ರಿಲಾಯನ್ಸ್ ಸಂಸ್ಥೆ ತನ್ನ ರಿಲಾಯನ್ಸ್ ಜಿಯೊ 4ಜಿ ಫ್ರೀವಿವ್ ವಾಣಿಜ್ಯ ಸೇವೆಗಳನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಿದೆ ಎಂದು ತಿಳಿಸಿದ್ದು, ಜಿಯೊ ಫ್ರೀವಿವ್ ಆಫರ್ ಇತರೆ ಸ್ಮಾರ್ಟ್ ಫೋನ್ ಗಳಿಗೂ ಸಹ ಆರಂಭವಾಗಿದೆ.
ರಿಲಾಯನ್ಸ್ ಜಿಯೊ ಗ್ರಾಹಕರಿಗೆ 4ಜಿ ಸಿಮ್ ಮೂಲಕ ಅನೇಕ ಸೇವೆಗಳನ್ನು ಒದಗಿಸುತ್ತಿರುವುದಾಗಿ ಘೋಷಿಸಿರುವ ಮಾಹಿತಿ ನಮಗೆಲ್ಲಾ ಗೊತ್ತೆ ಇದೆ. ಹೀಗಾಗಿ ಪ್ರತಿಯೊಬ್ಬರೂ ಈ ಸೇವೆಯನ್ನು ಪಡೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ಅದಕ್ಕೂ ಮುನ್ನ ಕೆಲ ಸಂಗತಿಗಳನ್ನು ಗಮನಿಸುವುದು ಮುಖ್ಯ.
ರಿಲಾಯನ್ಸ್ ಜಿಯೊ 4ಜಿ ಆಫರ್ ಮೂಲಕ ಗ್ರಾಹಕರಿಗೆ ಯಾವ ಸಮಸ್ಯೆಗಳು ಉಂಟಾಗಬಹುದು? ವಾಣಿಜ್ಯಾತ್ಮಕ ಹಿನ್ನೆಲೆಯಲ್ಲಿ ಜಿಯೊ ಗ್ರಾಹಕರನ್ನು ಯಾವ ರೀತಿಯಲ್ಲಿ ಸೆಳೆಯುತ್ತಿದೆ? 90 ದಿನಗಳ ಅವಧಿ ನಂತರ ಮುಂದೆನಾಗಬಹುದು? ಧ್ವನಿ ಕರೆಗಳಲ್ಲಿ ಏನಾದರೂ ಸಮಸ್ಯೆ ಆಗಬಹುದೆ? ಬೇರೆ ಟೆಲಿಕಾಂ ಸಂಸ್ಥೆಗಳು ಇದರ ಉತ್ತಮ ಅಂತರ್ ಜಾಲಕ್ಕಾಗಿ ಸಹಕರಿಸಬಹುದೆ? ಹೀಗೆ ರಿಲಾಯನ್ಸ್ ಜಿಯೊ 4ಜಿ ಉಚಿತ ಹೈಪ್ ಬಗ್ಗೆ ನಿಮಗೆ ಗೊತ್ತಿರದ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ. ತಪ್ಪದೆ ಓದಿ.
ಜಿಯೊ ಉಚಿತ ಸೇವೆಗಳ ಆಫರ್!
4ಜಿ ಸಿಮ್ ಕೊಡುಗೆ ಅಗಣಿತ ಉಚಿತ ಧ್ವನಿ ಮತ್ತು ಉಚಿತ ಅನಿಯಮಿತ ಡೇಟಾ, ಎಸ್ಎಂಎಸ್, ವಿಡಿಯೋ ಕರೆ ಮತ್ತು ಜಿಯೊ ಆಪ್ಸ್ ಗಳನ್ನು ಒಳಗೊಂಡಿರುತ್ತದೆ. ಈ ಸೇವೆಗಳನ್ನು 90 ದಿನಗಳವರೆಗೆ ಉಚಿತವಾಗಿ ನೀಡಲಿದೆ ಎಂದು ಘೋಷಿಸಿದೆ.
90 ದಿನಗಳ ಜಿಯೊ ಆಫರ್ ನಂತರ ಏನಾಗುತ್ತೆ?
ಉಚಿತ ಧ್ವನಿ, ಅನಿಯಮಿತ ಡೇಟಾ, ಎಸ್ಎಂಎಸ್, ವಿಡಿಯೋ ಕರೆ ಮುಂತಾದ ಸೇವೆಗಳು 90 ದಿನಗಳಿಗೆ ಈ ಆಫರ್ ಮುಗಿಯಲಿದೆ.
