ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ (ಎಸ್ಬಿಐ) ಜತೆಗಿನ ವಿಲೀನದ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ (ಎಸ್ಬಿಎಂ) ಷೇರುಗಳು ಶೇ. 10ರಷ್ಟು ಕುಸಿತ ಕಂಡಿವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನದ ನಂತರ ಎಸ್ಬಿಎಂ ನ ಷೇರುಗಳಲ್ಲಿ ಹೂಡಿಕೆ ಮಾಡಿದ ಷೇರುದಾರರು ಈ ಕುಸಿತದಿಂದ ಸಂತೋಷವಾಗಿಲ್ಲ.
ಎಲ್ಲ ಐದು ಸಹವರ್ತಿ ಬ್ಯಾಂಕುಗಳನ್ನು ಎಸ್ಬಿಐನಲ್ಲಿ ವಿಲೀನ ಮಾಡಲು ಕೇಂದ್ರ ಸರ್ಕಾರ ಈಗಾಗಲೇ ಸಮ್ಮತಿ ನೀಡಿದೆ. ಎಸ್ಬಿಐ ಜತೆಗಿನ ವಿಲೀನದ ಪ್ರಸಕ್ತ ಬೆಳವಣಿಗೆ ಹಾಗೂ ಷೇರುಗಳ ಮೇಲಿನ ಪ್ರಭಾವದ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.
ಎಸ್ಬಿಐ ಅನುಮೋದನೆ
ಜಾಗತಿಕ ಗಾತ್ರದ ಬೃಹತ್ ಬ್ಯಾಂಕ್ ಆಗಿ ರೂಪುಗೊಳ್ಳುವ ನಿಟ್ಟಿನಲ್ಲಿ ಐದು ಸಹವರ್ತಿ ಬ್ಯಾಂಕುಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕ್(ಬಿಎಂಬಿಎಲ್) ವಿಲೀನಗೊಳಿಸುವುದಕ್ಕೆ ಎಸ್ಬಿಐ ನಿರ್ದೇಶಕ ಮಂಡಳಿ ಅನುಮೋದನೆ ನೀಡಿದೆ.
ಸಹವರ್ತಿ ಬ್ಯಾಂಕುಗಳು
ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ಟ್ರವಾಂಕೂರ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಪೆಟಿಯಾಲಾ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಇವು ಎಸ್ಬಿಐನ ಸಹವರ್ತಿ ಬ್ಯಾಂಕುಗಳಾಗಿವೆ.
ಎಸ್ಬಿಎಂ ಷೇರು
ಎಸ್ಬಿಎಂ ಷೇರುದಾರರು ಪ್ರತಿ 10 ಷೇರುಗಳಿಗೆ ಎಸ್ಬಿಐ ನ 22 ಷೇರುಗಳನ್ನು ಪಡೆಯಲಿದ್ದಾರೆ.
ಷೇರುಗಳ ಮುಖಬೆಲೆ
ವಿಲೀನ ಪ್ರಸ್ತಾವನೆ ಪ್ರಕಾರ ಎಸ್ಬಿಬಿಜೆ ಷೇರುದಾರರು ರೂ. 10 ಮುಖಬೆಲೆಯ ಪ್ರತಿ 10 ಷೇರುಗಳಿಗೆ ಎಸ್ಬಿಐನ(ರೂ. 1 ಮುಖಬೆಲೆ) 28 ಷೇರುಗಳನ್ನು ಪಡೆಯಲಿದ್ದಾರೆ. ಎಸ್ಬಿಟಿ ಷೇರುದಾರರು ಪ್ರತಿ 10 ಷೇರುಗಳಿಗೆ ಎಸ್ಬಿಐ ನ 22 ಷೇರುಗಳನ್ನು ಪಡೆಯಲಿದ್ದಾರೆ.
ಜಾಗತಿಕ ಬೃಹತ್ ಬ್ಯಾಂಕು
ಸಹವರ್ತಿ ಬ್ಯಾಂಕುಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕ್(ಬಿಎಂಬಿಎಲ್) ವಿಲೀನದ ನಂತರ ಎಸ್ಬಿಐ ಜಾಗತಿಕ ಗಾತ್ರದ ಬೃಹತ್ ಬ್ಯಾಂಕು ಆಗಲಿದೆ. ಈ ಹಿನ್ನೆಲೆಯಲ್ಲಿ ಎಸ್ಬಿಐ ಜಾಗತಿಕವಾಗಿ 50ರ ಪಟ್ಟಿಯಲ್ಲಿ ಬರಲಿದೆ.
ಷೇರುಪೇಟೆ ವಹಿವಾಟು
ನಿನ್ನೆಯ ಮುಂಬೈ ಷೇರುಪೇಟೆಯ ವಹಿವಾಟಿನಲ್ಲಿ ಎಸ್ಬಿಬಿಜೆ ಮತ್ತು ಎಸ್ಬಿಎಂ ಷೇರುಗಳು ಕ್ರಮವಾಗಿ ಶೇ. 3.49 ಮತ್ತು ಶೇ. 2.06ರಷ್ಟು ಏರಿಕೆ ದಾಖಲಿಸಿವೆ.
Read More In English: SBI Will Now Be In The Top 50 Banks Globally


Click it and Unblock the Notifications