700 ಕೋಟಿ ಮೌಲ್ಯದ ಮದ್ಯದ ದೊರೆ ವಿಜಯ ಮಲ್ಯ ಆಸ್ತಿ ಹರಾಜಿಗೆ ಬ್ಯಾಂಕುಗಳು ಮತ್ತು ಆದಾಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆಂದು ಪಿಟಿಐ ವರದಿ ಮಾಡಿದೆ.
ಈಗಾಗಲೇ ಒಮ್ಮೆ ಕಿಂಗ್ ಫಿಷರ್ ಗೆ ಸೇರಿರುವ ಆಸ್ತಿಗಳು ಹಾಗೂ ಐಷಾರಾಮಿ ವಿಮಾಣ ಹರಾಜಿಗೆ ಯತ್ನ ನಡೆದಿತ್ತು. ಆದರೆ ಉತ್ತಮ ಪ್ರತಿಕ್ರಿಯೆ ಸಿಗದ ಕಾರಣ ಹರಾಜನ್ನು ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಮಲ್ಯ ಅವರಿಗೆ ಸೇರಿರುವ ಆಸ್ತಿಗಳನ್ನು ಆಗಸ್ಟ್ 25ರಂದು ಹರಾಜು ಕೂಗಲು ನಿರ್ಧರಿಸಿವೆ.
ಏರ್ಪೋರ್ಟ್ ಹತ್ತಿರದ ಕಿಂಗ್ ಫಿಶರ್ ಹೌಸ್
ಈಗಾಗಲೇ ಒಂದು ಬಾರಿ ಮಲ್ಯ ಹರಾಜು ಪ್ರಿಕ್ರಿಯೆ ನಡೆದಿದ್ದು ಯಶಸ್ವಿಯಾಗಿರಲಿಲ್ಲ. ಹೀಗಾಗಿ ಆಗಸ್ಟ್ 4ರಂದು ಏರ್ಪೋರ್ಟ್ ಹತ್ತಿರದ ಕಿಂಗ್ ಫಿಶರ್ ಹೌಸ್ ನ ಹರಾಜಿಗೆ ಎರಡನೇ ಪ್ರಯತ್ನ ನಡೆಯಲಿದೆ.
ಬೆಲೆ ಬಾಳುವ ಕಾರುಗಳು
ವಿಜಯ ಮಲ್ಯ ಅವರ ಹತ್ತಿರವಿರುವ Honda City EXI, Hyundai Elantra, Toyota Corolla, Honda Civic, Toyota Innova, Honda City ZX ಮುಂತಾದ ಅನೇಕ ಬೆಲೆ ಬಾಳುವ ಕಾರುಗಳನ್ನು ಸಹ ಹರಾಜಿಗೆ ಇಡಲಾಗಿದೆ.
ಕಚೇರಿ ಪೀಠೊಪಕರಣಗಳು
ಮುಂಬೈನಲ್ಲಿರುವ ಬಹುವೆಚ್ಚದ ಮತ್ತು ಐಷಾರಾಮಿ ಕಚೇರಿ ಪೀಠೊಪಕರಣಗಳ ಹರಾಜು ಪ್ರಕ್ರಿಯೆ ಕೂಡ ಮುಂದಿನ ತಿಂಗಳು ನಡೆಯಲಿದೆ.
ಮಲ್ಯ ಐಷಾರಾಮಿ ಜೆಟ್
ಮಲ್ಯ ಅವರ ಐಷಾರಾಮಿ ಜೆಟ್ ವಿಮಾನವನ್ನು ಹರಾಜಿಗೆ ಇಡಲಾಗಿದೆ. ಈ ಐಷಾರಾಮಿ ಖಾಸಗಿ ವಿಮಾನ ಬಾತ್ ರೋಬ್, ಸುಖಾಸನಗಳನ್ನು ಹೊಂದಿದೆ.
ಕಿಂಗ್ ಫಿಶರ್ ವಿಲ್ಲಾ
ಆಗಾಗ ಗಣ್ಯರಿಗೆ ಪಾರ್ಟಿಗಳನ್ನು ನೀಡಲು ಬಳಸುತ್ತಿದ್ದ ಗೋವಾದಲ್ಲಿರುವ ಕಿಂಗ್ ಫಿಶರ್ ವಿಲ್ಲಾವನ್ನೂ ಹರಾಜಿಗೆ ಇಡಲಾಗಿದೆ. ಇದು ಎಲ್ಲರ ಆಕರ್ಷಣೆಯ ಕೇಂದ್ರಬಿಂದು ಆಗಿದೆ.
ಬ್ರ್ಯಾಂಡು ಮತ್ತು ವ್ಯಾಪಾರ ಮುದ್ರೆಗಳು
'Fly with Good Times', Flying Models, Funliner, Fly Kingfisher and Flying Bird Device ಮುಂತಾದ ಬ್ರ್ಯಾಂಡು ಮತ್ತು ಮದ್ರೆಗಳನ್ನು ಹರಾಜಿಗೆ ಇಡಲಾಗಿದೆ.
ಚಲಿಸಬಲ್ಲ ಸುರಕ್ಷಿತ ಸ್ವತ್ತುಗಳು
ವಿಜಯ ಮಲ್ಯರವರ ಅನೇಕ ಚಲಿಸಬಲ್ಲ ಸುರಕ್ಷಿತ ಸ್ವತ್ತುಗಳು ಮತ್ತು ಐಷಾರಾಮಿ ಮನೆಗಳ ಹರಾಜು ಸಹ ನಡೆಯಲಿದೆ.