ಜುಲೈ ತಿಂಗಳೆಂದರೆ ತೆರಿಗೆ ಕಟ್ಟುವ ತಿಂಗಳು. ಇನ್ನೇನು ಜುಲೈ 31 ಹತ್ತಿರದಲ್ಲಿಯೇ ಇದೆ. ಇನ್ನು ಕೆಲ ದಿನಗಳಷ್ಟೆ ಬಾಕಿ. ಆದಾಯ ತೆರಿಗೆ ಫೈಲ್ ಮಾಡಲು ಇದೇ ಕೊನೆ ದಿನಾಂಕ (ಜುಲೈ 31) ಎಂಬ ಅರಿವು ನಿಮಗೆಲ್ಲ ಇದೆ. ಈ ಬಗ್ಗೆ ಮಾಧ್ಯಮಗಳಲ್ಲೂ ಜಾಹೀರಾತುಗಳು ಬರುತ್ತಿವೆ. ಆದಾಯ ತೆರಿಗೆ ಇಲಾಖೆಯವರು ಸಂದೇಶಗಳನ್ನು ಕಳುಹಿಸಿ ಪದೇ ಪದೇ ದಿನಾಂಕವನ್ನು ನೆನಪಿಸುತ್ತಿವೆ.
ಕೆಲವರು ತೆರಿಗೆಯನ್ನು ಪಾವತಿಸಿರಬಹುದು ಮತ್ತೆ ಕೆಲವರು ಕೆಲಸದ ಒತ್ತಡಗಳಲ್ಲಿ ಪಾವತಿಸದ ಇರಬಹುದು. ಏನೇ ಆಗಲಿ ಕಳೆದ ವರ್ಷದಂತೆ ಆಗಬಾರದು. ಈ ಸಲ ಬೇಗ ಐಟಿ ಫೈಲ್ ಮಾಡಬೇಕು ಎಂದು ಕೊಳ್ಳುತ್ತೇವೆಯೇ ಹೊರತು ಕಾರ್ಯಪ್ರವೃತ್ತವಾಗಿರುವುದಿಲ್ಲ. ಕಡೆಯ ಕ್ಷಣದವರೆಗೂ ಸುಮ್ಮನಿದ್ದು, ಕೊನೆ ಗಳಿಗೆಯಲ್ಲಿ ಅವಸರದಲ್ಲಿ ತಪ್ಪುಗಳನ್ನು ಮಾಡುವ ಪ್ರವೃತ್ತಿ ಬಹುತೇಕರಲ್ಲಿದೆ. ಕೊನೆ ಕ್ಷಣಗಳಲ್ಲಿ ಸಂಭವಿಸುವ ಪ್ರಮುಖ ತಪ್ಪುಗಳು ಇಲ್ಲಿವೆ ನೋಡಿ.
