ಮುಖೇಶ್ ಅಂಬಾನಿ ನೇತೃತ್ವದ ರಿಲಾಯನ್ಸ್ ಜಿಯೊ ಇನ್ಫೊಕಾಂ ಕಂಪನಿ ದೇಶದಾದ್ಯಂತ 1.5 ಮಿಲಿಯನ್ ಗ್ರಾಹಕರಿಗೆ ಪರೀಕ್ಷಾರ್ಥ ಸೋಗಿನಲ್ಲಿ ಮುಕ್ತವಾಗಿ ಕೊಟ್ಟಿರುವ ಎಲ್ಲಾ ರೀತಿಯ ಸಂಪರ್ಕಗಳನ್ನು ಹಿಂಪಡೆಯಲು ತಿಳಿಸುವಂತೆ ದೇಶದ ಉನ್ನತ ಟೆಲಿಕಾಮ್ ಕಂಪನಿಗಳೆಲ್ಲವೂ ಟೆಲಿಕಾಂ ಇಲಾಖೆಗೆ ಅಗ್ರಹಿಸಿವೆ.
ಈ ಹಿನ್ನೆಲೆಯಲ್ಲಿ ದೇಶದ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳಾದ ಏರರ್ಟೆಲ್, ಐಡಿಯಾ, ವೋಡಾಪೊನ್ ಇಂಡಿಯಾ ಟೆಲಿಕಾಂ ಇಲಾಖೆಗೆ ದೂರುಗಳನ್ನು ಸಲ್ಲಿಸಿವೆ. ಇದು ಭಾರತದ ಟೆಲಿಕಾಂ ರಂಗದಲ್ಲಿ ಭಾರಿ ತಲ್ಲಣವನ್ನೆ ಸೃಷ್ಟಿಸಿದೆ.
ಪರವಾನಿಗಿ ಪತ್ರ
ಪ್ರಸ್ತುತ ಇರುವ ಪರವಾನಗಿ ಷರತ್ತಿನ ಪ್ರಕಾರ ಯಾವುದೇ ಪರೀಕ್ಷಾರ್ಥ, ಉಚಿತ ಧ್ವನಿ, ದತ್ತಾಂಶಗಳ ಸೇವೆ ಅಥವಾ ಪ್ರಯೋಗಗಳಿಗಾಗಿ ಅನುಮತಿ ಕೊಟ್ಟಿರುವುದಿಲ್ಲ. ಆದರೆ ರಿಲಾಯನ್ಸ್ ಜಿಯೊ ಪೂರ್ಣ ಪ್ರಮಾಣದ ಸೇವೆಗಳನ್ನು ಒದಗಿಸುತ್ತಿದೆ ಎಂದು ಸೆಲ್ಯೂಲರ್ ಅಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಟೆಲಿಕಾಂ ಕಾರ್ಯದರ್ಶಿ ಜೆ ಎಸ್ ದೀಪಕ್ ತಿಳಿಸಿದ್ದಾರೆ.
ರಾಜನ್ ಮ್ಯಾಥ್ಯೂ ಹೇಳಿಕೆ
ಇದು ಯಾವುದೇ ಪರೀಕ್ಷೆ ಅಲ್ಲ. ಆದರೆ ಪರೀಕ್ಷೆ ಮಾಡುವ ರೂಪದಲ್ಲಿ ಪೂರ್ಣ ಪ್ರಮಾಣದಲ್ಲಿ ಕೊಡುವ ಸೇವೆಯಾಗಿದೆ. ಇದು ನಿಯಮಗಳನ್ನು ಉಲ್ಲಂಘಿಸುವ ನೀತಿಯಾಗಿದೆ. ಅಂದರೆ ಪರಸ್ಪರ ಬಳಕೆಯ ಶುಲ್ಕ (interconnection usage charge) ಮೋಸಗೊಳಿಸುವ ಹುನ್ನಾರವಾಗಿದೆ. ಒಂದು ಕಂಪನಿಯ ನೆಟ್ವರ್ಕ್ ಬಳಸುವಾಗ ಆಯಾ ಟೆಲಿಕಾಂ ಕಂಪನಿಗಳು ಸೇವಾ ಶುಲ್ಕ ಪಾವತಿಸಿ ನ್ಯಾಯಯುತ ಸ್ಪರ್ಧೆ ಇರಬೇಕಾಗುತ್ತದೆ ಎಂದು COAI ಡೈರೆಕ್ಟರ ಜನರಲ್ ರಾಜನ್ ಮ್ಯಾಥ್ಯೂ ಏರರ್ಟೆಲ್, ವೋಡಾಪೋನ್ ಇಂಡಿಯಾ ಮತ್ತು ಐಡಿಯ ಕಂಪನಿಗೆ ತಿಳಿಸಿದ್ದಾರೆ.
