For Quick Alerts
ALLOW NOTIFICATIONS  
For Daily Alerts

ಕಾರ್ಮಿಕ ಕಾನೂನು ಸುಧಾರಣೆಗೆ ಕೇಂದ್ರ ಚರ್ಚೆ

By Siddu
|

ಕಾರ್ಮಿಕ ಕಾನೂನು ಸುಧಾರಣೆಗಾಗಿ ಕಾರ್ಮಿಕ ಒಕ್ಕೂಟಗಳು ದೇಶವ್ಯಾಪಿ ಹಮ್ಮಿಕೊಂಡಿದ್ದ ಮುಷ್ಕರದ ಎರಡು ವಾರಗಳ ನಂತರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದ ಕೇಂದ್ರ ಮಂತ್ರಿಗಳ ತಂಡ ಗುರುವಾರ ಸಭೆ ಸೇರಲಿದೆ.

ಸಭೆಯಲ್ಲಿ ಕಾರ್ಮಿಕ ಸುಧಾರಣೆಗೆ ಸಂಬಂಧಿಸಿದಂತೆ ಕಾರ್ಮಿಕ ವೇತನ, ಪಿಂಚಣಿ, ಸಾಮಾಜಿಕ ಭದ್ರತೆ, ಸಣ್ಣ ಕಾರ್ಖಾನೆಗಳ ಬಿಲ್ ಇತ್ಯಾದಿ ಅಂಶಗಳ ಕುರಿತಾಗಿ ಸಮಗ್ರವಾಗಿ ಚರ್ಚಿಸಲಾಗುವುದು ಎಂದು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಫೇಡರೆಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ(ಫಿಕ್ಕಿ) ಹಮ್ಮಿಕೊಂಡಿದ್ದ ಸಮಾರಂಭವೊಂದರಲ್ಲಿ ಹೇಳಿದರು.

ಕಾರ್ಮಿಕ ಕಾನೂನು ಸುಧಾರಣೆಗೆ ಕೇಂದ್ರ ಚರ್ಚೆ

ಕನಿಷ್ಟ ವೇತನ, ಪಿಂಚಣಿ, ಅಸಂಘಟಿತ ವಲಯದ ಸಾಮಾಜಿಕ ಭದ್ರತೆ ಬೇಡಿಕೆಗಳನ್ನಿಟ್ಟುಕೊಂಡು ಸೆಪ್ಟಂಬರ್ 2ರಂದು ಕೇಂದ್ರ ವಾಣಿಜ್ಯ ಒಕ್ಕೂಟಗಳು ಒಂದು ದಿನದ ದೇಶವ್ಯಾಪಿ ಮುಷ್ಕರ ಹಮ್ಮಿಕೊಂಡಿದ್ದವು.

English summary

Centre decide to discuss on labour law reforms

A group of central ministers led by Finance Minister Arun Jaitley will meet on Thursday to discuss the proposed labour code on wages and the Small Factories Bill, barely two weeks after trade unions led a nationwide strike to express opposition to proposed labour reforms.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X