ಐಟಿ ಫಾರಂಗಳಲ್ಲಿ ಗೊಂದಲ ಬೇಡ
ಐಟಿ ಫಾರಂಗಳ್ಲಿ ನಾನಾ ನಮೂನೆಗಳಿವೆ. ಅದರಲ್ಲಿ ನಾನು ಯಾವ ಐಟಿ ಫಾರಂ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ಐಟಿ ರಿಟರ್ನ್ಸ್ ವೇಳೆ ಗೊಂದಲಕ್ಕೆ ಸಿಲುಕಿಸುವ ಮೊದಲ ಪ್ರಶ್ನೆ. ನಾನಾ ವಿಭಾಗದ, ನಾನಾ ವರ್ಗಕ್ಕೆ ಸೇರಿದ ಅರ್ಜಿ ನಮೂನೆಗಳಿದ್ದು, ಈ ಬಗ್ಗೆ ತಜ್ಞರ ಮಾಹಿತಿ ಪಡೆಯುವುದು ಅಗತ್ಯ. ಇಲ್ಲವೇ, ಈ ಬಗ್ಗೆ ಮಾಧ್ಯಮಗಳಲ್ಲಿ/ಪತ್ರಿಕೆಗಳಲ್ಲಿ ಪ್ರಕಟವಾಗುವ ವರದಿಗಳನ್ನು ಗಮನಿಸಿ ತೀರ್ಮಾನ ಕೈಗೊಳ್ಳಬಹುದು. ಇನ್ನು ಉದ್ಯೋಗ ಬದಲಿಸುವವರು ಸಾಕಷ್ಟು ಐಟಿಆರ್ ಗಳನ್ನು ಭರ್ತಿ ಮಾಡುತ್ತಾರೆ. ಒಂದು ಹಣಕಾಸಿನ ವರ್ಷದಲ್ಲಿ ನಿಮ್ಮ ಕೆಲಸಗಳು ಎಷ್ಟೇ ಬದಲಾಗಿರಬಹುದು, ನಿಮ್ಮಲ್ಲಿ ಎಷ್ಟೇ ಫಾರಂ ನಂ. 16 ಗಳೂ ಇರಲಿ. ಆದರೆ, ಎಲ್ಲಕ್ಕೂ ಒಂದೇ ಐಟಿಆರ್ ಸಾಕು.
ಪ್ಯಾನ್, ಬ್ಯಾಂಕ್ ಖಾತೆ ಸಂಖ್ಯೆ ಸರಿಯಿರಲಿ
ಪ್ಯಾನ್ ಕಾರ್ಡ್ ಹಣಕಾಸು ವ್ಯವಹಾರಗಳಿಗೆ ಕಡ್ಡಾಯವಾಗಿ ಬಳಸಲಾಗುತ್ತಿದೆ. ಅಲ್ಲದೇ, ಬ್ಯಾಂಕ್ ಖಾತೆ ಸಂಖ್ಯೆ, ಐಎಫ್ಎಸ್ಸಿ ಕೋಡಗಳನ್ನು ಬರೆಯುವಾಗಲೂ ಎಚ್ಚರ ಇರಬೇಕಾಗುತ್ತದೆ. ಇಂಥ ವಿಷಯಗಳನ್ನು ಒಂದಲ್ಲ ಎರಡೆರಡು ಬಾರಿ ಗಮನಿಸಬೇಕಾಗುತ್ತದೆ. ಏಕೆಂದರೆ ಬ್ಯಾಂಕ್ ಖಾತೆಯ ಸಂಖ್ಯೆ ಬರೆಯುವಾಗ ಗಲಿಬಿಲಿ ಸಹಜ. ಕೆಲವು ಸಲ ನಾನಾ ಕಾರಣಕ್ಕೆ ಬ್ಯಾಂಕುಗಳ ಐಎಫ್ಎಸ್ಸಿ ಕೋಡಗಳು ಬದಲಾಗುತ್ತಿರುತ್ತವೆ. ಇವೆಲ್ಲದರ ಬಗ್ಗೆ ನಿಗಾ ಅವಶ್ಯ. ಐಎಫ್ಎಸ್ಸಿ ಕೋಡ್, ಖಾತೆ ಸಂಖ್ಯೆ ತೆರಿಗೆ ರಿಫಂಡ್ ಗೆ ನೆರವಾಘುತ್ತವೆ. ಕೆಲವೊಮ್ಮೆ ಖಾತೆ ವಿವರಗಳಲ್ಲಿ ತಪ್ಪುಗಳಿದ್ದಲ್ಲಿ ರೀಫಂಡ್ ಹಣ ತೆರಿಗೆ ಇಲಾಖೆಯಲ್ಲಯೇ ಉಳಿದು ಬಿಡುತ್ತದೆ.