ನಂತರ ಗ್ರಾಹಕರಿಗೆ ಟ್ಯಾರಿಪ್ ಪ್ಲಾನ್ ಗಳ ಆಯ್ಕೆಗಳನ್ನು ಕೊಟ್ಟು ಸೇವೆಗಳನ್ನು ಮುಂದುವರೆಸುವಂತೆ ಹೇಳಲಾಗುವುದು. ಟ್ಯಾರಿಪ್ ಪ್ಲಾನ್ ಗಳು ಸೋರಿಕೆಯಾದರೆ ದೇಶದಾದ್ಯಂತ ಪ್ರತಿ ಎಂಬಿ ಗೆ 50 ಪೈಸೆಯ ಕಡಿಮೆ ದರದಲ್ಲಿ ಜಿಯೊ ಕೊಡುಗೆಯನ್ನು ಆರಂಬಿಸಲಿದೆ.
ವಾಣಿಜ್ಯಾತ್ಮಕ ಲಾಂಚಿಂಗ್ ಯಾವಾಗ?
ವರದಿಯ ಪ್ರಕಾರ ಈ ಸೇವೆ ಅಗಸ್ಟ್ 15 ರಿಂದ ಪ್ರಾರಂಭವಾಗಬೇಕಿತ್ತು. ಆದರೆ ಇತ್ತೀಚಿನ ವರದಿ ಪ್ರಕಾರ ಸೆಪ್ಟಂಬರ್ 1ರಿಂದ ವಾಣಿಜ್ಯಾತ್ಮಕವಾಗಿ ಈ ಸೇವೆ ಆರಂಭಗೊಳ್ಳಲಿದೆಯೆಂದು ಮುಖೇಶ್ ಅಂಬಾನಿ ಹೇಳಿದ್ದಾರೆ.
ಜಿಯೊ 4ಜಿ ಆಫರ್ ಕಾನೂನು ಬದ್ದವೇ?
ರಿಲಾಯನ್ಸ್ ಕಂಪನಿ ಜಿಯೊ ಫ್ರೀವಿವ್ ಆಫರ್ ನ್ನು ವಾಣಿಜ್ಯಾತ್ಮಕವಾಗಿ ದೂರುಪಯೋಗ ಹಾಗೂ ಅನ್ಯಾಯ ಎಸಗುತ್ತಿದೆ ಎಂದು ಏರ್ಟೆಲ್, ವೋಡಾಫೋನ್, ಐಡಿಯ ಟೆಲಿಕಾಂ ಕಂಪನಿಗಳು TRAI ಗೆ ದೂರು ನೀಡಿದ್ವವು.
ವಾಣಿಜ್ಯಾತ್ಮಕ ಬಿಡುಗಡೆ ಮಾಡಿದ ಸೇವೆಗಳಿಗೆ ಸರ್ಕಾರಕ್ಕೆ ಕಟ್ಟಬೇಕಾಗಿರುವ ಸ್ಪೆಕ್ಟ್ರಮ್ ಶುಲ್ಕ ಮತ್ತು ಇನ್ನೀತರ ಸೇವಾ ಶುಲ್ಕಗಳನ್ನು ರಿಲಾಯನ್ಸ್ ಪಾವತಿಸದೆ ವ್ಯವಹಾರ ಮಾಡುತ್ತಿದೆ ಎಂದು ಅಪಾದನೆ ಮಾಡಿವೆ.
ಜಿಯೊ ಆಫರ್ ಕಾನೂನು ಬಾಹಿರ
ಜಿಯೊ 4ಜಿ ಫ್ರೀವಿವ್ ಆಫರ್ ಕಾನೂನಿನ ಕಣ್ಣಿಗೆ ಬೂದಿ ಎರಚಿದಂತೆ ಆಗಿದ್ದು, ಇದು ಕಾನೂನು ಬಾಹಿರ ಸೇವೆಯಾಗಿದೆ. ಹೀಗಾಗಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಇದರ ಮೇಲೆ ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಟೆಲಿಕಾಂ ಸಂಸ್ಥೆಗಳು ಹೇಳಿವೆ.
ಧ್ವನಿ ಕರೆ ಬಗ್ಗೆ ಏನು?
