ಭಾರತದ ಟೆಲಿಕಾಂ ವಲಯದಲ್ಲಿ ರಿಲಾಯನ್ಸ್ ಜಿಯೊ ಹೊಸ ಪರಿವರ್ತನೆಯ ಕ್ರಾಂತಿಯನ್ನು ಉಂಟುಮಾಡುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದೇ ಸಂದರ್ಭದಲ್ಲಿ ಟೆಲಿಕಾಂ ರಂಗದ ಪ್ರಮುಖ ಕಂಪನಿಗಳಾದ ಭಾರತಿ ಏರ್ಟೆಲ್, ಐಡಿಯಾ, ವೋಡಾಫೋನ್ ಮೇಲೆ ಒತ್ತಡ ತರುತ್ತಿದೆ.
ರಿಲಾಯನ್ಸ್ ಜಿಯೊದಿಂದಾಗಿ ಭಾರತದ ಟೆಲಿಕಾ ಕ್ಷೇತ್ರದಲ್ಲಿ ಯಾವ ಪರಿಣಾಮಗಳು ಬೀರುತ್ತಿವೆ ಎಂಬುದಕ್ಕೆ ಕೆಲ ಪ್ರಮುಖ ದಲ್ಲಾಳಿ ಸಂಸ್ಥೆಗಳು ಹಾಗೂ ವಿಶ್ಲೇಷಕರು ಅನೇಕ ಕಾರಣಗಳನ್ನು ನೀಡಿದ್ದಾರೆ.
CRISIL ಅಭಿಪ್ರಾಯ
ಟೆಲಿಕಾಂ ಕಂಪನಿಗಳು ಯಾವಾಗಲೂ ಪ್ರಸ್ತಾಪಿತ ಸುಂಕ ಮತ್ತು ಉಚಿತ ಧ್ವನಿ ಕರೆಗಳನ್ನು ನೀಡುವುದು ತುಂಬಾ ಆಕ್ರಮಣಕಾರಿಯಾದ ಸಂಗತಿಯಾಗಿದ್ದು, ಯಾವಾಗಲೂ ನಮ್ಮ ನಿರೀಕ್ಷೆಗಳನ್ನು ತಲೆ ಕೆಳಗೆ ಮಾಡುತ್ತವೆ ಎಂದು CRISIL ಅಭಿಪ್ರಾಯ ಪಟ್ಟಿದೆ.
ಏರ್ಟೆಲ್ ಮತ್ತು ಐಡಿಯಾ ಮೇಲೆ ಒತ್ತಡ
ಉಚಿತ ಧ್ವನಿ ಒದಗಿಸುವುದು ಮತ್ತು ಡೆಟಾ ಬೆಲೆಗಳನ್ನು ಕಡಿಮೆಗೊಳಿಸುವುದು ಏರ್ಟೆಲ್ ಮತ್ತು ಐಡಿಯಾ ದಂತಹ ಕಂಪನಿಗಳ ಮೇಲೆ ಭಾರಿ ಒತ್ತಡವನ್ನು ಹೇರುತ್ತದೆ ಎಂದು ಜೆಫರಿಸ್ ಅಭಿಪ್ರಾಯ ಪಟ್ಟಿದೆ. ಇಂತಹ ವಿಚ್ಛಿದ್ರಕಾರಕ ಬದಲಾವಣೆಗಳು ಸಂಭವಿಸಿದರೆ ಅನೇಕ ರಂಗಗಳ ಮೇಲೆ ಭಾರಿ ಒತ್ತಡ ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ.
ಡೆಟಾ ಬೆಲೆ ರಿಯಾಯತಿ
ಭಾರ್ತಿ ಏರ್ಟೆಲ್, ಐಡಿಯಾ, ವೋಡಾಫೋನ್, ಮತ್ತು ರಿಲಾಯನ್ಸ್ ಕಮ್ಯೂನಿಕೇಷನ್ ನಂತಹ ನಿರ್ವಾಹಕ ಕಂಪನಿಗಳು ಶೇ. 29 ರಿಂದ 54 ರಷ್ಟು ರಿಯಾಯಿ ಮಾಡಲು ಮುಂದಾಗಿವೆ.
