ಅತಿ ಶೀಘ್ರದಲ್ಲಿಯೇ ತನ್ನ ವಾಣಿಜ್ಯ ಸೇವೆಗಳನ್ನು ರಿಲಾಯನ್ಸ್ ಜಿಯೊ ಪ್ರಾರಂಭಿಸಲಿದೆ ಎಂದು ತಿಳಿಸಿದ್ದು, ರಿಲಾಯನ್ಸ್ ಜಿಯೊ ಪ್ರಿವೀವ್ ಆಫರ್ ಇತರೆ ಸ್ಮಾರ್ಟ್ ಫೋನ್ ಗಳಿಗೂ ಸಹ ಆರಂಭವಾಗಿದೆ.
ರಿಲಾಯನ್ಸ್ ಜಿಯೊ ಇತ್ತೀಚಿನ ದಿನಗಳಲ್ಲಿ ತುಂಬಾ ಸುದ್ದಿ ಮಾಡುತ್ತಿದ್ದು, ಇದು ಗ್ರಾಹಕರಿಗೆ ರಿಲಾಯನ್ಸ್ ಜಿಯೊ ಸಿಮ್ ಮೂಲಕ ಒದಗಿಸುತ್ತಿರುವ ಕೊಡುಗೆಗಳ ಮಾಹಿತಿ ಇಲ್ಲಿದೆ.
ಸಂಸ್ಥೆಗಳ ಜತೆ ಒಪ್ಪಂದ
ಗ್ರಾಹಕರನ್ನು ಸೆಳೆಯಲು ಸ್ಯಾಮ್ಸಂಗ್, ಎಲ್ ಜಿ, ಮೈಕ್ರೊಮ್ಯಾಕ್ಸ್ ಮತ್ತು ಪಾನಾಸೋನಿಕ್ ಸಂಸ್ಥೆಗಳ ಜತೆ ರಿಲಾಯನ್ಸ್ ಜಿಯೊ ಒಪ್ಪಂದ ಮಾಡಿಕೊಂಡಿದೆ.
ಉಚಿತ ಸೇವೆಗಳು
ಈ ಸಂಸ್ಥೆಗಳ ಸ್ಮಾರ್ಟ್ ಫೋನ್ ಖರೀದಿಸುವ ಗ್ರಾಹಕರಿಗೆ ತನ್ನ ೪ಜಿ ಸಿಮ್ ಕೊಡುಗೆ ಅಗಣಿತ ಉಚಿತ ಧ್ವನಿ ಮತ್ತು ಉಚಿತ ಅನಿಯಮಿತ ಡೇಟಾ, ಎಸ್ಎಂಎಸ್, ವಿಡಿಯೋ ಕರೆ ಮತ್ತು ಜಿಯೊ ಆಪ್ಸ್ ಗಳನ್ನು ಒಳಗೊಂಡಿರುತ್ತದೆ. ಈ ಸೇವೆಗಳನ್ನು 90 ದಿನಗಳವರೆಗೆ ಉಚಿತವಾಗಿ ನೀಡಲಿದೆ.
ರಿಲಾಯನ್ಸ್ ಜಿಯೊ ಸಿಮ್ ಸೇವೆ
ಮೊದಲಿಗೆ ರಿಲಾಯನ್ಸ್ ಜಿಯೊ ಸಿಮ್ ರಿಲಾಯನ್ಸ್ ಉದ್ಯೋಗಿಗಳಿಗೆ ಸಿಗಲಿದ್ದು, ತದನಂತರ ರಿಲಾಯನ್ಸ್ ಜತೆ ಒಪ್ಪಂದ ಮಾಡಿಕೊಂಡ ಬ್ರ್ಯಾಂಡೆಡ್ ಸ್ಮಾರ್ಟ್ ಫೋನ್ ಗಳಿಗೆ ಲಭ್ಯವಾಗಲಿದೆ.
ಜಿಯೊ ಆಫರ್ ವಿಸ್ತಾರ
ಮೊದಲಿಗೆ ಈ ಆಫರ್ ಪ್ರಾಥಮಿಕವಾಗಿ ರಿಲಾಯನ್ಸ್ ಲೈಪ್ ಸ್ಮಾರ್ಟ್ ಫೋನ್ ಗಳಿಗೆ ಮಾತ್ರ ಅನಾವರಣಗೊಂಡಿತ್ತು. ಆದರೆ ಈಗ ಇತರೆ ಸ್ಮಾರ್ಟ್ ಫೋನ್ ಬ್ರಾಂಡ್ ಗಳಿಗೂ ಸಹ ಆಫರ್ ಆರಂಭಿಸಿದೆ.
ಪೋರ್ಟ್ ಆಗುವಂತೆ ರಿಲಾಯನ್ಸ್ ಸೂಚನೆ
ರಿಲಾಯನ್ಸ್ ಇಂಡಸ್ಟ್ರಿ ತನ್ನ 40,000ಕ್ಕೂ ಹೆಚ್ಚಿನ ಉದ್ಯೋಗಿಗಳಿಗೆ ಇತರೆ ಟೆಲಿಕಾಂ ಸೇವೆಗಳಾದ ಏರ್ಟೆಲ್, ವೋಡಾಫೋನ್ ಗಳನ್ನು ನಿಲ್ಲಿಸಿ ಕಂಪನಿಯ ಸ್ವಂತ ೪ಜಿ ಸೇವೆಯೊಂದಿಗೆ ಕನೆಕ್ಟ್ ಆಗುವಂತೆ ಸೂಚಿಸಿತ್ತು. ಕಂಪನಿಯು ಅದೇ ನಂಬರ್ ಗಳನ್ನು ರಿಲಾಯನ್ಸ್ ಜಿಯೊಗೆ ಪೋರ್ಟ್ ಆಗುವಂತೆ ಹೇಳಿತ್ತು.
ಪ್ಲಿಪ್ಕಾರ್ಟ್ ಮಾರಾಟ
ರಿಲಾಯನ್ಸ್ ಜಿಯೊದ ವಿಂಡ್ 3 ಮತ್ತು ಫ್ಲೇಮ್ 8 ಬಜೆಟ್ ಫೋನ್ ಗಳನ್ನು ಪ್ಲಿಪ್ಕಾರ್ಟ್ ಮಾರಾಟ ಮಾಡಲಿದೆ ಎಂದು ಹೇಳಿದೆ.
ಟೆಲಿಕಾಂ ಕಂಪನಿಗಳು ದೂರು ನೀಡಿದ್ದವು
ಪರೀಕ್ಷಾರ್ಥ ಸೋಗಿನಲ್ಲಿ ಸಾವಿರಾರು ಗ್ರಾಹಕರಿಗೆ ರಿಲಾಯನ್ಸ್ ಉಚಿತ ಸೇವೆ ಒದಗಿಸುತ್ತಿದೆ ಎಂದು ಈ ಹಿಂದೆ ದೇಶದ ಪ್ರತಿಷ್ಠಿತ ಕಂಪನಿಗಳಾದ ಏರ್ಟೆಲ್, ವೋಡಾಫೋನ್, ಐಡಿಯಾ ಟೆಲಿಕಾಂ ಇಲಾಖೆಗೆ (COAI) ದೂರು ನೀಡಿದ್ದವು. ಜತೆಗೆ ಪರವಾನಗಿ ಒಪ್ಪಂದದ ಉಲ್ಲಂಘನೆ ಮಾಡಿದೆ ಎಂದು ಹೇಳಿದ್ದವು.


Click it and Unblock the Notifications