ಟಿಡಿಎಸ್ ಕಡಿತವಾದರೂ ಐಟಿಆರ್ ಕಡ್ಡಾಯ
ಕೆಲವರಿಗೆ ಇದರ ಬಗ್ಗೆ ತುಂಬಾ ಗೊಂದಲಗಳಿರುತ್ತವೆ. ನಮ್ಮ ಆಫೀಸ್ಸಿನವರೇ ನಮ್ಮ ಸಂಬಳದಲ್ಲಿ ಟಿಡಿಎಸ್ ಕಡಿತ ಮಾಡಿದ್ದಾರೆ. ಹೀಗಾಗಿ ಈಗ ತೆರಿಗೆ ರಿಟರ್ನ್ಸ್ ಅಗತ್ಯವಿಲ್ಲ ಎಂದು ಅನೇಕರು ಭಾವಿಸುತ್ತಾರೆ. ಅದೇನೇ ಇರಲಿ, ನಿಮ್ಮ ತೆರಿಗೆ ಸರ್ಕಾರಕ್ಕೆ ಸೇರಿದ್ದರೂ ಐಟಿಆರ್ ಸಲ್ಲಿಕೆ ಕಡ್ಡಾಯ. ಎಲ್ಲ ವೇತನದಾರರೂ ಐಟಿಆರ್ ಫೈಲ್ ಮಾಡಲೇ ಬೇಕು.
ಐಟಿಆರ್-ವಿ ಕಳಿಸೋದು ಮರೆಯಬೇಡಿ
ಆನ್ಲೈನ್ ನಲ್ಲಿ ಐಟಿ ರಿಟರ್ನ್ಸ್ ಆದ ಮೇಲೆ ಖುಷಿಯಿಂದ ಸುಮ್ಮನಾಗಬೇಡಿ. ಅಲ್ಲಿಗೆ ಎಲ್ಲವೂ ಮುಗಿದಂತೆ ಅಲ್ಲ. ನಿಮ್ಮ ಐಟಿಆರ್-ವಿ ಯನ್ನು ಪ್ರಿಂಟ್ ತೆಗೆದು ಅದನ್ನು ಆದಾಯ ತೆರಿಗೆ ಇಲಾಖೆಗೆ ಪೋಸ್ಟ್ ಮೂಲಕ ಕಳುಹಿಸಬೇಕು. ಬಹುತೇಕರು ಅಂತಿಮ ಹಾಗೂ ಬಹುಮುಖ್ಯ ಹಂತವನ್ನೇ ಮರೆತು ಬಿಡುತ್ತಾರೆ.
ಪತ್ನಿ, ಮಕ್ಕಳ ಆದಾಯವನ್ನೂ ಸೇರಿಸಬೇಕು
ಆದಾಯ ತೆರಿಗೆ ತಪ್ಪಿಸಲು ಪತ್ನಿ ಅಥವಾ ಚಿಕ್ಕ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡುವ ಪ್ರವೃತ್ತಿ ಕೆಲವರಲ್ಲಿದೆ. ಆದರೆ ಇಂಥ ಹೂಡಿಕೆಗಳಿಂದ ಬರುವ ಆದಾಯವನ್ನೂ ತಮ್ಮ ವೈಯಕ್ತಿಕ ಆದಾಯಕ್ಕೆ ಸೇರಿಸಿ ರಿಟರ್ನ್ಸ್ ಸಲ್ಲಿಸಬೇಕು. ತೆರಿಗೆ ಪರಾಮರ್ಶನ ವೇಳೆ ಅಧಿಖಾರಿಗಳಿಗೆ ಅನುಮಾನ ಬಂದರೆ ತೊಂದರೆ ತಪ್ಪದು. ಬೆರೆಯವರ ಹೆಸರಿನಲ್ಲಿ ಹೂಡಿಕೆ ಮಾಡಿದ ಮಾತ್ರಕ್ಕೆ ದುಡಿಯುವ ವ್ಯಕ್ತಿ ತೆರಿಗೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಹೆಚ್ಚುವರಿ ಆಧಾಯ ಬಚ್ಚಿಡಲಾಗದು