ಜಿಯೊ ನೆಟ್ವರ್ಕ್ ಆರಂಭಿಕ ಬಳಕೆದಾರರು ತಮ್ಮ ಧ್ವನಿ ಸೇವೆಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಲಿದ್ದು, ಇದನ್ನು ರಿಲಾಯನ್ಸ್ ಒಪ್ಪಿಕೊಂಡಿದೆ. ರಿಲಾಯನ್ಸ್ ಟ್ರಾಯ್ ಗೆ ಬರೆದ ಪತ್ರದಂತೆ ಪ್ರಸ್ತುತ ಕಾಲ್ ಡ್ರಾಪ್ ದರ ಶೇ. 65ರಷ್ಟು ಇದೆ ಎಂದು ಹೇಳಿದೆ.
ಟೆಲಿಕಾಂ ಸಂಸ್ಥೆಗಳು ತಮ್ಮ ನೆಟ್ವರ್ಕ್ ಹಂಚಿಕೊಳ್ಳುವುದಿಲ್ಲ
1.6 ಕೋಟಿಗಿಂತ ಹೆಚ್ಚಿನ ಗ್ರಾಹಕರ ಕರೆಗಳು ಜಿಯೊ, ಏರ್ಟೆಲ್, ಐಡಿಯ, ವೋಡಾಫೋನ್ ನಡುವಿನ ನೆಟ್ವರ್ಕ್ ನಲ್ಲಿ ವಿಫಲಗೊಳ್ಳಲಿವೆ. ಏಕೆಂದರೆ ಈ ಟೆಲಿಕಾಂ ಸಂಸ್ಥೆಗಳು ತಮ್ಮ ನೆಟ್ವರ್ಕ್ ಸೇವೆಯನ್ನು ಜಿಯೊದೊಂದಿಗೆ ಹಂಚಿಕೊಳ್ಳುತ್ತಿಲ್ಲ.
ಟೆಲಿಕಾಂ ಸಂಸ್ಥೆಗಳ ನಡುವೆ ಸ್ಪರ್ಧೆ
ಪ್ರಮುಖವಾಗಿ ಸ್ಥಾನಿಕ ಕಂಪನಿಗಳಾದ ಏರ್ಟೆಲ್, ಐಡಿಯ, ವೋಡಾಫೋನ್ ಜತೆ ಇದೊಂದು ಹೊಸ ಹಣಾಹಣಿಯಾಗಿ, ವಿಭಿನ್ನ ಸ್ಪರ್ಧೆಯಾಗಿ ಏರ್ಪಟ್ಟಿರುವುದರಿಂದ ಅನೇಕ ಸಮಸ್ಯೆಗಳಿಗೆ ಕಾರಣವಾಗಲಿದೆ.
ಧ್ವನಿ ಕರೆಗಳಲ್ಲಿ ಸಮಸ್ಯೆ
ರಿಲಾಯನ್ಸ್ ತನ್ನ ಧ್ವನಿ ಕರೆಗಳನ್ನು ಇತರೆ ಟೆಲಿಕಾಂ ಜಾಲಗಳೊಂದಿಗೆ ಅರ್ಧದಲ್ಲಿಯೇ ಕಡಿತವಾಗದ ರೀತಿಯಲ್ಲಿ ಉಳಿಸಿಕೊಳ್ಳುವ ಅಗತ್ಯ ಇದೆ. ಒಂದು ವೇಳೆ ಬೇರೆ ಟೆಲಿಕಾಂ ಕಂಪನಿಗಳು ಕರೆಗಳನ್ನು ಅರ್ಧದಲ್ಲಯೇ ಕಡಿತ ಮಾಡಿಕೊಂಡರೆ ಗ್ರಾಹಕರಿಗೆ ಸಮಸ್ಯೆಯಾಗಲಿದೆ ಎನ್ನುವುದು ವಿಶ್ಲೇಷಕರ ಅಭಿಪ್ರಾಯ.
ಮೂಲ ನಂಬರನ್ನು ಜಿಯೊ ಗೆ ಪೋರ್ಟ್ ಮಾಡಬಹುದೆ?
