ಹೌದು, ಇತ್ತೀಚಿನ ದಿನಗಳಲ್ಲಿ ಪ್ಯಾನ್/ಟ್ಯಾನ್ ಬಳಕೆ ಕಡ್ಡಾಯವಾಗಿದೆ. ಅದರಲ್ಲೂ ಉದ್ದಿಮೆ ಕಂಪನಿಗಳು ತನ್ನ ಪ್ರತಿಯೊಂದು ವ್ಯವಹಾರಗಳಿಗೂ ಪ್ಯಾನ್/ಟ್ಯಾನ್ ಕಾರ್ಡ್ ಕಡ್ಡಾಯವಾಗಿ ಬಳಸಲೇಬೇಕಾಗಿದೆ.
ಉದ್ಯಮದಾರರು ಅಥವಾ ಕಂಪನಿಗಳು ಡಿಜಿಟಲ್ ಸಹಿ ಮಾಡಿರುವ ಪ್ರಮಾಣ ಪತ್ರ ಆಧಾರಿತ ಅರ್ಜಿಯನ್ನು ಸಲ್ಲಿಸಿದರೆ ಒಂದೇ ದಿನದಲ್ಲಿ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಅಥವಾ ತೆರಿಗೆ ಕಡಿತ ಖಾತೆ ಸಂಖ್ಯೆ (ಟ್ಯಾನ್) ಪಡೆಯಬಹುದು.
ಆದಾಯ ತೆರಿಗೆ ಇಲಾಖೆಯೂ ದೇಶದಲ್ಲಿ ಸುಗಮ ವಹಿವಾಟಿಗಾಗಿ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ವ್ಯವಸ್ಥೆ ಜಾರಿ ತಂದಿದೆ.
ಅದಲ್ಲದೆ ಜನಸಾಮಾನ್ಯರಿಗೆ ತ್ವರಿತವಾಗಿ ಪ್ಯಾನ್ ಲಭ್ಯವಾಗುವಂತೆ ಮಾಡಲು ಆಧಾರ್ ಆಧಾರಿತ ಅರ್ಜಿ ವ್ಯವಸ್ಥೆಯನ್ನೂ ಜಾರಿಗೆ ತಂದಿದೆ. ಇದರಿಂದ ಪ್ಯಾನ್ ನಕಲು ಮಾಡಲು ಸಾಧ್ಯವಿಲ್ಲ ಎಂದು ಆದಾಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. www.incometaxindia.gov.in ಗೆ ಭೇಟಿ ನೀಡಬಹುದು.