ರಿಲಾಯನ್ಸ್ ಜಿಯೊ ಟೆಲಿಕಾಂ ಕ್ಷೇತ್ರದಲ್ಲಿ ಭಾರಿ ಸದ್ದು ಮಾಡುತ್ತಿದೆ. ಎಲ್ಲೆಲ್ಲೂ ಜಿಯೊ ಬಗೆಗೆ ಮಾತುಕತೆ ನಡೆಯುತ್ತಿದೆ. ಇದರ ಪರಿಣಾಮ ಟೆಲಿಕಾಂ ಕಂಪನಿಗಳ ಮೇಲೆ ಬಿಳದೆ ಇರುವುದೆ? ಏರ್‌ಟೆಲ್, ಐಡಿಯಾ, ವೋಡಾಫೋನ್ ಮುಂತಾದ ಟೆಲಿಕಾಂ ಸಂಸ್ಥೆಗಳ ಮೇಲೆ ಭಾರಿ ಪರಿಣಾಮವನ್ನೇ ಉಂಟುಮಾಡಿದೆ.
ರಿಲಾಯನ್ಸ್ ಜಿಯೊ ಕುರಿತು ಎಲ್ಲರಿಗೂ ಭಾರಿ ಕುತೂಹಲ ಇದೆ. ಅಲ್ಲದೆ 4ಜಿ ಸೇವೆ ಪಡೆಯಲು ಕಾತರದಿಂದ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಗುತ್ತಿರುವ ಬೆಳವಣಿಗೆ ಹಾಗೂ ಗ್ರಾಹಕರು ಮತ್ತು ಟೆಲಿಕಾಂ ಕಂಪನಿಗಳ ನಡುವಿನ ಲಾಭ-ನಷ್ಟಗಳ ಲೆಕ್ಕಾಚಾರ ಇಲ್ಲಿದೆ.
ಟೆಲಿಕಾಂ ಷೇರುಗಳು ಕುಸಿತ
ರಿಲಾಯನ್ಸ್ ಜಿಯೊ ಹೊಸ ಅಡ್ಡಪಡಿಸುವ ತಂತ್ರಜ್ಞಾನದಿಂದಾಗಿ ಟೆಲಿಕಾಂ ಷೇರುಗಳ ಮೇಲೆ ಭಾರಿ ಪ್ರಭಾವ ಉಂಟಾಗಿದೆ.
ರಿಲಾಯನ್ಸ್ ಜಿಯೊ 4ಜಿ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳುಗಳಲ್ಲಿ ಭಾರ್ತಿ ಏರ್ಟೆಲ್ ಮತ್ತು ಐಡಿಯ ಸ್ಥಾನಿಕ ಸೇವಾಕರ್ತೃಗಳ ಷೇರುಗಳು ಶೇ. 30ರಷ್ಟು ಕುಸಿತ ಕಂಡಿವೆ.
ವಿಶ್ಲೇಷಕರ ಋಣಾತ್ಮಕ ಚಿಂತನೆ
ಇಂತಹ ಬೆಳವಣಿಹೆಯಿಂದಾಗಿ ಕಂಪನಿಗಳ ಲಾಭದ ಮೇಲೆ ಕೆಟ್ಟ ಪರಿಣಾಮ ಬೀರಿದ್ದು, ಸಮಸ್ಯೆಗಳೇ ಹೆಚ್ಚು ಉಂಟಾಗಲಿವೆ. ಇದರಿಂದಾಗಿ ಟೆಲಿಕಾಂ ಕ್ಷೇತ್ರದ ಪೈಪೋಟಿ ಬಗ್ಗೆ ವಿಶ್ಲೇಷಕರು ಋಣಾತ್ಮಕ ವಿಚಾರ ಮಾಡುತ್ತಿದ್ದಾರೆ.
ಜೆಪಿ ಮೋರ್ಗಾನ್ ವಿಶ್ಲೇಷಣೆ
ಟೆಲಿಕಾಂ ನಿರ್ವಾಹಕರ ಷೇರುಗಳು ಅಪಾಯದ ಸುಳಿಯಲ್ಲಿದ್ದು, ಅವರಿಗೆ ಇದು ಎಚ್ಚರಿಕೆ ಗಂಟೆಯಾಗಿದೆ. ಮುಂದಿನ ದಿನಗಳಲ್ಲಿ ಅನೇಕ ರಚನಾತ್ಮಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು ಎಂದು ಜೆಪಿ ಮೋರ್ಗಾನ್ ವಿಶ್ಲೇಷಕ ವಿಜು ಕೆ ಜಾರ್ಜ್ ಅಭಿಪ್ರಾಯ ಪಟ್ಟಿದ್ದಾರೆ.
ಟೆಲಿಕಾಂ ಕಂಪನಿಗಳಿಗೆ ಅಪಾಯ
ರಿಲಾಯನ್ಸ್ ಜಿಯೊ ಬಹುನಿರೀಕ್ಷಿತವಾಗಿ ಆರಂಭದ ಸುಂಕವನ್ನು ಕಡಿತಗೊಳಿಸಲಿದೆ. ಜಿಯೊ ಈ ಪ್ರಕ್ರಿಯೆಯ ಪ್ರವೇಶಕ್ಕಾಗಿ ಅಗ್ಗದ ಸಾಧನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯಲು ಬಯಸಿದ್ದು, ಇದರಿಂದಾಗಿ ಭಾರ್ತಿ ಏರ್ಟೆಲ್, ಐಡಿಯ ಕಂಪನಿಗಳಿಗೆ ಅಪಾಯ ಉಂಟಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.
