For Quick Alerts
ALLOW NOTIFICATIONS  
For Daily Alerts

ರಾಜ್ಯ ಬಜೆಟ್: ಸಿದ್ದರಾಮಯ್ಯ ತೆರಿಗೆ ನೀತಿ ಪೂರ್ಣ ಮಾಹಿತಿ

|

ಬೆಂಗಳೂರು, ಮಾರ್ಚ್ , 18: ಕರ್ನಾಟಕದ ಬಜೆಟ್ ನನ್ನು ಸಿಎಂ ಸಿದ್ದರಾಮಯ್ಯ ಶುಕ್ರವಾರ ಮಂಡನೆ ಮಾಡಿದ್ದಾರೆ. ಹಲವು ವಸ್ತುಗಳ ಮೇಲೆ ತೆರಿಗೆ ಹೆಚ್ಚಳ ಮಾಡಿದ್ದರೆ ಇನ್ನು ಕೆಲವನ್ನು ಇಳಿಕೆ ಮಾಡಿದ್ದಾರೆ. ಯಾವುದರ ಮೇಲೆ ತೆರಿಗೆ ಏರಿಕೆ, ಯಾವುದಕ್ಕೆ ಇಳಿಕೆ, ತೆರಿಗೆ ನೀತಿಯಲ್ಲಿ ಮಾಡಿದ ಪ್ರಮುಖ ಬದಲಾವಣೆಗಳನ್ನು ಏನು ಎಂಬುದನ್ನು ನೋಡಿಕೊಂಡು ಬರೋಣ..

 

ಅಲ್ಲದೇ ಸರಿಯಾದುದಲ್ಲದ ಹಾಗೂ ಅಪೂರ್ಣ ರಿಟರ್ನ್‌ಗಳನ್ನು ಸಲ್ಲಿಸಿದ ವ್ಯಾಪಾರಿಗಳನ್ನೂ ಒಳಗೊಂಡು 2003ರ ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಅಧಿನಿಯಮದ ಅಡಿಯಲ್ಲಿ ಕರನಿರ್ಧರಣೆ ಮಾಡಲು ಪ್ರಕರಣ 38ಕ್ಕೆ ತಿದ್ದುಪಡಿಯನ್ನು ಮಾಡಲಾಗಿದೆ. ಸಿದ್ದರಾಮಯ್ಯ ಮಾಡಿದ ತೆರಿಗೆ ಹೆಚ್ಚಳ, ತೆರಿಗೆ ಇಳಿಕೆ ಮತ್ತು ನಿಯಮಾವಳಿಗಳ ಬದಲಾವಣೆಯನ್ನು ಸಂಪೂರ್ಣವಾಗಿ ನೋಡಿಕೊಂಡು ಬರೋಣ...[ಸಿದ್ದರಾಮಯ್ಯ ಬಜೆಟ್: ಯಾವುದು ಏರಿಕೆ? ಯಾವುದು ಇಳಿಕೆ?]

 
ರಾಜ್ಯ ಬಜೆಟ್: ಸಿದ್ದರಾಮಯ್ಯ ತೆರಿಗೆ ನೀತಿ ಪೂರ್ಣ ಮಾಹಿತಿ

* ಖರೀದಿ ಮತ್ತು ಮಾರಾಟ ವಿವರಗಳ ಪಟ್ಟಿಯನ್ನು ಶಾಸನ ಬದ್ಧವಾಗಿ ಸಲ್ಲಿಸದೇ ಇರುವ ವರ್ತಕರಿಗೆ ಹೂಡುವಳಿ ತೆರಿಗೆಯನ್ನು ನಿರಾಕರಿಸಿ ಕರನಿರ್ಧರಣೆ ಮಾಡಲು 2003 ರ ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಅಧಿನಿಯಮದ ಪ್ರಕರಣ 10 ಕ್ಕೆ ತಿದ್ದುಪಡಿ.

* ನಮೂನೆ ವ್ಯಾಟ್-240 ನ್ನು ವಿದ್ಯುನ್ಮಾನ ವಿಧಾನದಲ್ಲಿ ಸಲ್ಲಿಸಲು ಉಪಬಂಧವನ್ನು ಕಲ್ಪಿಸಲು ಹಾಗೂ ಸಲ್ಲಿಸದೇ ಇದ್ದಲ್ಲಿ ದಂಡವನ್ನು[ಕೇಂದ್ರ ಬಜೆಟ್ 2016: ಯಾವುದು ಅಗ್ಗ? ಯಾವುದು ತುಟ್ಟಿ?]

