ಜಾಗತಿಕ ತಂತ್ರಜ್ಞಾನ ಉತ್ಪಾದನೆಯಲ್ಲಿ ಭಾರತ ಮೆಲುಗೈ

ಉನ್ನತ ತಂತ್ರಜ್ಞಾನದ ಉತ್ಪಾದನೆಯಲ್ಲಿ ಭಾರತ ಮುಖ್ಯ ಹಾದಿಯಲ್ಲಿ ಸಾಗುತ್ತಿದೆ. 2016ರಲ್ಲಿ ಉತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಬೆಂಬಲ ದುರ್ಬಲಗೊಂಡಿದ್ದರಿಂದ ಜಾಗತಿಕ ತಯಾರಿಕಾ ಬೆಳವಣಿಗೆ ಅಂದುಕೊಂಡ ಪ್ರಮಾಣಕ್ಕಿಂತ ಕಡಿಮೆಯಾಗಿದೆ ಎಂದು ಯುಎನ್ ವರದಿ ತಿಳಿಸಿದೆ.

2016ರಲ್ಲಿ ಕೇವಲ ಶೇ. 2.8ರಷ್ಟು ಜಾಗತಿಕ ತಯಾರಿಕಾ ಉತ್ಪಾದನೆ ಹೆಚ್ಚಿಸಲು ನಿರೀಕ್ಷಿಸಲಾಗಿತ್ತು ಎಂದು ಯುಎನ್ ಕೈಗಾರಿಕಾ ಅಭಿವೃದ್ಧಿ ಸಂಘಟನೆ(UNIDO) ಪ್ರಕಟಿಸುವ ಜಾಗತಿಕ ತಯಾರಿಕಾ ಉತ್ಪಾದನಾ ತ್ರೈಮಾಸಿಕ ವರದಿಯಲ್ಲಿ ಹೇಳಿದೆ.

2016ರ ಎರಡನೇ ತ್ರೈಮಾಸಿಕದಲ್ಲಿ ಏಷ್ಯನ್ ಆರ್ಥಿಕತೆ ಬೆಳವಣಿಗೆಯಲ್ಲಿ ಹೆಚ್ಚಳವಾಗಿದ್ದು, ಶೇ. 6.5ರಷ್ಟು ತಯಾರಿಕಾ ಉತ್ಪಾದನೆ ಏರಿಕೆ ಕಂಡಿದೆ.

ಜಾಗತಿಕ ತಂತ್ರಜ್ಞಾನ ಉತ್ಪಾದನೆಯಲ್ಲಿ ಭಾರತ ಮೆಲುಗೈ

ಕಳೆದ ತ್ರೈಮಾಸಿಕಗಳಲ್ಲಿ ಭಾರತದ ತಯಾರಿಕಾ ಉತ್ಪಾದನಾ ದರ ಪ್ರಭಾವಶಾಲಿಯಾಗಿ ಬೆಳವಣಿಗೆ ಕಂಡಿದೆ. ಅದರಲ್ಲೂ ವಿಶ್ವದ ಉನ್ನತ ತಂತ್ರಜ್ಞಾನದ ಉತ್ಪಾದನೆಯಲ್ಲಿ ಭಾರತ ಮುಖ್ಯ ಹಾದಿಯಲ್ಲಿ ಸಾಗುತ್ತಿದೆ ಎಂದು ವರದಿ ತಿಳಿಸಿದೆ.

ಇತ್ತಿಚಿಗೆ ಬಿಡುಗಡೆಯಾದ ಜಿಡಿಪಿ ಅಂಕಿ-ಅಂಶದ ಪ್ರಕಾರ 2016ರ ಏಪ್ರಿಲ್-ಜೂನ್ ಅವಧಿಯಲ್ಲಿ ಭಾರತದ ಉತ್ಪಾದನಾ ವಲಯ ಶೇ. 9.1ರಷ್ಟು ಬೆಳವಣಿಗೆ ಸಾಧಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+