ಗೂಗಲ್ ನಿಂದ ಉಚಿತ ವೈಫೈ ಸೇವೆ ಘೋಷಣೆ

ಗೂಗಲ್ ಸಂಸ್ಥೆ ತನ್ನ 18ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಭಾರತದ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆ ಸಂಪರ್ಕಗಳನ್ನು ಒದಗಿಸಲು ಮುಂದಾಗಿದೆ.

ಅಲ್ಲದೇ ವಿಶ್ವದಾದ್ಯಂತ ಉಚಿತ ವೈ-ಫೈ ಸೇವೆ ಒದಗಿಸಲು ಈ ಕಾರ್ಯಕ್ರಮವನ್ನು ಪರಿಚಯಿಸುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ಗೂಗಲ್ ಸ್ಟೇಷನ್

ಗೂಗಲ್ ಸ್ಟೇಷನ್

ಗೂಗಲ್ ಸ್ಟೇಷನ್ ಹೆಸರಿನಲ್ಲಿ ರೈಲ್ವೆ ನಿಲ್ದಾಣ, ಕೆಫೆ, ಮಾಲ್ ಮತ್ತು ಇತರ ಎಲ್ಲಾ ಸ್ಥಳಗಳಲ್ಲಿ ವೇಗದ ವೈ-ಫೈ ಸೇವೆಗಳನ್ನು ಜಾರಿ ತರಲು ಯೋಜಿಸಿದೆ.

ಸ್ಥಳೀಯ ಭಾಷೆಗಳಲ್ಲಿ ಅಂತರ್ಜಾಲ

ಸ್ಥಳೀಯ ಭಾಷೆಗಳಲ್ಲಿ ಅಂತರ್ಜಾಲ

ಭಾರತದಲ್ಲಿ ಅತಿಹೆಚ್ಚು ಅಂತರ್ಜಾಲ ಬಳಕೆದಾರರಿದ್ದಾರೆ. ಹೀಗಾಗಿ ಇನ್ನೂ ಹೆಚ್ಚಿನ ಭಾರತೀಯರು ಅಂತರ್ಜಾಲ ಸೌಲಭ್ಯವನ್ನು ಪಡೆದುಕೊಳ್ಳುವಂತಾಗಬೇಕು. ಜತೆಗೆ ಭಾರತದ ಸ್ಥಳೀಯ ಭಾಷೆಗಳಲ್ಲಿ ಅಂತರ್ಜಾಲವನ್ನು ಹೆಚ್ಚು ಬಳಸುವಂತಾಗಲು ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿ ಪಡಿಸಲು ಚಿಂತಿಸಿದ್ದೇವೆ ಎಂದು ಸೇನ್ ಗುಪ್ತಾ ಹೇಳಿದ್ದಾರೆ.

ರೈಲು ನಿಲ್ದಾಣಗಳಲ್ಲಿ ವೈ-ಫೈ ಸೇವೆ

ರೈಲು ನಿಲ್ದಾಣಗಳಲ್ಲಿ ವೈ-ಫೈ ಸೇವೆ

ರೈಲ್ ಟೆಲ್ ಮತ್ತು ಭಾರತೀಯ ರೈಲ್ವೆಯೊಂದಿಗಿನ ಸಹಭಾಗಿತ್ವದಲ್ಲಿ ಕಂಪನಿ ರೈಲು ನಿಲ್ದಾಣಗಳಲ್ಲಿ ವೈ-ಫೈ ಸೇವೆಗಳನ್ನು ಒದಗಿಸುವ ಗೂಗಲ್ ಸ್ಟೇಷನ್ ಗಳನ್ನು ಆರಂಭಿಸಿದೆ. ಇದು ವೇಗದ, ವಿಶ್ವಸನೀಯ ಮತ್ತು ಸುರಕ್ಷಿತ ವೈ-ಫೈ ಸೇವೆ ಒದಗಿಸಲಿದೆ ಎಂದು ತಿಳಿಸಿದೆ.

ಉತ್ತಮ ಅನುಭವ

ಉತ್ತಮ ಅನುಭವ

ಭಾರತದ ಬಳಕೆದಾರರಿಗೆ ಉತ್ತಮ ಅಂತರ್ಜಾಲ ಅನುಭವ ನೀಡುವ ನಿಟ್ಟಿನಲ್ಲಿ ಗೂಗಲ್ ಕೆಲಸ ಮಾಡುತ್ತಿದೆ ಎಂದು ಗೂಗಲ್ ಉಪಾಧ್ಯಕ್ಷ ಸೀಸರ್ ಸೇನ್ ಗುಪ್ತಾ ಹೇಳಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+