ನಿಮ್ಮ ಆದಾಯ ವಾರ್ಷಿಕವಾಗಿ 2.5 ಲಕ್ಷಕ್ಕಿಂತ ಹೆಚ್ಚಿದಲ್ಲಿ ಕಡ್ಡಾಯವಾಗಿ ತೆರಿಗೆ ಪಾವತಿಸಬೇಕಾಗುತ್ತದೆ. ಜೊತೆಗೆ ಯಾವುದೇ ಬ್ಯಾಂಕಿನಲ್ಲಿ 5 ಲಕ್ಷ ರೂ. ಎಫ್ ಡಿ ಇಟ್ಟಿರುತ್ತಿರಿ ಆ ಕುರಿತೂ ಐಟಿಆರ್ ನಲ್ಲಿ ಮಾಹಿತಿ ನೀಡಬೆಕು. 10 ಸಾವಿರಕ್ಕೂ ಹೆಚ್ಚು ಆದಾಯ ಬರುವ ಎಲ್ಲ ಠೇವಣಿಗಳೂ ತೆರಿಗೆ ವ್ಯಾಪ್ತಿಗೆ ಬರುತ್ತವೆ. ನೀವು ಮಾಹಿತಿ ನೀಡದೇ ಹೋದರೂ, ಪ್ಯಾನ್ ಸಂಖ್ಯೆಯ ಅನುಸಾರ ತೆರಿಗೆ ಇಲಾಖೆಗೆ ಬ್ಯಾಂಕ್ ಗಳೇ ಮಾಹಿತಿ ನೀಡುತ್ತವೆ. ಬಚ್ಚಟ್ಟ ಆದಾಯ ನಿಮಗೆ ತೊಡಕಾಗಬಹುದು. ಹೀಗಾಗಿ, ಕಮಿಷನ್, ಷೇರುಗಳು, ಭೂಮಿ ಮಾರಾಟ, ಲಾಟರಿಯಿಂದ ಬಂದ ಹಣ ಸೇರಿದಂತೆ ಹೆಚ್ಚುವರಿ ಆದಾಯ ಏನೇ ಇದ್ದರೂ ಐಟಿಆರ್ ನಲ್ಲಿ ತೋರಿಸಬೇಕು.
ದಂಡ ಕಟ್ಟಬೇಕಾಗುತ್ತದೆ
ಒಂದು ವೇಳೆ ಈ ಮೇಲಿನ ಪ್ರಮಾದಗಳು/ತಪ್ಪುಗಳು ಸಂಭವಿಸಿದಲ್ಲಿ ಹಾಗೂ ನಜುಲೈ 31ರ ಒಳಗಾಗಿ ತೆರಿಗೆ ಪಾವತಿಸದಿದ್ದಲ್ಲಿ ದಂಡ ವಿಧಿಸಲಾಗುತ್ತದೆ. ಮೊತ್ತ ಮತ್ತು ದಂಡ ಎಷ್ಟು ವಿಧಿಸಬೇಕಾಗುತ್ತದೆ ಎಂಬುದನ್ನು ತೆರಿಗೆ ಇಲಾಖೆಯವರು ನಿರ್ಧರಿಸುತ್ತಾರೆ.
ಒಟ್ಟಿನಲ್ಲಿ ತೆರಿಗೆಯನ್ನು ಪಾವತಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ ಅಗಿದೆ. ತಪ್ಪಿದಲ್ಲಿ ತೆರಿಗೆ ಇಲಾಖೆಯವರ ನೋಟಿಸ್ ಜಾರಿ ಮಾಡುತ್ತಾರೆ. ಜೊತೆಗೆ ಅನವರ್ಶಯ ದಂಡ ಕಟ್ಟಬೇಕಾಗುತ್ತದೆ. ಇನ್ನು ಹತ್ತು ದಿನಗಳು ಬಾಕಿ ಇವೆ ಕಾರ್ಯವ್ರವೃತ್ತರಾಗಿ.
Read in English: What Happens If You Do Not File Tax Returns By July 31, 2016?


Click it and Unblock the Notifications