ಉಚಿತ ಆನ್ಲೈನ್ ಕಲಿಕಾ ವೇದಿಕೆ ಅನ್ಅಕಾಡೆಮಿಯಿಂದ 1 ಮಿಲಿಯನ್ ಡಾಲರ್ ಸಂಗ್ರಹ
ಉಚಿತ ಆನ್ಲೈನ್ ಕಲಿಕಾ ವೇದಿಕೆಗಾಗಿ ಹೆಚ್ಚುವರಿ 1 ಮಿಲಿಯನ್ ಡಾಲರ್ ಮೊತ್ತವನ್ನು ಎರಡನೇ ಸುತ್ತಿನಲ್ಲಿ ಸಂಗ್ರಹಿಸಲಾಗಿದೆ ಎಂದು ಅನ್ಅಕಾಡೆಮಿ(Unacademy) ಬುಧವಾರ ಘೋಷಿಸಿದೆ.
ಸ್ಟ್ಯಾನ್ಫರ್ಡ್ ಏಂಜೆಲ್ಸ್ ಇಂಡಿಯ, ವಾಟರ್ ಬ್ರಿಡ್ಜ್ ವೆಂಚರ್ಸ್, ಸಚಿನ್ ಬನ್ಸಾಲ್, ಬಿನ್ನಿ ಬನ್ಸಾಲ್, ವಿಜಯ್ ಶೇಖರ್ ಶರ್ಮಾ, ಕುನಾಲ್ ಶಾ, ಸಂದೀಪ ಟಂಡನ್, ಟ್ರ್ಯಾಕ್ಸನ್ ಲ್ಯಾಬ್ಸ್ ಸಹಯೋಗದೊಂದಿಗೆ ಬ್ಲೂಮ್ ವೆಂಚರ್ಸ್ ನೇತೃತ್ವದಲ್ಲಿ ಎರಡನೇ ಹಂತದ ಹೊಸ ಬಂಡವಾಳವನ್ನು ಸಂಗ್ರಹಿಸಲಾಯಿತು.

ಬಹುತೇಕ ಆರಂಭಿಕ ಹಂತದಲ್ಲಿರುವ ಸ್ಟಾರ್ಟ್ಅಪ್ ಹೂಡಿಕೆದಾರರು ಈ ಸುತ್ತಿನಲ್ಲಿ ಭಾಗವಹಿಸಿದ್ದರು. ಉತ್ಪನ್ನ ತಂತ್ರಜ್ಞಾನ, ಸಂಶೋಧನೆ, ಅಭಿವೃದ್ಧಿ ಮತ್ತು ನೇಮಕಾತಿಗಾಗಿ ಈ ಬಂಡವಾಳವನ್ನು ವಿನಿಯೋಗಿಸಲಾಗುವುದು.
ಗೌರವ್ ಮಂಜುಳ್, ರೋಮನ್ ಸೈನಿ, ಹಿಮೇಶ್ ಸಿಂಗ್, ಸಚಿನ್ ಗುಪ್ತ ಇವರು ಅನ್ಅಕಾಡೆಮಿ(Unacademy) ಸಂಸ್ಥಾಪಕರಾಗಿದ್ದಾರೆ. ಇದು ಶೈಕ್ಷಣಿಕ ಯುಟ್ಯೂಬ್ ಚಾನೆಲ್ ಆಗಿದೆ. ಇದು ಭಾರತದ ದೊಡ್ಡ ಉಚಿತ ಆನ್ಲೈನ್ ಕಲಿಕಾ ವೇದಿಕೆಯಾಗಿದೆ.


Click it and Unblock the Notifications