ಅಧಿಕೃತವಾಗಿ ರಿಲಾಯನ್ಸ್ ಜಿಯೊ ಬಿಡುಗಡೆಯಾಗದ ಕಾರಣ ನಿಮ್ಮ ನಂಬರ್ ಪೋರ್ಟ್ ಮಾಡಲು ಆಗುವುದಿಲ್ಲ. ಆದರೆ ವಾಣಿಜ್ಯಾತ್ಮಕವಾಗಿ ಇದು ಲಾಂಚ್ ಆದ ನಂತರ ನಿಮ್ಮ ಮೂಲ ನೆಟ್ವರ್ಕ್ ನಿಂದ ಜಿಯೊ ಗೆ ಪೋರ್ಟ್ ಮಾಡಿಕೊಳ್ಳಬಹುದು. ನೀವು ಪೋರ್ಟ್ ಆಗಿ ಎಂದು ನಾವು ಸಲಹೆ ನೀಡುತ್ತಿಲ್ಲ. ಏಕೆಂದರೆ ಜಿಯೊ ಧ್ವನಿ ಮೂಲಭೂತ ಸೌಲಭ್ಯದೊಂದಿಗೆ ಇನ್ನು ಸುಸ್ಥಿರವಾಗಿ ವಾಣಿಜ್ಯಾತ್ಮಕ ಕಾರ್ಯನಿರ್ವಹಿಸುತ್ತಿಲ್ಲ.
ಸಂಸ್ಥೆಗಳ ಜತೆ ಒಪ್ಪಂದ
ಗ್ರಾಹಕರನ್ನು ಸೆಳೆಯಲು ಸ್ಯಾಮ್ಸಂಗ್, ಎಲ್ ಜಿ, ಮೈಕ್ರೊಮ್ಯಾಕ್ಸ್ ಮತ್ತು ಪಾನಾಸೋನಿಕ್ ಸಂಸ್ಥೆಗಳ ಜತೆ ರಿಲಾಯನ್ಸ್ ಜಿಯೊ ಒಪ್ಪಂದ ಮಾಡಿಕೊಂಡಿದೆ.
ಜಿಯೊ ಬೃಹತ್ ಟೆಲಿಕಾಂ ಸಂಸ್ಥೆಯನ್ನಾಗಿಸುವ ಗುರಿ
ದೇಶದಲ್ಲಿ ಐದನೇ ಬೃಹತ್ ದೂರಸಂವಹನ(ಟೆಲಿಕಾಂ) ಸೇವೆ ಒದಗಿಸುವ ಸಂಸ್ಥೆಯಾಗಿ ಗುರಿ ಸಾಧಿಸಬೆಕು ಎನ್ನುವುದು ಇದು ರಿಲಾಯನ್ಸ್ ಜಿಯೊ ಉದ್ದೇಶವಾಗಿದೆ. ಇದು 2.5 ಮಿಲಿಯನ್ ನಿಂದ 20 ಮಿಲಿಯನ್ ಸಕ್ರಿಯ ಚಂದಾದಾರರನ್ನು ಹೊಂದುವ ಗುರಿ ಹೊಂದಿದೆ.
ಪ್ಲಿಪ್ಕಾರ್ಟ್ ಮಾರಾಟ
ರಿಲಾಯನ್ಸ್ ಜಿಯೊದ ವಿಂಡ್ 3 ಮತ್ತು ಫ್ಲೇಮ್ 8 ಬಜೆಟ್ ಫೋನ್ ಗಳನ್ನು ಪ್ಲಿಪ್ಕಾರ್ಟ್ ಮಾರಾಟ ಮಾಡಲಿದೆ ಎಂದು ಹೇಳಿದೆ.
ಟೆಲಿಕಾಂ ಕಂಪನಿಗಳು ದೂರು
ಪರೀಕ್ಷಾರ್ಥ ಸೋಗಿನಲ್ಲಿ ಸಾವಿರಾರು ಗ್ರಾಹಕರಿಗೆ ರಿಲಾಯನ್ಸ್ ಉಚಿತ ಸೇವೆ ಒದಗಿಸುತ್ತಿದೆ ಎಂದು ಈ ಹಿಂದೆ ದೇಶದ ಪ್ರತಿಷ್ಠಿತ ಕಂಪನಿಗಳಾದ ಏರ್ಟೆಲ್, ವೋಡಾಫೋನ್, ಐಡಿಯಾ ಟೆಲಿಕಾಂ ಇಲಾಖೆಗೆ (COAI) ದೂರು ನೀಡಿದ್ದವು. ಜತೆಗೆ ಪರವಾನಗಿ ಒಪ್ಪಂದದ ಉಲ್ಲಂಘನೆ ಮಾಡಿದೆ ಎಂದು ಹೇಳಿದ್ದವು.


Click it and Unblock the Notifications