ಇ-ಕೆವೈಸಿ: ಮೊಬೈಲ್ ಸಂಪರ್ಕ ಇನ್ನಷ್ಟು ಸುಲಭ

ಹೊಸದಾಗಿ ಮೊಬೈಲ್ ಸಂಪರ್ಕ ಪಡೆಯುವುದನ್ನು ಸರ್ಕಾರ ಈಗ ಇನ್ನಷ್ಟು ಸುಲಭಗೊಳಿಸಿದೆ.

ಕಾಗದ ರೂಪದಲ್ಲಿ ವಿವಿಧ ದಾಖಲಾತಿಗಳನ್ನು ಕೊಡುವ ಬದಲಿಗೆ ಆಧಾರ್ ಮತ್ತು ಬೆರಳ ಗುರುತು ನೀಡಿ ಹೊಸ ಮೊಬೈಲ್ ಸಂಪರ್ಕವನ್ನು ಪಡೆಯಬಹುದಾಗಿದೆ. ಇದಕ್ಕಾಗಿ ಇ-ಕೆವೈಸಿ(ನಿಮ್ಮ ಗ್ರಾಹಕರ ತಿಳಿಯಿರಿ) ಎಂಬ ಮಾರ್ಗದರ್ಶಿ ಸೂತ್ರವನ್ನು ಮೊಬೈಲ್ ಸಂಪರ್ಕವನ್ನು ಪಡೆಯಲು ಅಳವಡಿಸಿದೆ.

ಇ-ಕೆವೈಸಿ ಮೂಲಕ ಪೂರ್ವ ಪಾವತಿ ಮತ್ತು ನಂತರ ಪಾವತಿಯ ಹೊಸ ಮೊಬೈಲ್ ಸಂಪರ್ಕವನ್ನು ಪಡೆಯುವ ಅರ್ಜಿಗಳನ್ನು ಆನ್ಲೈನ್ ನಲ್ಲಿಯೇ ಸಲ್ಲಿಸಬಹುದಾಗಿದೆ.

ಇ-ಕೆವೈಸಿ: ಮೊಬೈಲ್ ಸಂಪರ್ಕ ಇನ್ನಷ್ಟು ಸುಲಭ

ಇ-ಕೆವೈಸಿಯಲ್ಲಿ ಗ್ರಾಹಕರು ತಮ್ಮ ಆಧಾರ್ ಮತ್ತು ಜೈವಿಕ ವಿವರಗಳನ್ನು ದಾಖಲಿಸುವುದರ ಮೂಲಕ ಮೊಬೈಲ್ ಸೇವಾ ಸಂಸ್ಥೆಗೆ ವೈಯಕ್ತಿಕ ವಿವರಗಳನ್ನು ನೀಡಬೇಕಾಗುತ್ತದೆ. ಇದರಿಂದ ಹೊಸ ಸಿಮ್ ವಿತರಣೆ ಪ್ರಕ್ರಿಯೆ ಸರಳಗೊಳ್ಳಲಿದೆ. ಈ ಸೌಲಭ್ಯ ಹೊಸ ಮೊಬೈಲ್ ಸಂಪರ್ಕವನ್ನು ಕ್ರಿಯಾಶೀಲಗೊಳಿಸುವ ಮತ್ತು ದಾಖಲೆ ದೃಢೀಕರಣ ತ್ವರಿತಗೊಳಿಸಲಿದ್ದು, ಹೆಚ್ಚು ಸುರಕ್ಷತೆ ಸಾಧ್ಯ ಆಗಲಿದೆ.

ಇ-ಕೆವೈಸಿ ಆಧಾರಿತ ಸೌಲಭ್ಯಗಳನ್ನು ಶೀಘ್ರದಲ್ಲಿಯೇ ಆರಂಭಿಸುವುದಾಗಿ ಮೊಬೈಲ್ ಸೇವಾ ಸಂಸ್ಥೆಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+