ಆನ್ಲೈನ್ ಸಾರಿಗೆ ಸೇವೆ ಒದಗಿಸುವ ಒಲಾ ಕ್ಯಾಬ್ ಭಾರತದ ಸಾರಿಗೆ ವಲಯದ ಪ್ರಮುಖ ಕಂಪನಿ. ಒಲಾ 2015ರ ಮಾರ್ಚ್ ನಲ್ಲಿ $ 200 ಮಿಲಿಯನ್ ಗೆ ಟ್ಯಾಕ್ಸಿ ಫಾರ್ ಶೂರ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡು ತನ್ನ ಸೇವಾ ಜಾಲವನ್ನು ದೇಶದಾದ್ಯಂತ ವಿಸ್ತರಿಸಿತ್ತು.
ಆದರೆ ಪ್ರಸಕ್ತ ಬೆಳವಣಿಗೆಯಲ್ಲಿ ಒಲಾ ಕ್ಯಾಬ್ ಟ್ಯಾಕ್ಸಿ ಫಾರ್ ಶೂರ್ ಸ್ವಾಧೀನವನ್ನು ಕೈಬಿಟ್ಟಿದ್ದು, ಅದರಿಂದ ಪ್ರತ್ಯೇಕಗೊಂಡಿದೆ. ಈ ಹಿನ್ನೆಲೆಯಲ್ಲಿ ನೂರಾರು ಉದ್ಯೋಗಿಗಳಿಗೆ ಕದ ಮುಚ್ಚಿದಂತಾಗಿದೆ.
700 ಉದ್ಯೋಗಿಗಳ ವಜಾ
ಭಾರತದ ದೊಡ್ಡ ಟ್ಯಾಕ್ಸಿ ಸೇವಾ ಕಂಪನಿಯಾದ ಓಲಾ ಟ್ಯಾಕ್ಸಿ ಫಾರ್ ಶೂರ್(TaxiForSure) ವ್ಯವಹಾರವನ್ನು ಮುಚ್ಚಿದೆ. ಈ ಪ್ರಕ್ರಿಯೆಯಲ್ಲಿ 700 ಉದ್ಯೋಗಿಗಳನ್ನು ವಜಾಗೊಳಿಸಿದೆ. ಖರ್ಚುವೆಚ್ಚವನ್ನು ಸರಿದೂಗಿಸಲು ಪ್ರಯತ್ನಿಸಿದೆ.
ಉಬರ್ ಜತೆ ಪೈಪೋಟಿ
ಒಲಾ ಕ್ಯಾಬ್ ಉಬರ್ ಗೆ ಸಮಾನ ಸ್ಪರ್ಧಿಯಾಗಿ ತನ್ನ ಸ್ಥಾನವನ್ನು ಭದ್ರಪಡಿಸಲು ಪ್ರಯತ್ನಿಸಿತ್ತು. ಉಬರ್ ಆಕ್ರಮಣವನ್ನು ಹಿಮ್ಮೆಟ್ಟಿಸಲು, ವ್ಯಯವಾಗುವ ನಗದನ್ನು ಸರಿದೂಗಿಸಲು ಮತ್ತು ತನ್ನ ಸ್ಥಾನವನ್ನು ಭದ್ರಪಡಿಸಲು ಒಲಾ ಪ್ರಯತ್ನಿಸುತ್ತಿದೆ.
ಒಲಾದಿಂದ ಟ್ಯಾಕ್ಸಿ ಫಾರ್ ಶೂರ್ ಸ್ವಾಧೀನ
ಉಬರ್ ವಿರುದ್ದ ತನ್ನ ಸ್ಥಾನವನ್ನು ಮಾರುಕಟ್ಟೆಯಲ್ಲಿ ಭದ್ರಪಡಿಸಿಕೊಳ್ಳಲು 2015ರ ಮಾರ್ಚ್ ನಲ್ಲಿ $ 200 ಮಿಲಿಯನ್ ಗೆ ಟ್ಯಾಕ್ಸಿ ಫಾರ್ ಶೂರ್ ಕಂಪನಿಯನ್ನು ಓಲಾ ಕ್ಯಾಬ್ ಸ್ವಾಧೀನಪಡಿಸಿಕೊಂಡಿತ್ತು.
TFS ಸ್ವತಂತ್ರ ಅಸ್ತಿತ್ವ
ಇನ್ನು ಮುಂದೆ ಟ್ಯಾಕ್ಸಿ ಫಾರ್ ಶೂರ್ ಒಂದು ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಚಾಲಕರು TFS ವೇದಿಕೆ ಅಡಿಯಲ್ಲಿ ಶೀಘ್ರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಓಲಾ ತಿಳಿಸಿದೆ.
