ಬಹಳ ಕಾಲದಿಂದ ಬಾಕಿ ಇದ್ದ ಸರಕು ಮತ್ತು ಸೇವೆ ತೆರಿಗೆ ಮಸೂದೆ ಜಾರಿಗೆ ತರುವುದಕ್ಕಾಗಿ ಸಂವಿಧಾನಕ್ಕೆ 122ನೇ ತಿದ್ದುಪಡೆ ತರುವುದಕ್ಕಾಗಿ ಮಸೂದೆಗೆ ರಾಜ್ಯಸಭೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದೆ. ಇದು ಅತ್ಯಂತ ಮಹತ್ವದ ಮತ್ತು ದೂರಗಾಮಿ ಆರ್ಥಿಕ ಸುಧಾರಣಾ ಕ್ರಮ ಎಂದು ವಿಶ್ಲೇಷಿಸಲಾಗಿದೆ.
ಇಂದು ನಮ್ಮ ದೇಶದಲ್ಲಿ ಅನೇಕ ವಿಧದ ತೆರಿಗೆಗಳಿವೆ. ಕೇಂದ್ರ ಸರ್ಕಾರದ ತೆರಿಗೆ ಮತ್ತು ರಾಜ್ಯ ಸರ್ಕಾರದ ತೆರಿಗೆ ಮುಖ್ಯವಾಗಿವೆ. ಕೇಂದ್ರ ಸರ್ಕಾರ ಅಬಕಾರಿ ಸುಂಕ, ಸೇವಾ ತೆರಿಗೆ, ಕಸ್ಟಮ್ಸ್ ತೆರಿಗೆಗಳನ್ನು ವಿಧಿಸಿದ್ದರೆ, ರಾಜ್ಯ ಸರ್ಕಾರ ವ್ಯಾಟ್ (ಮೌಲ್ಯ ವರ್ಧಿತ ತೆರಿಗೆ), ಮನರಂಜನಾ ತೆರಿಗೆ, ಐಷಾರಾಮಿ ತೆರಿಗೆ, ಅಕ್ಟ್ರಾಯ್ ತೆರಿಗೆ, ಲಾಟರಿ ತೆರಿಗೆಗಳನ್ನು ವಿಧಿಸುತ್ತವೆ. ಆದರೆ ಇದು ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತದೆ.
ಇದರಿಂದಾಗಿ ಮೊದಲು ಉತ್ಪಾದಕರು ತೆರಿಗೆಗಳನ್ನು ಪಾವತಿಸಿದರೆ ಆಮೇಲೆ ಗ್ರಾಹಕರು ತೆರಿಗೆಗಳನ್ನು ಪಾವತಿಸುತ್ತಿದ್ದರು. ಹೀಗಾಗಿ ಉತ್ಪನ್ನಗಳು ದುಬಾರಿ ಆಗಿ ಜನಸಾಮಾನ್ಯರ ಮೇಲೆ ತೆರಿಗೆ ಹೊರೆ ಬೀಳುತಿತ್ತು. ಆದರೆ ಇನ್ನು ಮುಂದೆ ಈ ಎಲ್ಲಾ ತೆರಿಗೆಗಳು ಏಕರೂಪದ ತೆರಿಗೆ ಅಡಿ ತರುವಲ್ಲಿ ಜಿಎಸ್ಟಿ ನೇರವಾಗಲಿದೆ.
ಹೀಗಾಗಿ ಜಿಎಸ್ಟಿ ಅಂಗೀಕಾರವಾಗುವುದರಿಂದ ಜನಸಮಾನ್ಯರಿಗೆ ಲಾಭಗಳೇನು? ರಾಜ್ಯಗಳ ಮೇಲೆ ಬೀರುವ ಪ್ರಭಾವಗಳೇನು? ಯಾರಿಗೆ ಲಾಭ? ಯಾರಿಗೆ ನಷ್ಟ? ಅರ್ಥವ್ಯವಸ್ಥೆಯಲ್ಲಿ ಮಸೂದೆ ತರುವ ಬದಲಾವಣೆಗಳೇನು? ಇತ್ಯಾದಿ ಅನೇಕ ವಿಚಾರಗಳನ್ನು ಇಲ್ಲಿ ನೋಡೋಣ.
ಜಿಎಸ್ಟಿ ಎಂದರೇನು?
