ಸಿಮ್ ಪಡೆಯಲು ಇ-ಆಧಾರ್ ಕಾರ್ಡ್ ಬೇಕು

ಇನ್ನು ಮುಂದೆ ಗ್ರಾಹಕರು ಹೊಸ ಸಿಮ್ ಕಾರ್ಡ್ ಪಡೆಯಲು ಆಧಾರ್ ಕಾರ್ಡ್ ಪ್ರತಿಯನ್ನು ಅಥವಾ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಜಾಲತಾಣದಿಂದ ಡೌನ್ ಲೋಡ್ ಮಾಡಿಕೊಂಡ ಇ-ಆಧಾರ್ ಕಾರ್ಡ್ ದಾಖಲೆ ನೀಡಿದರೆ ಸಾಕು.

ಮೊಬೈಲ್ ಸಂಪರ್ಕಕ್ಕೆ ಇ-ಆಧಾರ್ ಕಾರ್ಡ್ ದಾಖಲೆ ಕಡ್ಡಾಯಗೊಳಿಸುವುದು ಭದ್ರತೆ ದೃಷ್ಟಿಯಿಂದ ತುಂಬಾ ಮುಖ್ಯ. ಗ್ರಾಹಕರ ಗುರುತು ಮತ್ತು ವಿಳಾಸದ ಅಧಿಕೃತ ಮಾಹಿತಿಯಾಗಿ ಆಧಾರ್ ಪರಿಗಣಿಸಬಹುದು ಎಂದು ದೂರ ಸಂಪರ್ಕ ಇಲಾಖೆ ಸ್ಪಷ್ಟಪಡಿಸಿದೆ.

ಆದರೆ ಗ್ರಾಹಕ ಸಲ್ಲಿಸಿದ ಇ-ಆಧಾರ್ ಕಾರ್ಡ್ ದಾಖಲೆಯಲ್ಲಿರುವ ಹೆಸರು, ವಿಳಾಸ, ಜನ್ಮದಿನ, ಲಿಂಗ, ಊರು ಸೇರಿದಂತೆ ಇನ್ನೀತರ ಮಾಹಿತಿಗೂ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಜಾಲತಾಣದಲ್ಲಿರುವ ಮಾಹಿತಿಗೂ ಪರಸ್ಪರ ತಾಳೆ ಆಗುತ್ತದೆಯೇ ಎಂದು ಪರೀಕ್ಷಿಸಿ ದೃಢಪಡಿಸಿಕೊಳ್ಳುವುದು ಮೊಬೈಲ್ ಸಿಮ್ ಮಾರಾಟಗಾರರ ಹೊಣೆಯಾಗಿರುತ್ತದೆ.

ಸಿಮ್ ಪಡೆಯಲು ಇ-ಆಧಾರ್ ಕಾರ್ಡ್ ಬೇಕು


ದೇಶದ ಭದ್ರತೆ ದೃಷ್ಟಿಯಿಂದಾಗಿ ಇದು ಮಹತ್ವದ ನಡೆಯಾಗಿದೆ. ಮೊಬೈಲ್ ಸಂಪರ್ಕಕ್ಕೆ ಇ-ಆಧಾರ್ ಕಾರ್ಡ್ ದಾಖಲೆ ಕಡ್ಡಾಯಗೊಳಿಸುವುದರಿಂದ ಅಪರಾಧಿಗಳು ಬಾಹ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದನ್ನು ತಡೆಗಟ್ಟಲು ಸಹಕಾರಿಯಾಗಬಹುದು. ಇದರಿಂದಾಗಿ ಇನ್ನೊಬ್ಬರ ಸಿಮ್ ಕಾರ್ಡ್ ದುರುಪಯೋಗ ಪಡಿಸುವ ಪ್ರಮಾಣವು ಕಡಿಮೆಯಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+