ಒಲಾ ಸೇವಾ ಸಾಧನೆ
ಟ್ಯಾಕ್ಸಿ ಫಾರ್ ಶೂರ್ ಸ್ವಾಧೀನಪಡಿಸಿಕೊಂಡು ಒಲಾ ಕ್ಯಾಬ್ ದೇಶದಾದ್ಯಂತ ಹೊಸ ಸಂಚಲನವನ್ನೆ ಹುಟ್ಟಿಸಿತ್ತು. ಕಡಿಮೆ ಅವಧಿಯಲ್ಲಿ ದೇಶದ 90 ನಗರಗಳಿಗೆ ತನ್ನ ಸೇವಾ ಕಾರ್ಯವನ್ನು ವಿಸ್ತರಿಸಿತ್ತು. ಈ ಯಶಸ್ಸಿಗೆ ಟ್ಯಾಕ್ಸಿ ಫಾರ್ ಶೂರ್ ಪಾಲು ಬಹುದೊಡ್ಡದಾಗಿದೆ.
ಮೊಬೈಲಿಟಿ ಪ್ಲಾಟ್‌ಫಾರ್ಮ್
ಮೊಬೈಲಿಟಿ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಮೊದಲ ಬಾರಿಗೆ ಕ್ಯಾಬ್ ಬಳಕೆದಾರರ ಬಹುದೊಡ್ಡ ಪಾಲನ್ನು ಒಲಾ ಪಡೆದುಕೊಂಡಿತ್ತು. ಇದರಿಂದಾಗಿ ದೇಶದಾದ್ಯಂತ ಲಕ್ಷಾಂತರ ಗ್ರಾಹಕರಿಗೆ ಸೇವೆ ಕಲ್ಪಿಸುವ ಉದ್ದೇಶ ಈಡೇರಿಸಲು ಸಾಧ್ಯವಾಗಿದೆ. ಜತೆಗೆ TFS ಚಾಲಕರು, ಪಾಲುದಾರರು ಮತ್ತು ಒಲಾ ಆಪ್ ಮೂಲಕ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಒಲಾ ತಿಳಿಸಿದೆ.
18 ತಿಂಗಳಲ್ಲಿ ದಕ್ಷ ಸಾಧನೆ
ಕಳೆದ 18 ತಿಂಗಳ ಅವಧಿಯಲ್ಲಿ ನಮ್ಮೆಲ್ಲರ ಒಗ್ಗೂಡಿಕೆಯಿಂದಾಗಿ ಹಾಗೂ ಚಾಲಕರ, ಪಾಲುದಾರರ ಸುಧಾರಿತ ಅನುಭವದಿಂದಾಗಿ ದಕ್ಷತೆಯ ಕಾರ್ಯಾಚರಣೆ ಮಾಡಲು ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಯಿತು. ಒಲಾ ಅಭಿವೃದ್ಧಿಯಲ್ಲಿ TFS ಚಾಲಕರ ಕೊಡುಗೆ ತುಂಬಾ ಇದೆ ಎಂದು ಕಂಪನಿ ತಿಳಿಸಿದೆ.
ವಿಭಿನ್ನ ಪರಿಕಲ್ಪನೆ-ವಿಬಿನ್ನ ಬೆಲೆ
ಒಲಾ ಕಂಪನಿ ಟ್ಯಾಕ್ಸಿ ಫಾರ್ ಶೂರ್ ನಿಂದ ದೂರ ಆಗಿದೆ. ಈಗ ಒಲಾ ಕಂಪನಿ ವಿಭಿನ್ನ ಕೆಟಗರಿಗಳನ್ನು ಮತ್ತು ಭಿನ್ನ ಕೆಟಗರಿಗೆ ಅನುಗುಣವಾಗಿ ವಿಭಿನ್ನ ಬೆಲೆಗಳನ್ನು ಸ್ವೀಕರಿಸಲು ಯೋಚಿಸಿದೆ.
ಒಲಾ ಆಟೋ ರಿಕ್ಷಾಗಳನ್ನು ಹೊರತುಪಡಿಸಿ ತನ್ನ ವೇದಿಕೆಯಲ್ಲಿ ಮೈಕ್ರೊ, ಮಿನಿ, ಪ್ರೈಮ್ ಮತ್ತು ಲಕ್ಸ್ ಕೆಟಗರಿಗಳನ್ನು ಹೊಂದಿದೆ.


Click it and Unblock the Notifications