ಟೆಲಿಕಾಂ ರಂಗದಲ್ಲಿ ಈಗ ಎಲ್ಲೆಲ್ಲೂ ಜಿಯೊ ದರ್ಬಾರ್ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಗೆ ಅನೇಕ ಆಫರ್ ಗಳನ್ನು ನೀಡಲು ಮುಂದಾಗಿವೆ. ಜತೆಗೆ ದೂರಸಂಪರ್ಕ ವಲಯದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿವೆ.
ಬಿಎಸ್ಎನ್ಎಲ್ ಕೂಡ ಜಿಯೊಗಿಂತಲೂ ಕಡಿಮೆ ದರದ ನೆಟ್ ಪ್ಯಾಕ್ ಮತ್ತು ಉಚಿತ ಕರೆ ಸೌಲಭ್ಯ ನೀಡಲು ಮುಂದಾಗಿದೆ.
1. ಜಿಯೊಗೆ ಸವಾಲು
ಸಾರ್ವಜನಿಕ ವಲಯದ ಬಿಎಸ್ಎನ್ಎಲ್ ಈಗ ಹೊಸ ಪ್ರಯೋಗಕ್ಕೆ ಮುಂದಾಗಿ ರಿಲಾಯನ್ಸ್ ಜಿಯೊ ಗೆ ಸವಾಲು ಹಾಕಲು ನಿರ್ಧರಿಸಿದೆ. ಜಿಯೊಗಿಂತಲೂ ಕಡಿಮೆ ದರದ ನೆಟ್ ಪ್ಯಾಕ್ ಮತ್ತು ಲೈಫ್ ಟೈಮ್ ಉಚಿತ ವಾಯ್ಸ್ ಕರೆ ಸೌಲಭ್ಯ ನೀಡಲು ಮುಂದಾಗಿದೆ.
2. BSNL ಲೈಫ್ ಟೈಮ್ ಉಚಿತ ಸೇವೆ
ರಿಲಾಯನ್ಸ್ ಜಿಯೊನಂತೆಯೇ ಬಿಎಸ್ಎನ್ಎಲ್ ಉಚಿತ ಸೇವೆ ನೀಡಲು ಮುಂದಾಗಿದೆ. ಜಿಯೊ ಸೇವೆ 4ಜಿ ಚಂದಾದಾರರಿಗೆ ಮಾತ್ರ ಉಚಿತವಾಗಿ ನೀಡುತ್ತಿದ್ದರೆ ಬಿಎಸ್ಎನ್ಎಲ್ 2ಜಿ ಮತ್ತು 3ಜಿ ಗ್ರಾಹಕರಿಗೆ ಸೇವೆಗಳನ್ನು ನೀಡಲು ಮುಂದಾಗಿದೆ.
3. ಷರತ್ತು ಏನು?
ಬಿಎಸ್ಎನ್ಎಲ್ ಸಂಸ್ಥೆಯ ಈ ಸೌಲಭ್ಯ ಪಡೆಯಲು ಮೊಬೈಲ್ ಬಳಕೆದಾರರು ತಮ್ಮ ಮನೆಯಲ್ಲಿ ಬ್ರಾಡ್ ಬ್ಯಾಂಡ್ ಸೌಲಭ್ಯವನ್ನು ಹೊಂದಿರಬೇಕಾಗಿದೆ.
ಹೊರಹೋಗುವ ಕರೆಗಳನ್ನು ಲ್ಯಾಂಡ್ ಲೈನ್ ನೆಟ್ವರ್ಕ್ ನಲ್ಲೇ ನಿರ್ವಹಿಸುವ ಉದ್ದೇಶದಿಂದ ಸಂಸ್ಥೆ ಈ ಯೋಜನೆ ಮಾಡಿದೆ. ಜತೆಗೆ ಜನರು ಹೆಚ್ಚು ಕಾಲ ಮನೆಯಲ್ಲೇ ಇರುವುದರಿಂದ ಇದರ ಲಾಭ ದೊರೆಯಲಿದೆ.
4. ಟಾಕ್ ಟೈಮ್ ರಿಚಾರ್ಜ್ ಮಾಡಬೇಕಿಲ್ಲ
ಬ್ರಾಡ್ ಬ್ಯಾಂಡ್ ಇರುವ ಗ್ರಾಹಕರು ನೆಟ್ ಪ್ಯಾಕ್ ಹಾಕಿಕೊಂಡರೆ ಸಾಕು. ಟಾಕ್ ಟೈಮ್ ರಿಚಾರ್ಜ್ ಮಾಡಬೇಕಾದ ಅಗತೆ ಇರುವುದಿಲ್ಲ. ಚಂದಾದಾರರಿಗೆ ಉಚಿತ ಧ್ವನಿ ಕರೆಗಳ ಸೌಲಭ್ಯ ಮನೆಯ ಹೊರಗಡೆ ಮೊಬೈಲ್ ಬಳಸಿದಾಗಲು ಸಿಗಲಿದೆ.
5. ಜಿಯೊಗಿಂತ ಅಗ್ಗದ ಕರೆ ಸೌಲಭ್ಯ
2017ರಿಂದ ಸಂಸ್ಥೆ ಜೀವನಪೂರ್ತಿ ಉಚಿತ ಕರೆ ಹಾಗೂ ಅನೇಕ ಕೊಡುಗೆಗಳನ್ನು ಒದಗಿಲಿಸಲಿದೆ. ಇದು ಜಿಯೊ ಒದಗಿಸುವಆರಂಭಿಕ ಪ್ಲಾನ್ ರೂ. 149ಕ್ಕಿಂತಲೂ ಕಡಿಮೆಯಾಗಿರಲಿದೆ. ಅಂದರೆ ಜಿಯೊಗಿಂತ 2-4 ರೂ. ಅಗ್ಗವಾಗಿರಲಿದೆ ಎಂದು ಬಿಎಸ್ಎನ್ಎಲ್ ಹೇಳಿದೆ.


Click it and Unblock the Notifications