ಎಸ್ಬಿಐ(SBI) ಬ್ಯಾಂಕು ಜಾಗತಿಕವಾಗಿ ಅಗ್ರ 50ರ ಪಟ್ಟಿಯಲ್ಲಿ ಸೇರ್ಪಡೆ!

ದೇಶದ ಅತಿ ದೊಡ್ಡ ಬ್ಯಾಂಕು ಎಂಬ ಖ್ಯಾತಿಯ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯ ತನ್ನ ಸಹವರ್ತಿ ಬ್ಯಾಂಕುಗಳಾದ ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ಟ್ರವಾಂಕೂರ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಜೊತೆ ವಿಲೀನ ಅಂಗೀಕಾರ ಮಾಡಿಕೊಂಡಿದೆ.

ವಿಲೀನ ಅಂಗೀಕಾರದ ಹಿನ್ನೆಲೆಯಲ್ಲಿ ಆದ ಕೆಲ ಪರಿಣಾಮ ಮತ್ತು ಬದಲಾವಣೆಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಜಾಗತಿಕವಾಗಿ ಅಗ್ರ 50ರ ಪಟ್ಟಿಯಲ್ಲಿ ಸೇರ್ಪಡೆ

ಜಾಗತಿಕವಾಗಿ ಅಗ್ರ 50ರ ಪಟ್ಟಿಯಲ್ಲಿ ಸೇರ್ಪಡೆ

ಹೊಸ ವರದಿಯ ಪ್ರಕಾರ ಸಹವರ್ತಿ ಬ್ಯಾಂಕುಗಳೊಂದಿಗಿನ ವಿಲೀನದ ನಂತರ ಎಸ್ಬಿಐ ಬ್ಯಾಂಕು ಜಾಗತಿಕವಾಗಿ ಅಗ್ರ 50 ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ. ಇದು ಭಾರತೀಯರೆಲ್ಲರಿಗೂ ಹೆಮ್ಮೆಯ ವಿಷಯ.

37,000 ಲಕ್ಷ ಕೋಟಿ ಬೃಹತ್ ಆಸ್ತಿ

37,000 ಲಕ್ಷ ಕೋಟಿ ಬೃಹತ್ ಆಸ್ತಿ

ವಿಲೀನದ ಪ್ರಸ್ತಾಪ ಯಶಸ್ವಿಯಾದ ನಂತರ ಎಸ್ಬಿಐ 37,000 ಲಕ್ಷ ಕೋಟಿ ಆಸ್ತಿಯನ್ನು ಹೊಂದಿದಂತಾಗಿದೆ.
ಜತೆಗೆ ಭಾರತದಲ್ಲಿ ವ್ಯಾಪಕ ಜಾಲವನ್ನು ಹೊಂದಿರುವ ಬೃಹತ್ ಬ್ಯಾಂಕಾಗಿ ಹೊರಹೊಮ್ಮಿದೆ.

ಐಸಿಐಸಿಐ ಬ್ಯಾಂಕಿಗಿಂತ ವ್ಯಾಪಕ ಅಂತರ

ಐಸಿಐಸಿಐ ಬ್ಯಾಂಕಿಗಿಂತ ವ್ಯಾಪಕ ಅಂತರ

ಎಸ್ಬಿಐ ಗಾತ್ರ, ಕಾರ್ಯವ್ಯಾಪ್ತಿಯ ದೃಷ್ಟಿಯಿಂದ ಐಸಿಐಸಿಐ ಬ್ಯಾಂಕಿಗಿಂತ ವ್ಯಾಪಕ ಅಂತರವನ್ನು ಹೊಂದಿದೆ. ಎಸ್ಬಿಐ ಬ್ಯಾಂಕಿನ ವ್ಯಾಪ್ತಿ ದೇಶದ ಮೂಲೆ ಮೂಲೆಗಳಲ್ಲು ಹರಡಿದೆ.

ಯಾರಿಗೆ ಏನು ಲಾಭ?

ಯಾರಿಗೆ ಏನು ಲಾಭ?

ಎಸ್ಬಿಎಂ ಷೇರುದಾರರು ಪ್ರತಿ 10 ಷೇರುಗಳಿಗೆ ಎಸ್ಬಿಐ ನ 22 ಷೇರುಗಳನ್ನು ಪಡೆಯಲಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ್ ಷೇರುದಾರರು ರೂ. 10 ಮುಖಬೆಲೆಯ ಪ್ರತಿ 10 ಷೇರುಗಳಿಗೆ ಎಸ್ಬಿಐನ(ರೂ. 1 ಮುಖಬೆಲೆ) 28 ಷೇರುಗಳನ್ನು ಪಡೆಯಲಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಟ್ರವಾಂಕೂರ್ ಷೇರುದಾರರು ಪ್ರತಿ 10 ಷೇರುಗಳಿಗೆ ಎಸ್ಬಿಐ ನ 22 ಷೇರುಗಳನ್ನು ಪಡೆಯಲಿದ್ದಾರೆ.

ಇನ್ನೀತರ ಸಹವರ್ತಿ ಬ್ಯಾಂಕುಗಳು ವಿಲೀನ ಆಗುವ ಸಾಧ್ಯತೆ

ಇನ್ನೀತರ ಸಹವರ್ತಿ ಬ್ಯಾಂಕುಗಳು ವಿಲೀನ ಆಗುವ ಸಾಧ್ಯತೆ

ಸ್ಟೇಟ್ ಬ್ಯಾಂಕ್ ಆಫ್ ಪೆಟಿಯಾಲಾ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಇವು ಮುಂದಿನ ದಿನಗಳಲ್ಲಿ ಎಸ್ಬಿಐ ನೊಂದಿಗೆ ವಿಲೀನಗೊಳ್ಳಬಹುದು.

ವಿಲೀನವನ್ನು ಷೇರುದಾರರು ಹೇಗೆ ನೋಡುತ್ತಿದ್ದಾರೆ?

ವಿಲೀನವನ್ನು ಷೇರುದಾರರು ಹೇಗೆ ನೋಡುತ್ತಿದ್ದಾರೆ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ (ಎಸ್ಬಿಐ) ಜತೆಗಿನ ವಿಲೀನದ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ (ಎಸ್ಬಿಎಂ) ಷೇರುಗಳು ಶೇ. 10ರಷ್ಟು ಕುಸಿತ ಕಂಡಿದೆ.
ಹಾಗೆಯೇ ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಟ್ರವಾಂಕೂರ್ ಷೇರುಗಳ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+