ಟೆಲಿಕಾಂ ರಂಗದಲ್ಲಿ ಎಚ್ಚರಿಕೆ
ಬೃಹತ್ ಮಾರುಕಟ್ಟೆಯಲ್ಲಿ ಜಿಯೊ ರೂ. 149 ಕಡಿಮೆ ಬೆಲೆಯ ಯೋಜನೆ ನೀಡಿರುವುದು ಸರಿಯಷ್ಟೆ. ಆದರೆ ನಮ್ಮ ಅನಿಸಿಕೆ ಪ್ರಕಾರ ಇದು ಅಂತಿಮ ಟ್ಯಾರಿಪ್ ಆಫರ್ ಅಲ್ಲ ಎಂದು ಕ್ರೆಡಿಟ್ ಸ್ಯೂಸ್(Credit Suisse) ಹಳಿದೆ.
ಜಾಗತಿಕ ಹೂಡಿಕೆದಾರರು ಜನೆವರಿಯ ಆಸುಪಾಸಿನಲ್ಲಿ ಈ ಟ್ಯಾರಿಪ್ ಯೋಜನೆಗಳು ಮತ್ತೆ ಹೊಸದಾಗಿ ಘೋಷಣೆ ಆಗಬಹುದು ಎಂದು ಅನುಮಾನ ವ್ಯಕ್ತಪಡಿಸಿವೆ.
ಯುಬಿಎಸ್ ಏನು ಹೇಳಿದೆ?
ರಿಲಾಯನ್ಸ್ ಜಿಯೊ ತನ್ನ ಮೊಬೈಲ್ ಡಾಟಾ ಆದಾಯ ವಿಸ್ತರಿಸಲು ಸಾಧ್ಯವಿದೆ ಎಂದು ಯುಬಿಎಸ್ ವರದಿ ಮಾಡಿದೆ. ಪ್ರಸ್ತುತ ಭಾರತದಲ್ಲಿ 4ಜಿ ಮಾರುಕಟ್ಟೆಯಲ್ಲಿ ಶೇ. 5ರಷ್ಟು ಮೊಬೈಲ್ ಬಳಕೆದಾರರಿದ್ದಾರೆ.
ಏರ್ಟೆಲ್, ಐಡಿಯಾ ಕೆಳಮುಖ
ರಿಲಾಯನ್ಸ್ ಜಿಯೊ ಬಿಡುಗಡೆ ಮಾಡಿರುವುದು ಭಾರ್ತಿ ಇನ್ಫ್ರಾಟೆಲ್ ಗೆ ಧನಾತ್ಮಕ ಪರಿಣಾಮ ಬೀರಲಿದೆ. ಆದರೆ ಏರ್ಟೆಲ್ ಮತ್ತು ಐಡಿಯಾಗಳ ಮೇಲೆ ಋಣಾತ್ಮಕ ಪರಿಣಾಮ ಉಂಟು ಮಾಡಲಿದೆ ಎಂದು BofA-ML ವರದಿ ಮಾಡಿದೆ. ಜಿಯೊ ಯೋಜನೆಯಿಂದಾಗಿ ಏರ್ಟೆಲ್ ಮತ್ತು ಐಡಿಯಾ ಇಳಿಮುಖವಾಗಿ ಸಾಗಲಿವೆ ಎಂದು ಜಾಗತಿಕ ಹೂಡಿಕೆ ಬ್ಯಾಂಕ್ ಹೇಳಿದೆ.
ಜಿಯೊ ತಂತ್ರಗಾರಿಕೆ
ಟೆಲಿಕಾಂ ಉದ್ಯಮ ತೀವ್ರ ಬಂಡವಾಳ ಬಯಸುವ ಕ್ಷೇತ್ರ. ಹೀಗಾಗಿ ಅತಿ ಕಡಿಮೆ ಬೆಲೆಯ ಡೆಟಾ ಆಫರ್ ಗಳನ್ನು ಘೋಷಿಸಿ ಗ್ರಾಹಕರನ್ನು ಆಕರ್ಷಿಸಲು ಪ್ರಯತ್ನಿಸುತ್ತಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ ಬದಲಾಗಿ ಜಗತ್ತಿನಾದ್ಯಂತ ಗ್ರಾಹಕರನ್ನು ಗೆಲ್ಲಲು ಯೋಜನೆ ರೂಪಿಸುತ್ತಿದೆ.


Click it and Unblock the Notifications