ಸುನೀಲ್ ಮಿತ್ತಲ್ ಏನು ಹೇಳ್ತಾರೆ?
ರಿಲಯನ್ಸ್ ಜಿಯೊ ಇನ್ಫೋಕಾಂ ನ ಈ ಪ್ರಸ್ತಾಪ ದೂರಸಂಪರ್ಕ ವಲಯದಲ್ಲಿ ಬಲವರ್ಧನೆಗೆ ಚಾಲನೆ ನೀಡಿದೆ ಹಾಗೂ ಬೆಲೆ ಒತ್ತಡ ತೀವ್ರಗೊಳ್ಳುತ್ತವೆ. ಆದರೆ ಭಾರ್ತಿ ಏರ್ಟೆಲ್ ಎಲ್ಲಾ ತರಹದ ಸ್ಪರ್ಧೆ ಎದುರಿಸಲು ಸಿದ್ದವಾಗಿದೆ ಎಂದು ಇತ್ತೀಚಿನ ET ಸಂದರ್ಶನದಲ್ಲಿ ಭಾರ್ತಿ ಸಮೂಹದ ಮುಖ್ಯಸ್ಥ ಸುನಿಲ್ ಮಿತ್ತಲ್ ಹೇಳಿದ್ದಾರೆ.
ಷೇರುಗಳು ಕುಸಿತ
ಕಳೆದ ಐದು ತಿಂಗಳಲ್ಲಿ ಭಾರ್ತಿ ಏರ್ಟೆಲ್ ಷೇರು ಶೇ. 28.2ರಷ್ಟು ಮತ್ತು ಐಡಿಯ ಸೆಲ್ಯುಲರ್ ಷೇರುಗಳು ಶೇ. 27.3ರಷ್ಟು ಕುಸಿತ ಕಂಡಿವೆ.
ರಿಲಾಯನ್ಸ್ ಷೇರುಗಳಲ್ಲಿ ಏರಿಕೆ
ಅದೇ ಅವಧಿದಲ್ಲಿ ರಿಲಾಯನ್ಸ್ ಷೇರುಗಳಲ್ಲಿ ಏರಿಕೆ ಶೇ. 18.5ರಷ್ಟು ಏರಿಕೆ ಕಂಡಿದೆ. ಇದೇ ಸಮಯದಲ್ಲಿ ಭಾರ್ತಿ ಇನ್ಫ್ರಾಟೆಲ್ ಮತ್ತು ಟಾಟಾ ಕಮ್ಯೂನಿಕೆಷನ್ ಷೇರುಗಳು ಶೇ. 10ರಷ್ಟು ನೆಲ ಕಚ್ಚಿವೆ.
ವಿಶ್ಲೇಷಕರಿಗೆ ಕುತೂಹಲ
ಭಾರ್ತಿ ಏರ್ಟೆಲ್, ಐಡಿಯ, ವೋಡಾಫೋನ್ ಟೆಲಿಕಾಂ ಸಂಸ್ಥೆಗಳ ಬಗ್ಗೆ ಕುತೂಹಲ ಇದೆಯೆಂದು ವಿಶ್ಲೇಷಕರು ಹೇಳಿದ್ದಾರೆ. ಟೆಲಿಕಾಂ ವಲಯದ ಮುಂದಿನ ಸ್ಪರ್ಧೆಯಲ್ಲಿ ಯಾರು ಸುಸ್ಥಿರವಾಗಿ ಪೈಪೋಟಿ ನಡೆಸುತ್ತಾರೆ. ಜತೆಗೆ ಯಾರು ತಮ್ಮ ಸ್ಥಾನವನ್ನು ಭದ್ರಗೊಳಿಸುತ್ತಾರೆ ಎಂಬುದು ಕುತೂಹಲಕ್ಕೆ ಎಡೆ ಮಾಡಿದೆ.
ಏಷಿಯಾ ಮತ್ತು ಯುರೋಪ್ ಮಾರುಕಟ್ಟೆಯಲ್ಲಿ ಯಾರ ಪ್ರಭಾವ
ಏಷ್ಯಾ ಮತ್ತು ಯುರೋಪ್ ದೇಶಗಳಾದ ಚೀನಾ, ಫ್ರಾನ್ಸ್, ಇಂಡೋನೇಷ್ಯಾ, ಇಟಲಿ ಮತ್ತು ಯುಕೆ ದೇಶಗಳ ಮಾರುಕಟ್ಟೆಗಳಲ್ಲಿ ಈ ಹೊಸ ತಂತ್ರಜ್ಞಾನ ದೂರಸಂಪರ್ಕ ವಲಯದಲ್ಲಿ ಹೇಗೆ ಆದಾಯ ಮತ್ತು ಪರಿಣಾಮ ಬೀರಲಿದೆ ಎಂಬುದು ಸಹ ವಿಶ್ಲೇಷಕರ ಕುತೂಹಲಕ್ಕೆ ಕಾರಣವಾಗಿದೆ.


Click it and Unblock the Notifications