ಸ್ಟಾರ್ಟ್ಅಪ್ ಪಾಲಿಸಿ (ನವೋದ್ಯಮ ನೀತಿ) ಮೂಲಕ 2020ರ ವೇಳೆಗೆ ತಂತ್ರಜ್ಞಾನ ಆಧಾರಿತ 20 ಸಾವಿರ ಹಾಗೂ ಉತ್ಪಾದನೆ ಆಧಾರಿತ 6 ಸಾವಿರ ಸ್ಟಾರ್ಟ್ಅಪ್ ಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯ ನವೋದ್ಯಮ ಮೊದಲ ಸಭೆಯಲ್ಲಿ ಮಾತನಾಡಿದ ಅವರು, ನವೋದ್ಯಮ ನೀತಿ ಜಾರಿಗೆ ತಂದಿರುವುದು ಹೆಮ್ಮೆಯ ಸಂಗತಿ. ಕೈಗಾರಿಕೋದ್ಯಮಗಳು, ಬಂಡವಾಳ ಹೂಡಿಕೆದಾರರು, ಆರ್ಥಿಕ, ಶೈಕ್ಷಣಿಕ ತಜ್ಞರು ಗುರಿ ಸಾಧನೆಗೆ ನೆರವು ನೀಡಿ ಎಂದು ಮನವಿ ಮಾಡಿದರು. ಕಾರ್ಪೋರೇಟ್ ವಲಯ, ಕೈಗಾರಿಕಾ ಸಂಘಟನೆಗಳು ಸರ್ಕಾರದೊಂದಿಗೆ ಕೈ ಜೋಡಿಸಬೆಕು ಎಂದರು.

ಜಾಗತಿಕ ಮಟ್ಟದಲ್ಲಿ ಎದುರಾಗುವ ಪೈಪೋಟಿ ಎದುರಿಸಲು ನವೋದ್ಯಮಗಳಿಗೆ ಉತ್ತೇಜನ ನೀಡಲು ಸರ್ಕಾರ ಮುಂದಾಗಿದ್ದು, 200 ಕೋಟಿ ಮೊತ್ತದ ನವೋದ್ಯಮ ನಿಧಿ ಸ್ಥಾಪನೆಗೆ ಮುಂದಾಗಿದೆ ಎಂದು ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ ಹೇಳಿದರು.
ಭಾರತ ಸ್ಟಾರ್ಟ್ಅಪ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕವಾಗಿ ಮೇಲುಗೈ ಸಾಧಿಸುತ್ತಿದ್ದು, ಸ್ಟಾರ್ಟ್ಅಪ್ ಗಳ ಹಾಟ್ ಪೇವರಿಟ್ ಆಗಿದೆ. ಇದಕ್ಕೆ ಕರ್ನಾಟಕ ಕೂಡ ಹೊರತಾಗಿಲ್ಲ. ನಮ್ಮ ರಾಜ್ಯ ಕೂಡ ಅನೇಕ ನವೋದ್ಯಮ ನೀತಿಗಳ ಅನುಷ್ಠಾನಕ್ಕೆ ಮುಂದಾಗಿದ್ದು, ಸ್ಟಾರ್ಟ್ಅಪ್ ಗಳ ನೆಚ್ಚಿನ ರಾಜ್ಯವಾಗಿ ಮಾರ್ಪಡುತ್ತಿದೆ. ಸ್ಟಾರ್ಟ್ಅಪ್: ಭಾರತ 3ನೇ ಅತಿದೊಡ್ಡ ದೇಶ, ಮುಂಚೂಣಿಯಲ್ಲಿ ಬೆಂಗಳೂರು


Click it and Unblock the Notifications