ದೇಶದಾದ್ಯಂತ ಸರಕು ಮತ್ತು ಸೇವೆಗಳ ಮೇಲೆ ವಿಧಿಸಲಾಗುವ ಏಕರೂಪದ ಸಾಮಾನ್ಯ ಪರೋಕ್ಷ ತೆರಿಗೆ. ಇದು ರಾಷ್ಟ್ರಮಟ್ಟದ ತೆರಿಗೆ ವ್ಯವಸ್ಥೆಯಾಗಿರುತ್ತದೆ. ಇದು 2017 ಏಪ್ರಿಲ್ 1ರಿಂದ ಜಾರಿಯಾಗುವ ಸಾಧ್ಯತೆ ಇದೆ.
ಉದ್ದೇಶವೇನು?
ಸರಕು ಮತ್ತು ಸೇವೆಗಳ ಮೇಲಿನ ಬಹುತೆರಿಗೆ ಪದ್ದತಿಯನ್ನು ತೊಡೆದು ಹಾಕುವುದು. ಅಂದರೆ ರಾಜ್ಯಗಳು ವಿಧಿಸುವ ವಿವಿಧ ರೂಪದ ತೆರಿಗೆಗಳನ್ನು ರದ್ದುಪಡಿಸುವುದು.
ದೇಶವ್ಯಾಪಿ ಏಕರೂಪದ ತೆರಿಗೆಯನ್ನು ಜಾರಿ ಮಾಡುವುದು. ಒಂದೇ ರೀತಿಯ ಅರ್ಥವ್ಯವಸ್ಥೆ ಯನ್ನು ರೂಪಿಸುವುದು.
ಪ್ರಯೋಜನಗಳು
ತೆರಿಗೆ ವಂಚನೆ ತಡೆಯಲು ಸಹಕಾರಿಯಾಗಲಿದೆ. ಎರಡು-ಮೂರು ಹಂತಗಳಲ್ಲಿ ತೆರಿಗೆ ಹೇರಿಕೆ ತಪ್ಪಿ ಎಲ್ಲ ಪರೋಕ್ಷ ತೆರಿಗೆಗಳು ಜಿಎಸ್ಟಿಯಲ್ಲಿ ಅಂತರ್ಗತಗೊಳ್ಳುತ್ತವೆ.
ಉದ್ಯಮಗಳು ತೆರಿಗೆ ಪಾವತಿಸುವ ವ್ಯವಸ್ಥೆ ಸರಳವಾಗಿ, ತೆರಿಗೆ ಬದ್ದತೆ ಹೆಚ್ಚುತ್ತದೆ. ಪ್ರತಿಯೊಬ್ಬರೂ ಸ್ವಯೋಪ್ರೇರಿತರಾಗಿ ತೆರಿಗೆ ಪಾವತಿಸಲು ಉತ್ತೇಜನ ನೀಡುವಲ್ಲಿ ಸಹಕಾರಿಯಾಗಬಲ್ಲದು.
ಲಾಭ ಯಾರಿಗೆ?
ಜನಸಾಮಾನ್ಯರಿಗೆ ಹೆಚ್ಚು ಲಾಭವಾಗಲಿದೆ. ಆಹಾರ ಪದಾರ್ಥ, ಬಟ್ಟೆ ಮತ್ತಿತರ ದಿನಬಳಕೆಯ ವಸ್ತುಗಳು ಅಗ್ಗವಾಗಲಿವೆ. ಸರಕು ಮತ್ತು ಸೇವೆಗಳ ಸಾಗಾಟ ಸರಾಗವಾಗಲಿದೆ. ಸಮಯದ ಉಳಿತಾಯ ಆಗಲಿದೆ. ಕೈಗಾರಿಕಾ ಉತ್ಪನ್ನಗಳು ಅಗ್ಗವಾಗಲಿವೆ.
ದುಬಾರಿ, ನಷ್ಟ ಯಾರಿಗೆ?
* ಪೆಟ್ರೋಲಿಯಂ ಉತ್ಪನ್ನಗಳು ದುಬಾರಿಯಾಗಲಿವೆ.
* ಮದ್ಯ ಮತ್ತು ತಂಬಾಕು ಉತ್ಪನ್ನಗಳು (ಸಿಗರೇಟ್, ಬೀಡಿ) ದುಬಾರಿಗಲಿದೆ.
* ಹೋಟೆಲ್ ಊಟೋಪಚಾರ ದುಬಾರಿಯಾಗಲಿದೆ.
