ವೈಯಕ್ತಿಕವಾಗಿ ತೆರಿಗೆ ಆಥವಾ ತೆರಿಗೆ ರಿಟರ್ನ್ಸ್ ಪಾವತಿಸುವಾಗ ಬಹುತೇಕ ಜನರಿಗೆ ಪ್ರಶ್ನೆಗಳು ಅಥವಾ ಗೊಂದಲಗಳು ಎದುರಾಗುತ್ತವೆ. ಏನೋ ಮಾಡಲು ಹೋಗಿ ಇನ್ನೆನೋ ಆಗಿಬಿಡುತ್ತದೆ. ಕೆಲವರಿಗೆ ಇದರ ಬಗ್ಗೆ ಸಾಮಾನ್ಯ ಮಾಹಿತಿಯೂ ಇರುವುದಿಲ್ಲ.
ವೈಯಕ್ತಿಕವಾಗಿ ತೆರಿಗೆ ಆಥವಾ ಆದಾಯ ತೆರಿಗೆ ರಿಟರ್ನ್ಸ್ ಪಾವತಿಸುವಾಗ ಬಹುತೇಕ ಜನರಿಗೆ ಪ್ರಶ್ನೆಗಳು ಅಥವಾ ಗೊಂದಲಗಳು ಎದುರಾಗುತ್ತವೆ. ಏನೋ ಮಾಡಲು ಹೋಗಿ ಇನ್ನೆನೋ ಆಗಿಬಿಡುತ್ತದೆ. ಕೆಲವರಿಗೆ ಇದರ ಬಗ್ಗೆ ಸಾಮಾನ್ಯ ಮಾಹಿತಿಯೂ ಇರುವುದಿಲ್ಲ. ತೆರಿಗೆಯನ್ನು ಎಲ್ಲಿ ಕಟ್ಟಬೇಕು? ಯಾರನ್ನು ಸಂಪರ್ಕಿಸಬೇಕು? ತೆರಿಗೆ ಪಾವತಿಸುವಾಗ ಅನುಸರಿಸುವ ಕ್ರಮಗಳೇನು? ತೆರಿಗೆ ಯಾವಾಗ ಕಟ್ಟಬೇಕು? ಕಟ್ಟದಿದ್ದರೆ ಏನಾಗುತ್ತದೆ? ಇತ್ಯಾದಿ ಮಾಹಿತಿಗಳ ಬಗ್ಗೆ ತುಂಬಾ ಗೊಂದಲ ಹಾಗೂ ಅನೇಕ ಪ್ರಶ್ನೆಗಳು ಇರುತ್ತವೆ.
ಈ ಎಲ್ಲ ಪ್ರಶ್ನೆಗಳನ್ನು/ಗೊಂದಲಗಳನ್ನು ಬಗೆಹರಿಸುವುದಕ್ಕಾಗಿ ಆದಾಯ ತೆರಿಗೆ ಇಲಾಖೆಯವರು ಸಹಾಯವಾಣಿಯನ್ನು ಪ್ರಾರಂಭಿಸಿದ್ದಾರೆ. ಈ ಸಹಾಯವಾಣಿಯ ಮುಖಾಂತರ ನಿಮ್ಮ ಎಲ್ಲ ಗೊಂದಲಗಳಿಗೆ/ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ತೆರಿಗೆ ಪಾವತಿಸುವಾಗ ನಿಮಗೆ ಎದುರಾಗುವ ಯಾವುದೇ ಪ್ರಶ್ನೆಗಳಿದ್ದಲ್ಲಿ ಅಥವಾ ಗೊಂದಲಗಳಿದ್ದಲ್ಲಿ ತಕ್ಷಣದಲ್ಲೆ ಪರಿಹಾರ ಸಿಗಲಿದೆ. ಅದಕ್ಕಾಗಿ ನೀವು ಈ ಕೆಳಗಿನ ಸಂಬಂಧಿಸಿದ ಸಹಾಯವಾಣಿಗಳಿಗೆ ಕರೆ ಮಾಡಿ ಸಮಸ್ಯೆಗಳನ್ನು ತಿಳಿಸಿದರೆ ಸಾಕು. ಪರಿಹಾರ ಲಭ್ಯ.