COAI ಪತ್ರಕ್ಕೆ ರಿಲಾಯನ್ಸ್ ಪ್ರತಿಕ್ರಿಯೆ
ಉಚಿತ ಧ್ವನಿ ಮತ್ತು ಡೆಟಾ ಸೇವೆಗಳು ಪ್ರಸ್ತುತ 1.5 ಮಿಲಿಯನ್ ಬಳಕೆದಾರರು ಮಾತ್ರ ಪರೀಕ್ಷಾರ್ಥವಾಗಿ ಬಳಸುತ್ತಿದ್ದಾರೆ. ಇದನ್ನು ಮುಂಬರುವ ತಿಂಗಳುಗಳಲ್ಲಿ ಪೂರ್ಣವಾಗಿ ವಾಣಿಜ್ಯಾತ್ಮಕ ಸೇವೆಗಳಿಗೆ ಉನ್ನತೀಕರಿಸಲಾಗುವುದು ಹೇಳಿದೆ.
ಪ್ರಸ್ತುತ 20 ಮಾದರಿಗಳಲ್ಲಿ ಇದು ತನ್ನ ಸ್ವಂತ 20 LYF ಸ್ಮಾರ್ಟ್ಫೋನ್ ಹಾಗೂ 14 ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಮೂಲಕ ಪ್ರಯೋಗಾತ್ಮಕ ಚಾಲನೆ ಮಾಡುತ್ತಿದೆ ಎಂದು COAI ಇಲಾಖೆಯಿಂದ ಬಂದ ಪತ್ರಕ್ಕೆ ರಿಲಾಯನ್ಸ್ ಜಿಯೋ ಉತ್ತರಿಸಿದೆ.
ಅನಿಯಮಿತ ಉಚಿತ ಸೇವೆ
ಈ ಸ್ಮಾರ್ಟ್ಫೋನ್ ಗಳನ್ನು ಖರೀದಿ ಮಾಡಿದ ಗ್ರಾಹಕರಿಗೆ ಮೂರು ತಿಂಗಳ ಅನಿಯಮಿತ ಡೆಟಾ ಮತ್ತು ಧ್ವನಿ ಉಚಿತವಾಗಿ ನೀಡಲಾಗಿದೆ. ಆದರೆ ಈ ಆಫರ್ ರಿಲಾಯನ್ಸ್ ಇಂಡಸ್ಟ್ರಿಸ್ ಉದ್ಯೋಗಿಗಳಿಗೆ ಮಾತ್ರ ಅನ್ವಯಿಸುತ್ತದೆ. ಆದರೆ ಇದನ್ನು ಚಿಲ್ಲರೆ ಗ್ರಾಹಕರಿಗೂ ವಿಸ್ತರಿಸಲಾಗಿದೆ.
ಟೆಲಿಕಾಂ ಕಂಪನಿಗಳ ಒತ್ತಾಯ
ಪರವಾನಗಿ ಷರತ್ತು, ನಿಬಂದನೆಗಳು ಮತ್ತು ಪ್ರಯೋಗಾತ್ಮಕ ಚಾಲನೆಯನ್ನು ಹಾಗೂ ಜಿಯೊ ಒದಗಿಸುತ್ತಿರುವ ಎಲ್ಲಾ ಸೇವೆಗಳನ್ನು ತಕ್ಷಣವೇ ನಿಲ್ಲಿಸಬೇಕೆಂದು ಟೆಲಿಕಾಂ ಕಂಪನಿಗಳು ಒತ್ತಾಯಿಸಿವೆ.
