇನಲ್ಲಿ 3,450 ರು ನಂತೆ ಶೇ 0.52ರಷ್ಟು ಏರಿಕೆ ಕಂಡಿದ್ದರೆ, ಎನ್ ಎಸ್ ಇನಲ್ಲಿ 3,451 ರು ನಂತೆ ಶೇ 0.41ರಷ್ಟು ಏರಿಕೆ ಪಡೆದುಕೊಂಡಿದೆ.
ತ್ರೈಮಾಸಿಕ ವರದಿಯಿಂದ ಉತ್ತೇಜನಗೊಂಡಿರುವ ಯುನೈಟೆಡ್ ಸ್ಪಿರೀಟ್ಸ್ ಸಂಸ್ಥೆ ರಾಯಲ್ ಚಾಲೆಂಜ್ ಹಾಗೂ ಮೆಕ್ ಡೊವೆಲ್ ನಂ.1 ಮಾರುಕಟ್ಟೆಗೆ ಪುನರ್ ಪ್ರವೇಶಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ಸಿಇಒ ಆನಂದ್ ಕೃಪಾಳು ಹೇಳಿದ್ದಾರೆ. (ಗುಡ್ ರಿಟರ್ನ್ಸ್.ಇನ್)


Click it and Unblock the Notifications