ವಿಧಿಸಲು 2003 ರ ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಅಧಿನಿಯಮಕ್ಕೆ ತಿದ್ದುಪಡಿ.

* ರಿಟರ್ನ್‌ಗಳನ್ನು ಸಲ್ಲಿಸಿದಾಗ ಶೇ.5 ಕ್ಕಿಂತ ಹೆಚ್ಚಿನ ತೆರಿಗೆ ಬಾಧ್ಯತೆ ಇರುವ ಸಂದರ್ಭಗಳಲ್ಲಿ ದಂಡವನ್ನು ವಿಧಿಸಲು 2003 ರ ಕರ್ನಾಟಕ

ಮೌಲ್ಯವರ್ಧಿತ ತೆರಿಗೆ ಅಧಿನಿಯಮದ ಪ್ರಕರಣ 37 ಕ್ಕೆ ತಿದ್ದುಪಡಿ

* ಏಪ್ರಿಲ್, 1, 2016 ರಿಂದ ಎಲ್ಲಾ ತೋಟದ ಬೆಳೆಗಳ ಮೇಲಿನ ಕೃಷಿ ವರಮಾನ ತೆರಿಗೆ ರದ್ದು.

* ಸಿಗರೇಟುಗಳ 'ಸಿ' ನಮೂನೆ ಆಧಾರದ ಅಂತರರಾಜ್ಯ ಮಾರಾಟದ ವಹಿವಾಟುಗಳಿಗೆ ಸಂಬಂಧಿಸಿದ ಸಿಗರೇಟುಗಳ ಖರೀದಿಯ ಮೇಲೆ

ಪಾವತಿಸಿದ ಶೇ. 2ಕ್ಕಿಂತ ಹೆಚ್ಚಿನ ದರದ ಹೂಡುವಳಿ ತೆರಿಗೆಯ ನಿರ್ಬಂಧ.

* ವೃತ್ತಿ ತೆರಿಗೆ ಕಾನೂನ್ನು ಸರಳಗೊಳಿಸಲು ಇವುಗಳನ್ನು ಅಭ್ಯಾಸ ಮಾಡಿ ವರದಿಯನ್ನು ನೀಡಲು ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರ

ನೇತೃತ್ವದಲ್ಲಿ ಒಂದು ಸಮಿತಿಯ ರಚನೆ.

* ನೋಂದಣಿ ಪ್ರಮಾಣ ಪತ್ರವನ್ನು 3 ದಿನಗಳ ಒಳಗಾಗಿ ನೀಡಲು ಪ್ರಕರಣ 5ಕ್ಕೆ ತಿದ್ದುಪಡಿ.

* ಪ್ರಥಮ ಮನವಿ ಪ್ರಾಧಿಕಾರ ಮತ್ತು ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣದಿಂದ ತಡೆಯಾಜ್ಞೆ ಪಡೆಯಲು ವಿವಾದಿತ ತೆರಿಗೆ ಮತ್ತು ಇತರೆ ಮೊತ್ತಗಳ ಕಡ್ಡಾಯ ಪಾವತಿಯನ್ನು ಶೇ.30ಕ್ಕೆ ಇಳಿಕೆ ಹಾಗೂ ಪ್ರಥಮ ಮನವಿ ಪ್ರಾಧಿಕಾರಕ್ಕೆ ವಿದ್ಯುನ್ಮಾನ ವಿಧಾನದಲ್ಲಿ ಮನವಿಗಳನ್ನು ಸಲ್ಲಿಸಲು ವ್ಯಾಪಾರಿಗಳಿಗೆ ಸೌಲಭ್ಯ.

English summary

Karnataka budget 2016-17 : Siddaramaiah Tax policy

Karnataka Budget 2016-17 : Chief Minister and Finance Minister Siddaramaiah presented 2016-17 Karnataka budget on Friday, March 18, 2016.
Story first published: Friday, March 18, 2016, 17:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X