ಮೊಬೈಲ್ ಪೋನ್ ಸೇವೆ
ಮುಖೇಶ್ ಅಂಬಾನಿ ನೇತೃತ್ವದ ಕಂಪನಿ 2010ರಲ್ಲಿ ಮೊಬೈಲ್ ಪೋನ್ ಸೇವೆಗಳನ್ನು ಒದಗಿಸುವುದಾಗಿ ಹೇಳಿತ್ತು. ಆದರೆ ಇಲ್ಲಿಯವರೆಗೂ ಸೇವೆಯನ್ನು ಒದಗಿಸದೆ ದೂರ ಉಳಿದಿದೆ. ಇತ್ತೀಚಿನ ಪತ್ರದಲ್ಲಿ ಆ ನೀತಿಯಿಂದ ದೂರ ಸರಿಯುತ್ತಿರುವುದು ರುಜುವಾತು ಆಗಿದೆ.
ಸ್ಪೆಕ್ಟ್ರಮ್ ಬಳಕೆ ಶುಲ್ಕ, ಕರೆ ಮುಕ್ತಾಯ ಶುಲ್ಕ ಅಥವಾ ಇಂಟರ್ ಕನೆಕ್ಟ್ ಶುಲ್ಕ(IUC) ಇತ್ಯಾದಿ ನಿಯಮ ಗಳನ್ನು ಕಂಪನಿಗಳು ಪಾಲಿಸದೆ ವಿರುದ್ದವಾಗಿ ನಡೆಯುತ್ತಿವೆ.
ಜಿಯೋ ಅಗಸ್ಟ್ 15ರಿಂದ ೪ಜಿ ಉಚಿತ ಸೇವೆ
ಮುಖೇಶ್ ಅಂಬಾನಿ ನೇತೃತ್ವದ ರಿಲಾಯನ್ಸ್ ಜಿಯೋ ಇನ್ಫೋಕಾಂ ಕಂಪನಿಯು ಭಾರತದಾದ್ಯಂತ 4ಜಿ ಡೆಟಾ ಸೇವೆಯೊಂದಿಗೆ ಉಚಿತವಾಗಿ ಧ್ವನಿ ಸೇವೆಯನ್ನು ಕೊಡುತ್ತೇವೆ ಎಂದು ಹೇಳಿದ್ದು, ಅಗಸ್ಟ್ 15ರಿಂದ ಸೇವೆ ಆರಂಭಿಸಲು ಕಂಪನಿ ಚಿಂತಿಸಿದೆ.
ಇದು ಉತ್ತಮ ತಂತ್ರಜ್ಞಾನದ ಲಾಭ, ಉತ್ಕೃಷ್ಟ ಧ್ವನಿ, ಉತ್ತಮ ಗುಣಮಟ್ಟದ ಕರೆ ಮತ್ತು ಕಡಿಮೆ ಅಂತರ್ಜಾಲ ಲೋಡಿಂಗ್ ಸೇರಿದಂತೆ ಅನೇಕ ಪ್ರಯೋಜನಗಳನ್ನು ಹೊಂದಿದೆ.
ಜಿಯೋ ಮುಂದಿನ ಕೆಲ ವರ್ಷಗಳಲ್ಲಿ ದಟ್ಟಣೆ ಇಲ್ಲದೆ ಅನಿಯಮಿತ ಧ್ವನಿ ನೀಡಲು ಸಾಕಷ್ಟು ಸಾಮರ್ಥ್ಯ (850, 1800, 2300 ಮೆಗಾ ಹರ್ಟ್ಜ್) ಹೊಂದಿರುತ್ತದೆ ಎಂದು ತಿಳಿಸಿದ್ದಾರೆ.


Click it and Unblock the Notifications