1. ಆಯಕರ್ ಸೇವಾ ಕೇಂದ್ರ (Aaykar Seva Kendra)
ತೆರಿಗೆ ಪಾವತಿಸುವವರ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಆಯಕರ್ ಸೇವಾ ಕೇಂದ್ರ ಎಂಬ ಯೋಜನೆಯನ್ನು ಆದಾಯ ತೆರಿಗೆ ಇಲಾಖೆಯವರು ಹೊಸದಾಗಿ ಆರಂಭಿಸಿದ್ದಾರೆ. ಸಾಮಾನ್ಯ ಸಮಸ್ಯೆಗಳನ್ನು ಹಾಗೂ ತೆರಿಗೆ, ಪಾನ್(PAN) ಅಥವಾ ಟ್ಯಾನ್ (Tan) ಸಂಬಂಧಿತ ಪ್ರಶ್ನೆಗಳನ್ನು ಪರಿಹರಿಸಲು 18001801961/1961 ನಂಬರಿಗೆ ಕರೆ ಮಾಡಿ
2. ಪಾನ್(PAN)/ಟ್ಯಾನ್ (Tan) ಸಮಸ್ಯೆ ಬಗೆಹರಿಸಲು
ವೈಯಕ್ತಿಕವಾಗಿ ಪಾನ್(PAN) ಅಥವಾ ಟ್ಯಾನ್ (Tan) ಕಾರ್ಡನ್ನು ಮಾಡಿಸುವಾಗ ಅನೇಕ ಸಮಸ್ಯೆಗಳು ಎದುರಾಗಬಹುದು. ಜೊತೆಗೆ ಪಾನ್(PAN) ಅಥವಾ ಟ್ಯಾನ್ (Tan) ಕಾರ್ಡಗಳಲ್ಲಿ ಸಂಭವಿಸುವ ತಪ್ಪುಗಳನ್ನು ತಿದ್ದುಪಡಿಸಲು ಹಾಗೂ ಇನ್ಯಾವುದೇ ಪಾನ್(PAN) ಸಂಬಂಧಿತ ಗೊಂದಲಗಳಿದ್ದರೆ +912027218080 ಅಥವಾ www.tin-nsdl.com ಸಂಪರ್ಕಿಸಿ.
3. ಇ-ಫೈಲಿಂಗ್ ತೆರಿಗೆ ಆದಾಯ ರಿಟರ್ನ್ಸ್
ಕೆಲ ಸಂದರ್ಭಗಳಲ್ಲಿ ತಾಂತ್ರಿಕ ದೋಷಗಳಿಂದಾಗಿ ಅಥವಾ ಬೇರೆ ತಪ್ಪುಗಳಿಂದಾಗಿ ಲಾಗಿನ್ ಮಾಡುವುದು ಸಾಧ್ಯವಾಗುವುದಿಲ್ಲ. ಹೀಗಾಗಿ ಇ-ಫೈಲಿಂಗ್ ಲಾಗಿನ್ ಸಂಬಂಧಿಸಿದಂತೆ ಪ್ರಶ್ನೆಗಳಿದ್ದರೆ ಈ ಎರಡು ನಂಬರುಗಳಿಗೆ ಕರೆ ಮಾಡಿ. ಸೇವೆಯ ಅವಧಿ ಸೋಮವಾರದಿಂದ ಶನಿವಾರದವರೆಗೆ 9 am to 8 am ಇರುತ್ತದೆ.
180042500025, 918026500025
4. ಮರುಪಾವತಿ/ಮರು ಸಮಸ್ಯೆ/ಸುಧಾರಣೆ
ಮರುಪಾವತಿ, ಸುಧಾರಣೆ ಅಥವಾ ಪ್ರಕಟಣೆಗಳಿಗೆ ಸಂಬಂಧಿತ ಗೊಂದಲಗಳಿದ್ದರೆ ಪರಿಶೀಲಿಸಲು ಈ 18004252229 ಸಹಾಯವಾಣಿ
ನಂಬರಿಗೆ ಕರೆ ಮಾಡಿ.
5. ಟಿಡಿಎಸ್ ಕೇಂದ್ರಿಕೃತ ಪ್ರಕ್ರಿಯಾ ಕೇಂದ್ರ(TRACES)
ಫಾರ್ಮ್ 26AS ಮತ್ತು ಫಾರ್ಮ್ 16ಗೆ ಸಂಬಂಧಿತ ಗೊಂದಲಗಳಿಗಾಗಿ ಇಲ್ಲಿ ಕೊಡಲಾದ ವೆಬ್ಸೈಟ್ ಅಥವಾ ನಂಬರಿಗೆ ಸಂಪರ್ಕಿಸಬಹುದಾಗಿದೆ.
www.tdscpc.gov.in, [email protected] ಅಥವಾ 18001030344, 911204814600
6. ಟ್ಯಾಕ್ಷ್ ರಿಟರ್ನ್ ಪ್ರಿಪೇರ್ ಸ್ಕಿಮ್ (TRP Scheme)
ಮನೆಗೆ ನೋಂದಣಿ ಮಾಡಿಸಲು ಅಥವಾ TRP ಸ್ಥಳಗಳನ್ನು ತಿಳಿದುಕೊಳ್ಳಲು 9 am to 6 pm ಅವಧಿಯ ಒಳಗಾಗಿ ಸೋಮವಾರದಿಂದ ಶನಿವಾರದವರೆಗೆ ಸಂಪರ್ಕಿಸಬಹುದು. 18001023738 ಅಥವಾ ಇಮೇಲ್ [email protected]


Click it and Unblock the Notifications