ಮುಂದಿನ ವರ್ಷದ ಏಪ್ರಿಲ್ 1, 2017ರಿಂದ ಸರಕು ಮತ್ತು ಸೇವಾ ತೆರಿಗೆ ಮಸೂದೆ ಜಾರಿಯಾಗುವ ಬಗ್ಗೆ ಸಂಶಯ ವ್ಯಕ್ತವಾಗುತ್ತಿದೆ.
ದೇಶದಲ್ಲಿ ಏಕರೂಪದ ತೆರಿಗೆ ಪದ್ದತಿ ಜಾರಿಯಾದರೆ ಅದರ ಪರಿಣಾಮಗಳನ್ನು ಎದುರಿಸಿವುದು ಹೇಗೆ ಎಂಬ ಪ್ರಶ್ನೆ ಉದ್ಯಮ ವಲಯವನ್ನು ಕಾಡುತ್ತಿದೆ.
ಕೇಂದ್ರ ಸರ್ಕಾರ ಏಪ್ರಿಲ್ 2017ರಿಂದ ಜಿಎಸ್ಟಿ ಮಸೂದೆಯನ್ನು ಜಾರಿಗೆ ತಂದು ಅನುಷ್ಠಾನಗೊಳಿಸುವ ಗುರಿ ಹೊಂದಿದ್ದ ರು ಅದು ಕಷ್ಟಸಾಧ್ಯವಾಗಿದೆ. ಏಕೆಂದರೆ ಉದ್ಯಮ ವಲಯ, ಕಂಪನಿಗಳು ಈ ವ್ಯವಸ್ಥೆಯನ್ನು ಅಳವಡಿಸಲಿ ಇನ್ನೂ ಸಿದ್ದತೆ ನಡೆಸಿಲ್ಲ.
ಜಿಎಸ್ಟಿ ಮಸೂದೆಯಿಂದಾಗಿ ಉದ್ಯಮ ವಲಯದ ಮೆಲೆ ಯಾವ ತರದ ಪರಿಣಾಮಗಳು ಉಂಟಾಗಬಹುದು? ಲಾಭ/ನಷ್ಟಗಳೇನು? ಎನ್ನುವುದರ ಬಗ್ಗೆ ತಜ್ಞರಿಂದ ಸಲಹೆಗಳನ್ನು ಪಡೆಯಲು ಉದ್ಯಮಿಗಳು ಮುಂದಾಗುತ್ತಿದ್ದಾರೆ.

ಮಸೂದೆಗೆ ರಾಜ್ಯಸಭೆಯ ಅಂಗೀಕಾರ ದೊರೆತಿದ್ದರೂ ಕಾಯಿದೆಯಾಗಿ ಬದಲಾಗಲು ಹೆಚ್ಚಿನ ಸಮಯ ಬೇಕಾಗಬಹುದು. ರೂ 134 ಲಕ್ಷ ಕೋಟಿ ಮೌಲ್ಯದಷ್ಟಿರುವ ಭಾರತದ ಆರ್ಥಿಕತೆಯನ್ನು ಮತ್ತು 130 ಕೋಟಿ ಗ್ರಾಹಕರನ್ನು ಜಿಎಸ್ಟಿ ಮಸೂದೆ ಇದೇ ಮೊದಲ ಬಾರಿ ಏಕರೂಪದ ವ್ಯವಸ್ಥೆಯಡಿಯಲ್ಲಿ ತರಲಿದೆ. ಒಟ್ಟಿನಲ್ಲಿ ಈ ಮಸೂದೆ ಬಗ್ಗೆ ಸರಿಯಾದ ಪರಿಕಲ್ಪನೆ ಇರದ ಕಂಪನಿಗಳು, ಇ-ಕಾಮರ್ಸ್ ಕಂಪನಿಗಳು, ಹಣಕಾಸು ಸಂಸ್ಥೆಗಳು ಆತಂಕದಲ್ಲಿರುವುದು ಸಹಜ.
ಹೀಗಾಗಿ ಜಿಎಸ್ಟಿ ಕಾಯಿದೆ ಕಾರ್ಯರೂಪಕ್ಕೆ ಬರುವಲ್ಲಿ ಹೆಚ್ಚು ಸಮಯ ತಗಲುವ ಸಾಧ್ಯತೆ ಇದೆ.


Click it and Unblock the Notifications