* ಮೊಬೈಲ್ ಫೋನ್, ಲ್ಯಾಪ್ ಟಾಪ್ ದುಬಾರಿಯಾಗಲಿದೆ.
* ಏರಲೈನ್ ಟಿಕೆಟ್ ಗಳು ದುಬಾರಿಯಾಗಲಿವೆ.
* ಇನ್ಸೂರೆನ್ಸ್ ಪಾಲಿಸಿಗಳು ಮತ್ತು ಮೊಬೈಲ್ ಬಿಲ್ ಗಳು ದುಬಾರಿಯಾಗಲಿವೆ.
ಉದ್ಯಮಕ್ಕೆ ಉಪಯೋಗ
ಉದ್ಯಮದಾರರಿಗೆ ತುಂಬಾ ಅನುಕೂಲಗಳಿವೆಯೆಂದು ಹೇಳಬಹುದು.
* ಈ ಹಿಂದೆ ಇದ್ದ ವಿವಿಧ ರೂಪದ ತೆರಿಗೆಗಳಿಂದ ಉದ್ಯಮಗಳು ಮುಕ್ತಿ ಪಡೆಯಲಿವೆ.
*ತಯಾರಿಕಾ ಘಟಕಗಳ ಸ್ಥಾಪನೆಯ ನಿರ್ಧಾರ ಮಾಡುವಾಗ ತೆರಿಗೆ ಲಾಭ/ನಷ್ಟ ಲೆಕ್ಕಾಚಾರ ಹಾಕುವ ಅಗತ್ಯ ಇಲ್ಲ.
*ಅನುಕೂಲವಾಗುವ ತಯಾರಿಕಾ ಘಟಕವನ್ನು ಆಯ್ಕೆ ಮಾಡಬಹುದು.
*ರಪ್ತುಗಳ ಸಂದರ್ಭದಲ್ಲಿ ತೆರಿಗೆ ಇರುವ ಸಾಧ್ಯತೆ ಕಡಿಮೆ. ಇದ್ದರೂ ತೆರಿಗೆ ಹೊರೆ ಇರುವುದಿಲ್ಲ.
* ಉತ್ಪನ್ನಗಳು ಬಳಕೆಯಾಗುವ ಸಂದರ್ಭದಲ್ಲಿ ತೆರಿಗೆ ವಿಧಿಸಲಾಗುವುದರಿಂದ ಉತ್ಪಾದನೆ ಹಂತದಲ್ಲಿ ತೆರಿಗೆ ಪ್ರಮಾಣ ಕಡಿಮೆ ಆಗಬಹುದು.
ಕಡಿಮೆ ಭ್ರಷ್ಟಾಚಾರ
ಜಿಎಸ್ಟಿ ಮಸೂದೆ ಅಂಗೀಕಾರವಾಗುವುದರಿಂದ ಏಕರೂಪದ ತೆರಿಗೆ ಜಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ವ್ಯವಸ್ಥೆಯಲ್ಲಿ ದಕ್ಷತೆಯ ಪ್ರಮಾಣ ಹೆಚ್ಚಾಗಿ ಭ್ರಷ್ಟಾಚಾರದ ಪ್ರಮಾಣ ಗಣನೀಯವಾಗಿ ತಗ್ಗಲಿದೆ.
ಆರ್ಥಿಕತೆಯ ಜೀವಾಳ
*ಜಿಎಸ್ಟಿ ಅಂಗೀಕಾರದ ಫಲವಾಗಿ ಜಿಡಿಪಿ ಶೇ. ಒಂದರಿಂದ ಎರಡಷ್ಟು ಹೆಚ್ಚಳ ಆಗಲಿದೆ.
* ಜಿಡಿಪಿ ಹೆಚ್ಚಳದಿಂದ ಅರ್ಥವ್ಯವಸ್ಥೆ ಪ್ರಗತಿಯೆತ್ತ ನಡೆಯಲಿದೆ.
* ವಿದೇಶಿ ಬಂಡವಾಲ ಹೂಡಿಕೆಯಲ್ಲಿ ವೃದ್ಧಿ
* ಉದ್ಯಮ, ಉತ್ಪಾದನಾ ವಲಯಗಳಿಗೆ ಹೊಸ ಚೈತನ್ಯ ಸಿಗಲಿದೆ
* ಉದ್ಯೋಗ ಸೃಷ್ಟಿ, ಕಡಿಮೆ ಭ್ರಷ್ಠಚಾರ
* ತೆರಿಗೆ ಪಾವತಿಯಲ್ಲಿ ಉತ್ತೇಜನ
* ಹಣದುಬ್ಬರ ನಿಯಂತ್ರಣ
* ಜನಸಾಮಾನ್ಯರಿಗೆ ತೆರಿಗೆ ಭಾರ ಕಡಿಮೆಯಾಗಲಿದೆ.
