ನವದೆಹಲಿ, ಏಪ್ರಿಲ್ 02: ಆದಾಯ ತೆರಿಗೆ ಇಲಾಖೆಯ 2016-17ನೇ ಮೌಲ್ಯ ವರ್ಷಕ್ಕಾಗಿ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಫಾರ್ಮ್‌ಗಳ ಹೊಸ ಸೆಟ್ ಇರುವ ಅಧಿಸೂಚನೆ ಹೊರಡಿಸಿದೆ. ವಾರ್ಷಿಕ 50 ಲಕ್ಷ ರೂ.ಗಳಿಗಿಂತ ಹೆಚ್ಚು ಆದಾಯ ಇರುವವರು ಹಾಗೂ ಯಾಚ್, ವಿಮಾನ ಅಥವಾ ಬೆಲೆ ಬಾಳುವ ಆಭರಣಗಳನ್ನು ಹೊಂದಿರುವವರು ಇನ್ಮುಂದೆ ದುಬಾರಿ ಆಸ್ತಿಗಳನ್ನು ಘೋಷಿಸಬೇಕಾಗುತ್ತದೆ.
ಶುಕ್ರವಾರ(ಏಪ್ರಿಲ್ 01) ದಿಂದ ಹೊಸ ಆರ್ಥಿಕ ವರ್ಷ ಆರಂಭವಾಗಿದೆ. ಹೊಸ ಫಾರ್ಮ್‌ಗಳ ದಾಖಲಿಸುವಿಕೆ ಆರಂಭವಾಗುತ್ತದೆ. ವಿತ್ತ ಸಚಿವಾಲಯವು ಈ ಸಂಬಂಧ ಗಜೆಟ್ ಆದೇಶವನ್ನು ಪ್ರಕಟಿಸಲಾಗಿದೆ. ತೆರಿಗೆದಾರರು ತಮ್ಮ ಐಟಿಆರ್‌ಗಳನ್ನು ಜು.31ರಂದು ನಿಗದಿತ ಗಡುವಿನೊಳಗೆ ಸಲ್ಲಿಸಬಹುದು. [ಆದಾಯ ತೆರಿಗೆ ಪಾವತಿ ಮಾರ್ಗದರ್ಶಿ]
ಇಲಾಖೆಯು ಹೊಸ ಐಟಿಆರ್‌ಗಳಲ್ಲಿ (ಐಟಿಆರ್-2 ಹಾಗೂ 2ಎ), ವರ್ಷಾಂತ್ಯದಲ್ಲಿ ಆಸ್ತಿ ಮತ್ತು ಜವಾಬ್ದಾರಿಗಳು ಎಂಬ ಹೊಸದಾದ ಅಂಕಣವನ್ನು ಪರಿಚಯಿಸಿದೆ. ಇದು ವಾರ್ಷಿಕ ವರಮಾನ ರೂ.50 ಲಕ್ಷಕ್ಕಿಂತ ಹೆಚ್ಚು ಆದಾಯ ಇರುವವರಿಗೆ ಅನ್ವಯವಾಗುತ್ತದೆ. ಈ ಆದಾಯ ವ್ಯಾಪ್ತಿಗೆ ಬರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಅಂಥ ಆಸ್ತಿಗಳ ಒಟ್ಟು ವೌಲ್ಯವನ್ನು ನಮೂದಿಸ ಬೇಕಾಗುತ್ತದೆ.[ಆದಾಯ ತೆರಿಗೆ ದರ, ಮಿತಿ, ಸಂಪೂರ್ಣ ವಿವರ]

ಕಟ್ಟಡ, ನಿವೇಶನ, ಸ್ಥಿರಾಸ್ತಿಗಳನ್ನು ಹೊಸ ಐಟಿಆರ್ ನಿಯಮದನ್ವಯ ದಾಖಲಿಸಬೇಕಾಗಿದೆ. ನಗದು, ಆಭರಣಗಳು, ಚಿನ್ನ, ವಾಹನಗಳು, ಯಾಚ್‌ಗಳು, ದೋಣಿಗಳು ಹಾಗೂ ವಿಮಾನಗಳಂಥ ಚರ ಆಸ್ತಿಯನ್ನೂ ಆದಾಯ ತೆರಿಗೆ ಇಲಾಖೆಗೆ ಬಹಿರಂಗ ಪಡಿಸಬೇಕಾಗಿದೆ.[ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಕೆಗೆ 6 ಉತ್ತಮ ವೆಬ್ ತಾಣಗಳು]
ಈ ದುಬಾರಿ ಆಸ್ತಿಗಳನ್ನು ವರದಿ ಮಾಡುವ ಸಂಸ್ಥೆಗಳು, ಈ ವಸ್ತುಗಳೊಂದಿಗೆ ಅವುಗಳಿಗಿರುವ 'ಬಾಧ್ಯತಾ ಸಂಬಂಧಗಳನ್ನು' ವಿವರಿಸ ಬೇಕಾಗುವುದು.
ಸರಕಾರದ ಮಹತ್ತ್ವಾಕಾಂಕ್ಷಿ ಸ್ಟಾರ್ಟ್ ಅಪ್ ವ್ಯವಹಾರ ಉತ್ತೇಜನ ಯೋಜನೆಯ ಸ್ಫೂರ್ತಿಯಲ್ಲಿ, ಐಟಿಆರ್‌ಗಳು ಮೊದಲ ಬಾರಿಗೆ ವಲಯದ ಆದಾಯವನ್ನು ದಾಖಲಿಸಲು ಪ್ರತ್ಯೇಕ ಕಾಲಂ ಇದೆ.[ತೆರಿಗೆ ಪಾವತಿ ವೇಳೆ ತಪ್ಪಾದರೆ ಮತ್ತೆ ರಿಟರ್ನ್ಸ್ ಸಾಧ್ಯವೇ?]
ಪಾಸ್ ಥ್ರೂ ಇನ್‌ಕಂ: ವ್ಯಾಪಾರಿ, ವೃತ್ತಿ ಅಥವಾ ಬಂಡವಾಳ ಲಾಭಗಳಿಂದ ಆದಾಯ ಇಲ್ಲದ ಹಾಗೂ ವಿದೇಶಗಳಲ್ಲಿ ಆಸ್ತಿ ಹೊಂದಿರದ ವ್ಯಕ್ತಿಗಳು ಅಥವಾ ಎಚ್‌ಯುಎಫ್‌ಗಳು ತುಂಬಿಸಬೇಕಾದ ಐಟಿಆರ್-2ಎಯಲ್ಲಿ 'ಪಾಸ್ ಥ್ರೂ ಇನ್‌ಕಂ' ಎಂಬ ಹೊಸ ಅಂಕಣವಿರುತ್ತದೆ.
ಅದು, ಅಭಿವೃದ್ಧಿ ಹೊಂದುತ್ತಿರುವ ಕಂಪೆನಿಗಳು ಹಾಗೂ ಸ್ಟಾರ್ಟಪ್ ಸಂಸ್ಥೆಗಳಿಗೆ ಸಂಬಂಧಿಸಿದೆ. ಆದಾಯ ತೆರಿಗೆ ಕಾಯ್ದೆಯ 115ಯುಎ ಹಾಗೂ 115 ಯುಬಿ ಸೆಕ್ಷನ್‌ಗಳನ್ವಯ ವ್ಯಾಪಾರ ಟ್ರಸ್ಟ್ ಅಥವಾ ಹೂಡಿಕೆ ನಿಧಿಯ ವಿವಿರಗಳನ್ನು ನೀಡಬೇಕಾಗುತ್ತದೆ.
ವೇತನ, ಒಂದು ಮನೆಯ ಆಸ್ತಿ ಅಥವಾ ಇತರ ಮೂಲಗಳಿಂದ ಆದಾಯ ಪಡೆಯುವವರಿಗಾಗಿರುವ ಅತ್ಯಂತ ಸರಳ ಐಟಿಆರ್-1ರಲ್ಲೀಗ ತೆರಿಗೆ ಕಡಿತವನ್ನು ನಮೂದಿಸುವ ಹೆಚ್ಚುವರಿ ಅಂಕಣವಿರುತ್ತದೆ. ಹಿಂದಿನ ಫಾರ್ಮ್‌ನಲ್ಲಿ 5 ಪುಟಗಳಿದ್ದರೆ ಹೊಸದರಲ್ಲಿ 7 ಪುಟಗಳಿರುತ್ತವೆ. (ಪಿಟಿಐ)


Click it and Unblock the Notifications