ಭಾರತದ ಹಲವು ವಿಮಾನಯಾನ ಸಂಸ್ಥೆಗಳು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಈ ಹಿಂದೆ ಆಫರ್ ಗಳನ್ನು ಘೋಷಣೆ ಮಾಡಿದ್ದವು. ಅದೇ ರೀತಿ ಈ ತಿಂಗಳು ವಿಮಾನಗಳಲ್ಲಿ ದೇಶದ ಬೇರೆ ಬೇರೆ ನಗರಗಳಿಗೆ ಪ್ರಯಾಣ ಮಾಡಲು ಬಯಸುವವರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ.
ವಿಸ್ತಾರ ಹಾಗೂ ಏರ್ ಏಷಿಯಾ ತಮ್ಮ ಟಿಕೆಟ್ ದರಗಳಲ್ಲಿ ರಿಯಾಯಿತಿ ಘೋಷಿಸಿವೆ. ಈ ತಿಂಗಳಲ್ಲಿ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರಿಗೆ ರಿಯಾಯಿತಿ ದರಗಳು ಲಭ್ಯವಿದೆ.
ಏರ್ ಏಷಿಯಾ ಆರಂಭದ ಟಿಕೆಟ್ ದರ ರೂ. 599 ಆಗಿದೆ. ಏರ್ ಏಷಿಯಾ ಬುಕಿಂಗ್ ಪ್ರಕ್ರಿಯೆ ಸೆಪ್ಟಂಬರ್ 11ರಿಂದ ಆರಂಭವಾಗಲಿದ್ದು, ಫೆಬ್ರವರಿ 2017 ರಿಂದ ಅಕ್ಟೋಬರ್ 28, 2017ರ ನಡುವಿನ ಪ್ರಯಾಣಕ್ಕೆ ಅನ್ವಯವಾಗಲಿದೆ. ದೂರ ಪ್ರಯಾಣದ ದರಗಳನ್ನು ಕಂಪನಿ ಕಡಿಮೆ ಮಾಡಿದ್ದು, ದಿಲ್ಲಿ ಮತ್ತು ಬೆಂಗಳೂರು ನಡುವೆ ಏರ್ ಟಿಕೆಟ್ ದರ 2299 ರೂ. ಅಗಿದೆ. - ಗೋವಾ-ಮುಂಬೈ ನಡುವೆ ಏರ್ ದರ ರೂ. 1099 ಸೆಪ್ಟಂಬರ್ ೧೦ರಿಂದ ಟಿಕೆಟ್ ಬುಕಿಂಗ್ ಪ್ರಕ್ರಿಯೆ ಆರಂಭವಾಗಲಿದ್ದು, ಸೆಪ್ಟಂಬರ್ ೧೨ ರಿಂದ ೩೦ ರವರೆಗಿನ ಪ್ರಯಾಣಕ್ಕೆ ಈ ಏರ್ಲೈನ್ ದರಗಳು ಅನ್ವಯವಾಗಲಿವೆ. ಕೊಚ್ಚಿ, ಗುವಾಹಟಿ, ಹೈದರಾಬಾದ್ ಮತ್ತು ಗೋವಾ ವಲಯದ ಪ್ರಯಾಣ ದರ ರೂ. 899ರಿಂದ ಪ್ರಾರಂಭವಾಗಲಿದ್ದು, ಸೆಪ್ಟಂಬರ್ 11ರಿಂದ ಬುಕಿಂಗ್ ಮಾಡಬಹುದಾಗಿದೆ. ಏರ್ಲೈನ್ ಮತ್ತು ಏರ್ ಏಷಿಯಾ ವಿಮಾನಯಾನ ಸಂಸ್ಥೆಗಳು ಮಲೇಷ್ಯಾದ ಏರ್ ಏಷಿಯಾ ಬೆರೆಹಾಡ್ ಮತ್ತು ಸಿಂಗಾಪುರ ಏರ್ಲೈನ್ಸ್ ನೊಂದಿಗೆ ಜಂಟಿ ಒಪ್ಪಂದ ಮಾಡಿಕೊಂಡಿವೆ. ಬ್ಯಾಂಕಾಕ್, ಸಿಂಗಾಪುರ್, ಕೌಲಾಲಂಪುರ್ ಮತ್ತು ಬಾಲಿ ಒಳಗೊಂಡಂತೆ ವಿದೇಶಯಾನದ ಟಿಕೆಟ್ ದರಗಳಲ್ಲಿ ಏರ್ ಏಷಿಯಾ ಕಡಿತ ಮಾಡಿದೆ.
ಬುಕಿಂಗ್ ಪ್ರಕ್ರಿಯೆ
ಬೆಂಗಳೂರು ಬೇರೆ ನಗರಗಳ ನಡುವಿನ ದರ
ಬೆಂಗಳೂರು-ಪುಣೆ ರೂ. 1299, ಬೆಂಗಳೂರು-ಗೋವಾ ರೂ. 1099, ಬೆಂಗಳೂರು-ವಿಶಾಖಪಟ್ಟಣ ರೂ. 1199 ಟಿಕೆಟ್ ದರ ಇದೆ.
ಇತರೆ ನಗರಗಳು
- ದೆಹಲಿ-ಮುಂಬೈ ನಡುವೆ ಟಿಕೆಟ್ ದರ ರೂ. 2299
- ಜಮ್ಮು-ಶ್ರೀನಗರ ಟಿಕೆಟ್ ದರ ರೂ. 949
ಟಿಕೆಟ್ ಬುಕಿಂಗ್
ಏರ್ ಏಷಿಯಾ ರಿಯಾಯಿತಿ
ಜಂಟಿ ಒಪ್ಪಂದ


Click it and Unblock the Notifications