ಉದ್ಯೋಗ ಸೃಷ್ಟಿ
ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಪ್ರಮಾಣ ಶೇ. ೧ರಿಂದ ೨ರಷ್ಟು ಹೆಚ್ಚುವುದರಿಂದ ಹೆಚ್ಚುವುದರಿಂದ ಉದ್ಯೋಗ ಸೃಷ್ಟಿ ಸಾಧ್ಯ ಇದೆ.
ಹಣದುಬ್ಬರ ನಿಯಂತ್ರಣ
ಪ್ರಸ್ತುತ ಇರುವ ತೆರಿಗೆ ಸ್ವರೂಪದಿಂದಾಗಿ ಹಣದುಬ್ಬರ ಹೆಚ್ಚಿನ ಏರುಪೆರುಗಳಾಗುತ್ತಿದ್ದವು. ಅಲ್ಲದೆ ನಿಯಂತ್ರಣಕ್ಕೆ ತರುವುದು ಕಷ್ಟಸಾಧ್ಯವಾಗಿತ್ತು. ಆದರೆ ಜಿಎಸ್ಟಿ ಅಂಗೀಕಾರದಿಂದಾಗಿ ಏಕರೂಪದ ತೆರಿಗೆ ಅಡಿಯಲ್ಲಿ ಹಣದುಬ್ಬರ ನಿಯಂತ್ರಣ ಸಾಧ್ಯವಾಗಲಿದೆ.
ಇನ್ಸೂರೆನ್ಸ್ ಪಾಲಿಸಿಗಳು ದುಬಾರಿ
ಹೌದು, ಇನ್ಸೂರೆನ್ಸ್ ಪಾಲಿಸಿಗಳು ಇನ್ನು ಮುಂದೆ ದುಬಾರಿ ಆಗಲಿವೆ. ಜಿಎಸ್ಟಿಯಿಂದಾಗಿ ಇನ್ಸೂರೆನ್ಸ್ ಪಾಲಿಸಿಗಳ ಮೇಲೆ ಸೇವಾ ತೆರಿಗೆ ರೂಪದಲ್ಲಿ ಹೆಚ್ಚು ವೆಚ್ಚ ಭರಿಸಬೇಕಾಗಿದೆ.
ಜಿಎಸ್ಟಿ ಹೇಗೆ ಕಾರ್ಯನಿರ್ವಹಿಸಲಿದೆ?
ಇದು ಮುಖ್ಯವಾಗಿ ಮೂರು ವಿಧಾನಗಳಲ್ಲಿ ಕಾರ್ಯನಿರ್ವಹಿಸಲಿದೆ.
*ಕೇಂದ್ರ ಸರ್ಕಾರಕ್ಕೆ ತೆರಿಗೆ ವಿಧಿಸುವ ಅವಕಾಶವಿರುತ್ತದೆ.
* ರಾಜ್ಯ ಸರ್ಕಾರಕ್ಕೆ ತೆರಿಗೆ ವಿಧಿಸುವ ಅವಕಾಶವಿರುತ್ತದೆ.
* ಅಂತರರಾಜ್ಯ ಅಥವಾ ಸಮಗ್ರ ತೆರಿಗೆ ವಿಧಿಲಾಗುತ್ತದೆ.
ತೆರಿಗೆ ವ್ಯಾಪ್ತಿ ವಿಸ್ತಾರವಾಗುವುದರಿಂದ ಸರ್ಕಾರಕ್ಕೆ ಇದು ಸುಲಭ ತೆರಿಗೆ ವ್ಯವಸ್ಥೆ ಆಗಲಿದೆ. ಜತೆಗೆ ವರಮಾನದಲ್ಲಿ ಹೆಚ್ಚಳವಾಗಲಿದೆ. ಒಟ್ಟಿನಲ್ಲಿ ಸರಕು ಮತ್ತು ಸೇವೆಗಳನ್ನು ಬಳಕೆ ಮಾಡುವವರ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಹಾಗಾಗಿ ಅದರ ಬಳಕೆದಾರ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications