ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಟೆಕ್ ಮಹೀಂದ್ರಾ, ಎಚ್ಸಿಎಲ್, ಮೈಂಡ್ ಟ್ರೀ ಇವೇಲ್ಲವೂ ಜಾಗತಿಕವಾಗಿ ಹಾಗೂ ದೇಶದಲ್ಲಿ ಅಗ್ರ ಶ್ರೆಯಾಂಕ ಹೊಂದಿರುವ ಕಂಪನಿಗಳಾಗಿವೆ.
ಭಾರತದಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ರಂಗ ಪ್ರಮುಖ ಸೇವಾ ವಲಯಗಳಲ್ಲಿ ಒಂದಾಗಿದೆ. ಇದು ದೇಶದ ಜಿಡಿಪಿ(GDP) ಅಭಿವೃದ್ಧಿಯಲ್ಲಿ ಮಹತ್ತರ ಕೊಡುಗೆ ನೀಡುತ್ತಿದೆ.
ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಟೆಕ್ ಮಹೀಂದ್ರಾ, ಎಚ್ಸಿಎಲ್, ಮೈಂಡ್ ಟ್ರೀ ಇವೇಲ್ಲವೂ ಜಾಗತಿಕವಾಗಿ ಹಾಗೂ ದೇಶದಲ್ಲಿ ಅಗ್ರ ಶ್ರೆಯಾಂಕ ಹೊಂದಿರುವ ಕಂಪನಿಗಳಾಗಿವೆ.
ಆದಾಯ ಮತ್ತು ಲಾಭದ ಆಧಾರದಲ್ಲಿ 2016ರಲ್ಲಿ ಭಾರತದಲ್ಲಿ ಟಾಪ್ 10 ಅಗ್ರ ಶ್ರೇಯಾಂಕ ಪಡೆದಿರುವ ಪ್ರಮುಖ ಕಂಪನಿಗಳ ವಿವರ ಇಲ್ಲಿದೆ ನೋಡಿ.
1. ಟಿಸಿಎಸ್
ರೆವೆನ್ಯೂ: ರೂ. 107542.5 ಕೋಟಿ
ಲಾಭ: ರೂ. 23972 ಕೋಟಿ
ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಭಾರತದ ತುಂಬಾ ಹಳೆಯ ಕಂಪನಿ. ಇದು ಭಾರತದ ಹಾಗೂ ಅತಿದೊಡ್ಡ ವಿಶ್ವದ ಕಂಪನಿಯಾಗಿದೆ. ಜಗತ್ತಿನ 40ಕ್ಕಿಂತ ಹೆಚ್ಚಿನ ದೇಶಗಳಲ್ಲಿ ಒಟ್ಟು 3,50,000 ಉದ್ಯೋಗಿಗಳಿದ್ದಾರೆ. ಟಿಸಿಎಸ್ ಭಾರತದ ಇಂದಿನ ಅತಿದೊಡ್ಡ ನೇಮಕಾತಿ ಸಂಸ್ಥೆಗಳಲ್ಲಿ ಒಂದಾಗಿದ್ದು, 60ಕ್ಕಿಂತ ಹೆಚ್ಚು ಅಂಗಸಂಸ್ಥೆಗಳನ್ನು ಹೊಂದಿದೆ. ಇದು CMMI ಐದು ಹಂತದ ಕಂಪನಿ.
ಬ್ಯಾಂಕಿಂಗ್, ವಿಮೆ, ಉತ್ಪಾದನೆ, ಸಗಟು ವ್ಯಾಪಾರ, ಇಂಧನ, ಆರೋಗ್ಯ, ನಿರ್ಮಾಣ, ಗಣಿಗಾರಿಕೆ ಹೀಗೆ ಅನೇಕ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಕೆಳಗಿನ ಸೇವೆಗಳನ್ನು ಒದಗಿಸುತ್ತದೆ.
1) ಅಪ್ಲಿಕೇಶನ್ ಅಭಿವೃದ್ಧಿ
2) ನಿರ್ವಹಣೆ
3) ಬೆಂಬಲ
4) ಕನ್ಸಲ್ಟಿಂಗ್
5) ಬಿಪಿಓ
6) ಇನ್ಫ್ರಾಸ್ಟ್ರಕ್ಚರ್ ಹಾಗೂ ಇತರ ಐಟಿ ಸೇವೆಗಳು
2. ಇನ್ಫೋಸಿಸ್
ರೆವೆನ್ಯೂ: ರೂ. 65569 ಕೋಟಿ
ಲಾಭ: ರೂ. 18982 ಕೋಟಿ
1981ರಲ್ಲಿ ನಾರಾಯಣ ಮೂರ್ತಿ ಇನ್ಫೋಸಿಸ್ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಭಾರತದ 2ನೇ ಅತಿದೊಡ್ಡ ಐಟಿ ಕಂಪನಿಯಾಗಿದೆ. ಇನ್ಫೋಸಿಸ್ ಭಾರತದಲ್ಲಿನ ಅತ್ಯಂತ ಜನಪ್ರಿಯ ಬ್ರಾಂಡ್ ಆಗಿದ್ದು, ಇದು ನಾರಾಯಣ ಮೂರ್ತಿ, ಗೋಪಾಲಕೃಷ್ಣನ್, ನಂದನ್ ನಿಲೇಖಣಿ ಮತ್ತು ವಿಶಾಲ್ ಸಿಕ್ಕಾ ತರಹದ ಪ್ರಬಲ ನಾಯಕರು ಹೊಂದಿದೆ. ಪ್ರಸ್ತುತ 194000 ಉದ್ಯೋಗಿಗಳನ್ನು ಹೊಂದಿದ್ದು, ವಿಶ್ವದ 40ಕ್ಕಿಂತ ಹೆಚ್ಚಿನ ದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಇನ್ಫೋಸಿಸ್ ಬಿಪಿಓ,ಇನ್ಫೋಸಿಸ್ ಕನ್ಸಲ್ಟಿಂಗ್, ಇನ್ಫೋಸಿಸ್ ಸಾರ್ವಜನಿಕ ಸೇವೆಗಳು, Skava, EdgeVerve ಇದರ ಅಂಗಸಂಸ್ಥೆಗಳಾಗಿವೆ.
3. ವಿಪ್ರೊ
ರೆವೆನ್ಯೂ: ರೂ. 45096.4 ಕೋಟಿ
ಲಾಭ: ರೂ. 8099 ಕೋಟಿ
ವಿಪ್ರೊ ಭಾರತದಲ್ಲಿನ ಮೂರನೇ ಅತಿದೊಡ್ಡ ಐಟಿ ಕಂಪನಿ. 1990ರಲ್ಲಿ ವಿಪ್ರೊ ಕಡಲಾಚೆಯ ಅಭಿವೃದ್ಧಿ ಮಾದರಿ ಕೇಂದ್ರಗಳನ್ನು ಪ್ರಾರಂಭಿಸಿದೆ. ಜಗತ್ತಿನ ಅನೇಕ ಭಾಗಗಳಿಂದ 170000 ಉದ್ಯೋಗಿಗಳನ್ನು ನೇಮಿಸಿದ್ದು, 6 ದೇಶಗಳಲ್ಲಿ ಕಾರ್ಯವ್ಯಾಪ್ತಿ ಹೊಂದಿದೆ.
ವಿಪ್ರೊ CMMI ಐದು ಹಂತದ ಕಂಪನಿ.
ವಿಪ್ರೊ ಸೇವಾ ವಯಗಳು
1) ಬಿಎಫ್ಎಸ್ಐ
2) ಉತ್ಪಾದನೆ ಮತ್ತು ತಂತ್ರಜ್ಞಾನ
3) ಕಮ್ಯುನಿಕೇಷನ್ಸ್
4) ಗ್ರಾಹಕ ವ್ಯವಹಾರ ಘಟಕ
5) ಶಕ್ತಿ, ನೈಸರ್ಗಿಕ ಸಂಪನ್ಮೂಲ ಮತ್ತು ಉಪಯುಕ್ತತೆ
6) ಹೆಲ್ತ್ ಕೇರ್ ಮತ್ತು ಲೈಫ್ ಸೈನ್ಸಸ್
4. ಎಚ್ಸಿಎಲ್ ಟೆಕ್ನಾಲಜಿ
ರೆವೆನ್ಯೂ: ರೂ. 40527.5 ಕೋಟಿ
ಲಾಭ: ರೂ. 7267 ಕೋಟಿ
ಎಚ್ಸಿಎಲ್ ನೋಯ್ಡಾ ಮೂಲದ ಒಂದು ಭಾರತೀಯ ಕಂಪನಿಯಾದ್ದು, ಶಿವ ನಾಡಾರ್ 1991 ರಲ್ಲಿ ಪ್ರಾರಂಭಿಸಿದರು. ಐಟಿ ರಂಗದ ಪ್ರಮುಖ ಸಂಸ್ಥೆ.
ಎಚ್ಸಿಎಲ್ ಟೆಕ್ IT ಸೇವೆಗಳು
1) ಇನ್ಫ್ರಾಸ್ಟ್ರಕ್ಚರ್
2) ಇಂಜಿನೀಯರಿಂಗ್
3) ಅಪ್ಲಿಕೇಶನ್ ಗಳು
4) ಉದ್ಯಮ ಸೇವೆಗಳು
5. ಟೆಕ್ ಮಹೀಂದ್ರಾ
ರೆವೆನ್ಯೂ: ರೂ. 25727.2ಕೋಟಿ
ಲಾಭ: ರೂ. 2693 ಕೋಟಿ
ಟೆಕ್ ಮಹೀಂದ್ರಾ ಭಾರತದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಐಟಿ ಕಂಪನಿಗಳಲ್ಲಿ ಒಂದಾಗಿದೆ. 2006 ರಲ್ಲಿ ಟೆಕ್ ಮಹೀಂದ್ರಾ & ಸತ್ಯಂ ಎಂದು ಮರುನಾಮಕರಣ ಮಾಡಲಾಯಿತು.
ಟೆಕ್ ಮಹೀಂದ್ರಾ ಬಿಎಫ್ಎಸ್ಐ, ಸಂವಹನ, ಸಾರ್ವಜನಿಕ ವಲಯ, ಕ್ರೀಡಾ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸೇವೆಗಳನ್ನು ಒದಗಿಸುತ್ತದೆ.
6. ಎಂಫಸಿಸ್
ರೆವೆನ್ಯೂ: ರೂ. 6150 ಕೋಟಿ
ಲಾಭ: ರೂ. 758 ಕೋಟಿ
ಭಾರತ ಮೂಲದ ಎಂಫಸಿಸ್ ಕಂಪನಿಯನ್ನು ಜೆರ್ರಿ ರಾವ್ ಮತ್ತು ಜೆರಿಯಾನ್ ಟಾಸ್ ಸ್ಥಾಪಿಸಿದರು.
Mphasis CMMI 5 ಹಂತದ ಕಂಪನಿಯಾಗಿದ್ದು, ಐಎಸ್ಒ 9001 ಪ್ರಮಾಣಿತಗೊಂಡಿದೆ.
ಎಂಫಸಿಸ್ ಸೇವಾ ವಲಯ
1. ಅನ್ವಯ ಅಭಿವೃದ್ಧಿ, ನಿರ್ವಹಣೆ
2. ವಿಶೇಷ ಸೇವೆಗಳು
3. ಸಂಸ್ಥೆ ವಾಸ್ತುಶಿಲ್ಪ, ಏಕೀಕರಣ, ಮತ್ತು
ವ್ಯವಹಾರ ಪ್ರಕ್ರಿಯೆ ನಿರ್ವಹಣೆ
4. ವೆಬ್ ಟೆಕ್ನಾಲಜೀಸ್
5. ಮ್ಯಾನೇಜ್ಮೆಂಟ್(UX)
6. ಡಿಜಿಟಲ್ ಪ್ರಕ್ರಿಯೆ
7. ಎಲ್ & ಟಿ ಇನ್ಫೋಟೆಕ್
ರೆವೆನ್ಯೂ: ರೂ. 5847.06 ಕೋಟಿ
ಲಾಭ: ರೂ. 803.1 ಕೋಟಿ
ಲಾರ್ಸೆನ್ ಅಂಡ್ ಟೂಬ್ರೊ ಉತ್ಪಾದನೆ ಮತ್ತು ಕೈಗಾರಿಕಾ ವಲಯದ ದೊಡ್ಡ ಹೆಸರು. ಇದು ಐಟಿ ರಂಗದಲ್ಲೂ ತುಂಬಾ ವೇಗವಾಗಿ ಬೆಳೆಯುತ್ತಿದೆ.
1997ರಲ್ಲಿ ಲಾರ್ಸೆನ್ ಅಂಡ್ ಟೂಬ್ರೊ ಕಂಪನಿಯನ್ನು ಸ್ಥಾಪಿಸಿದರು.
ಎಲ್ & ಟಿ ಇನ್ಫೋಟೆಕ್ ಸೇವೆ ನೀಡುವ ಕ್ಷೇತ್ರಗಳು
1) ಆಟೋಮೋಟಿವ್ ಮತ್ತು ಏರೋಸ್ಪೇಸ್
2) ಇಂಜಿನೀಯರಿಂಗ್
3) ಲೈಫ್ ಸೈನ್ಸಸ್
4) ಬ್ಯಾಂಕಿಂಗ್ ಮತ್ತು ಹಣಕಾಸು
5) CpG
6) ಶಕ್ತಿ
7) ಹೈಟೆಕ್ ಮತ್ತು ಎಲೆಕ್ಟ್ರಾನಿಕ್ಸ್
8. ಮೈಂಡ್ ಟ್ರೀ
ರೆವೆನ್ಯೂ: ರೂ. 4689.6 ಕೋಟಿ
ಲಾಭ: ರೂ. 603.3 ಕೋಟಿ
1999ರಲ್ಲಿ ಭಾರತೀಯ ಐಟಿ ಸಂಸ್ಥೆಯಾಗಿ ಸ್ಥಾಪಿಸಲಾಯಿತು. ಜಾಗತಿಕವಾಗಿ 16000 ಉದ್ಯೋಗಿಗಳನ್ನು ಹೊಂದಿದೆ. ಮೈಂಡ್ ಟ್ರೀ ಕಂಪನಿಯೂ ಬ್ಯಾಂಕಿಂಗ್, ಕ್ಯಾಪಿಟಲ್ ಮಾರ್ಕೆಟ್ಸ್, ಸೆಮಿಕಂಡಕ್ಟರ್, ಉತ್ಪಾದನೆ, ಸಗಟು ವ್ಯಾಪಾರ ಮತ್ತು ಮೀಡಿಯಾ ಮುಂತಾದ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತದೆ.
ಮೈಂಡ್ ಟ್ರೀ ಒದಗಿಸುವ ಐಟಿ ಸಂಬಂಧಿತ ಸೇವೆಗಳು
1) ಅನ್ವಯಿಕೆಯ ಅಭಿವೃದ್ಧಿ ಹಾಗೂ ನಿಭಾವಣೆ
2) ಅಪ್ಲಿಕೇಶನ್ ಸೇವೆಗಳು
3) ಸ್ವತಂತ್ರ ಪರೀಕ್ಷೆ
4) ಐಟಿ ಕನ್ಸಲ್ಟಿಂಗ್
5) ಅನಾಲಿಟಿಕ್ಸ್
6) ಮೂಲಭೂತ ಸೌಕರ್ಯ ನಿರ್ವಹಣೆ
9. ಒರಾಕಲ್ ಫೈನಾನ್ಸ್ ಸರ್ವಿಸಸ್ ