ಸ್ವಾತಂತ್ರ್ಯ ಯೋಧರ ಪಿಂಚಣಿ 20% ಹೆಚ್ಚಳ

ಸ್ವಾತಂತ್ರ್ಯ ಹೋರಾಟಗಾರರ ಮಾಸಿಕ ಪಿಂಚಣಿಯನ್ನು ರೂ. 5000ದಷ್ಟು ಹೆಚ್ಚಿಸಲಾಗಿದ್ದು, ಇದರಲ್ಲಿ ಅಂಡಮಾನ ದ್ವೀಪದ ಸೆಲ್ಯುಲರ್ ಜೈಲಿನಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರು ಒಳಗೊಂಡಿದ್ದಾರೆ.

ಎಲ್ಲಾ ವರ್ಗದ ಸ್ವಾತಂತ್ರ್ಯ ಯೋಧರಿಗೆ ಶೇ. 20ರಷ್ಟು ವರ್ಧಿತ ಪಿಂಚಣಿಯನ್ನು ಅವರ ಹೆಂಡತಿಯರಿಗೆ ಮತ್ತು ಅವಲಂಬಿತರಿಗೆ ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

1. ಕೆಂಪುಕೋಟೆಯಲ್ಲಿ ಪ್ರಧಾನಿ ಘೋಷಣೆ

1. ಕೆಂಪುಕೋಟೆಯಲ್ಲಿ ಪ್ರಧಾನಿ ಘೋಷಣೆ

70ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೆಂಪುಕೋಟೆಯಲ್ಲಿ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿಯವರು ಸ್ವಾತಂತ್ರ್ಯ ಯೋದರ ಪಿಂಚಣಿ ಶೇ. 20ರಷ್ಟು ಹೆಚ್ಚಳ ಮಾಡಲಾಗುವುದು ಎಂದು ಪ್ರಕಟಿಸಿದ್ದರು.

2. ಪರಿಷ್ಕೃತ ಪಿಂಚಣಿ ಜಾರಿ

2. ಪರಿಷ್ಕೃತ ಪಿಂಚಣಿ ಜಾರಿ

ಪರಿಷ್ಕೃತ ಪಿಂಚಣಿ ಆಗಸ್ಟ್ 15, 2016ರಿಂದ ಜಾರಿ ಆಗಲಿದೆ. ಪರಿಷ್ಕೃತ ಮೊತ್ತವನ್ನು ಎಲ್ಲಾ ವರ್ಗದ ಸ್ವಾತಂತ್ರ್ಯ ಯೋಧರಿಗೆ ಮೂಲ ಪಿಂಚಣಿಯಾಗಿ ಸಮಸ್ಯೆಗಳ ಪರಿಹಾರಕ್ಕಾಗಿ ನೀಡಲಾಗುವುದು ಎಂದು ಹೇಳಲಾಗಿದೆ.

3. ರಾಜಕೀಯ ಕೈದಿಗಳ ಪಿಂಚಣಿ ಹೆಚ್ಚಳ

3. ರಾಜಕೀಯ ಕೈದಿಗಳ ಪಿಂಚಣಿ ಹೆಚ್ಚಳ

ಎಕ್ಸ್-ಅಂಡಮಾನ್ ರಾಜಕೀಯ ಕೈದಿಗಳಿಗೆ ಮತ್ತು ಅವರ ಹೆಂಡತಿಯರಿಗೆ ಪಿಂಚಣಿಯನ್ನು ರೂ. 24,775 ರಿಂದ 30,000ಕ್ಕೆ ಹೆಚ್ಚಿಸಲಾಗಿದೆ.

4. ಬ್ರಿಟಿಷ್ ನಂತರದ ಭಾರತ

4. ಬ್ರಿಟಿಷ್ ನಂತರದ ಭಾರತ

ಬ್ರಿಟಿಷ್ ನಂತರದ ಭಾರತದಲ್ಲಿ ಕಷ್ಟ ಅನುಭವಿಸಿದ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಯನ್ನು ರೂ. 23,085 ರಿಂದ 28,000ಕ್ಕೆ ಹೆಚ್ಚಿಸಲಾಯಿತು.

5. ಐಎನ್ಎ ಸದಸ್ಯರ ಪಿಂಚಣಿ

5. ಐಎನ್ಎ ಸದಸ್ಯರ ಪಿಂಚಣಿ

ಭಾರತೀಯ ರಾಷ್ಟ್ರೀಯ ಸೇನೆ(ಐಎನ್ಎ) ಸದಸ್ಯರನ್ನೊಳಗೊಂಡಂತೆ ಇನ್ನಿತರ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಯನ್ನು ಪ್ರತಿ ತಿಂಗಳಿಗೆ ರೂ. 21,395 ರಿಂದ 26,000 ಕ್ಕೆ ಹೆಚ್ಚಿಸಲಾಯಿತು.

6. ಸ್ವತಂತ್ರತಾ ಸೈನಿಕ್ ಸಮ್ಮಾನ್ ಪೆನ್ಷನ್

6. ಸ್ವತಂತ್ರತಾ ಸೈನಿಕ್ ಸಮ್ಮಾನ್ ಪೆನ್ಷನ್

ಕೇಂದ್ರ ಸ್ವಾತಂತ್ರ್ಯ ಹೋರಾಟಗಾರ ಪಿಂಚಣಿದಾರರಿಗೆ ಮತ್ತು ಅರ್ಹ ಅವಲಂಬಿತರಿಗೆ 'ಸ್ವತಂತ್ರತಾ ಸೈನಿಕ್ ಸಮ್ಮಾನ್ ಪೆನ್ಷನ್' ಅಡಿಯಲ್ಲಿ ವರ್ಧಿತ ಪಿಂಚಣಿಯನ್ನು ಆಗಸ್ಟ್ 15, 2016 ರಿಂದ ಜಾರಿ ತರಲಾಗುವುದು.

7. ಪಿಂಚಣಿ ಮಂಜೂರು

7. ಪಿಂಚಣಿ ಮಂಜೂರು

ಈ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ 1,71,605 ಸ್ವಾತಂತ್ರ್ಯ ಯೋಧರು ಮತ್ತು ಅರ್ಹ ಅವಲಂಬಿತರಿಗೆ ಪಿಂಚಣಿ ಮಂಜೂರು ಮಾಡಲಾಗಿದೆ. ಪ್ರಸ್ತುತ 11,690 ಸ್ವಾತಂತ್ರ್ಯ ಯೋಧರು ಮತ್ತು ಅರ್ಹ ಅವಲಂಬಿತರನ್ನು ಕವರ್ ಮಾಡಲಾಗಿದೆ. ಇದರಲ್ಲಿ 11,690 ಜನರು ಸ್ವಾತಂತ್ರ್ಯ ಯೋಧರು, 24,792 ಹೆಂಡತಿಯರು(ವಿಧವೆಯರು) ಮತ್ತು 1490 ಮಕ್ಕಳು ಸೇರಿದ್ದಾರೆ.

8. ಸ್ವಾತಂತ್ರ್ಯ ಹೋರಾಟಗಾರರಿಗೂ ದು:ಖ ಪರಿಹಾರ

8. ಸ್ವಾತಂತ್ರ್ಯ ಹೋರಾಟಗಾರರಿಗೂ ದು:ಖ ಪರಿಹಾರ

ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ ಕೈಗಾರಿಕಾ ಕಾರ್ಮಿಕರಿಗೆ ವರ್ಷಕ್ಕೆ ಎರಡು ಬಾರಿ ದು:ಖ ಪರಿಹಾರ(Dearness Relief) ನೀಡುವಂತೆ ವಾರ್ಷಿಕ ಆಧಾರದ ಮೇಲೆ ಸ್ವಾತಂತ್ರ್ಯ ಹೋರಾಟಗಾರರಿಗೂ ಪಿಂಚಣಿ ನೀಡಲಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+