ಭಾರತದಲ್ಲಿ ಈಗ ಸ್ಟಾರ್ಟ್ಅಪ್ ಗಳ ಹವಾ ಜೋರಾಗಿದೆ. ಯುವ ನವೋದ್ಯಮಿಗಳು ಹೊಸ ಐಡಿಯಾಗಳೊಂದಿಗೆ ಹಲವು ಕ್ಷೇತ್ರಗಳಲ್ಲಿ ಅಭೂತಪೂರ್ವ ಸಾಧನೆ ಮಾಡುತ್ತಿದ್ದಾರೆ. ಕಡಿಮೆ ವಯಸ್ಸಿನಲ್ಲಿಯೇ ಲಕ್ಷಾಧಿಪತಿ/ಕೋಟ್ಯಾಧಿಪತಿಗಳಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.
ಹುರುನ್ ನಿಯತಕಾಲಿಕೆಯ 2016ರ ಸಾಲಿನ ಸಮೀಕ್ಷೆಯ 40ರ ವಯಸ್ಸಿನೊಳಗಿನ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಮೊದಲ ಸ್ಥಾನ ಪಡೆದಿದ್ದಾರೆ. ಕಳೆದ ಒಂದು ವರ್ಷದಲ್ಲಿ ಇವರ ಸಂಪತ್ತು ಶೇ. 162ರಷ್ಟು ಏರಿದ್ದು, 40 ವರ್ಷದೊಳಗಿನ ಉದ್ಯಮಿಗಳ ಪೈಕಿ ಪ್ರಸಕ್ತ ಸಾಲಿನಲ್ಲಿ ಶ್ರೀಮಂತ ಉದ್ಯಮಿ ಎನಿಸಿದ್ದಾರೆ. ಕಳೆ ವರ್ಷ ವಿಜಯ್ ಶೇಖರ್ ಸಂಪತ್ತು 2824 ಕೋಟಿ ರೂ.ಗಳಿತ್ತು.
ಹೀಗೆ ಭಾರತದಲ್ಲಿ ಒಟ್ಟು 339 ಕಿರಿ ವಯಸ್ಸಿನ ಸಿರಿವಂತ ಉದ್ಯಮಿಗಳ ಪಟ್ಟಿ ಮಾಡಲಾಗಿದ್ದು, ಇವರಲ್ಲಿ 40 ವರ್ಷಕ್ಕಿಂತ ಒಳಗಿನವರ ಸಂಖ್ಯೆ ಹನ್ನೊಂದು. ಈ ಯುವ ಉದ್ಯಮಿಗಳ ವಿವರ ಇಲ್ಲಿದೆ.
ಭವಿಷ್ ಅಗರವಾಲ್
ವಯಸ್ಸು- 30
ಸಂಪತ್ತು- 3000 ಕೋಟಿ
ಕಂಪನಿ- ಒಲಾ ಕ್ಯಾಬ್ಸ್
ನಗರ- ಮುಂಬೈ
ರಂಗ- ಟೆಕ್ನಾಲಜಿ
ರಾಜೀವ್ ಪೊಡ್ಡಾರ್
ವಯಸ್ಸು- 31
ಸಂಪತ್ತು- 4500 ಕೋಟಿ
ಕಂಪನಿ- ಬಾಲ್ ಕೃಷ್ಣ
ನಗರ- ಮುಂಬೈ
ರಂಗ- ಆಟೊಮೊಬೈಲ್ ಮತ್ತು ಆಟೊ ಕಾಂಪೊನೆಂಟ್ಸ್
ಕುನಾಲ್ ಭಹುಲ್
ವಯಸ್ಸು- 32
ಸಂಪತ್ತು- 2300 ಕೋಟಿ
ಕಂಪನಿ- ಸ್ನ್ಯಾಪ್ ಡೀಲ್
ನಗರ- ದೆಹಲಿ
ರಂಗ- ಟೆಕ್ನಾಲಜಿ
ಬಿನ್ನಿ ಬನ್ಸಾಲ್
ವಯಸ್ಸು- 33
ಸಂಪತ್ತು- 5400 ಕೋಟಿ
ಕಂಪನಿ- ಫ್ಲಿಪ್ಕಾರ್ಟ್
ನಗರ- ಬೆಂಗಳೂರು
ರಂಗ- ಟೆಕ್ನಾಲಜಿ
ನೀಲಿಮಾ ಮೊಟಪಾರ್ತಿ
ವಯಸ್ಸು- 34
ಸಂಪತ್ತು- 7100 ಕೋಟಿ
ಕಂಪನಿ- ಡಿವಿಸ್ ಲ್ಯಾಬೊರೆಟರಿಸ್
ನಗರ- ಹೈದರಾಬಾದ್
ರಂಗ- ಫಾರ್ಮಾ
ಸಚಿನ್ ಬನ್ಸಾಲ್
ವಯಸ್ಸು- 35
ಸಂಪತ್ತು- 5400 ಕೋಟಿ
ಕಂಪನಿ- ಫ್ಲಿಪ್ಕಾರ್ಟ್
ನಗರ- ಬೆಂಗಳೂರು
ರಂಗ- ಟೆಕ್ನಾಲಜಿ
ದಿವ್ಯಾಂಕ್ ತುರಾಖಿಯಾ
ವಯಸ್ಸು- 35
ಸಂಪತ್ತು- 3000 ಕೋಟಿ
ಕಂಪನಿ- ಡೈರೆಕ್ಟಿ ವೆಬ್ ಸರ್ವಿಸಸ್
ನಗರ- ಮುಂಬೈ
ರಂಗ- ಟೆಕ್ನಾಲಜಿ
ಭವಿನ್ ತುರಾಖಿಯಾ
ವಯಸ್ಸು- 36
ಸಂಪತ್ತು- 3000 ಕೋಟಿ
ಕಂಪನಿ- ಡೈರೆಕ್ಟಿ ವೆಬ್ ಸರ್ವಿಸಸ್
ನಗರ- ಮುಂಬೈ
ರಂಗ- ಟೆಕ್ನಾಲಜಿ
ನಿಶಿತಾ ಶಾ ಫೆದರ್ ಬುಶ್
ವಯಸ್ಸು- 36
ಸಂಪತ್ತು- 2200 ಕೋಟಿ
ಕಂಪನಿ- ಪ್ರೆಸಿಯಸ್ ಶಿಪ್ಪಿಂಗ್
ನಗರ- ಬ್ಯಾಂಕಾಕ್
ರಂಗ- ಸಾರಿಗೆ ಸೇವೆ
ವಿಜಯ್ ಶೇಖರ್ ಶರ್ಮಾ
ವಯಸ್ಸು- 38
ಸಂಪತ್ತು- 7300 ಕೋಟಿ
ಕಂಪನಿ- ಪೇಟಿಎಂ
ನಗರ- ದೆಹಲಿ
ರಂಗ- ಟೆಕ್ನಾಲಜಿ
ದಿವಿ ಸತ್ಚಂದ್ರ ಕಿರಣ್
ವಯಸ್ಸು- 40
ಸಂಪತ್ತು- 6000 ಕೋಟಿ
ಕಂಪನಿ- ದಿವಿಸ್ ಲ್ಯಾಬೊರೆಟರಿ
ನಗರ- ಹೈದರಾಬಾದ್
ರಂಗ- ಫಾರ್ಮಾ


Click it and Unblock the Notifications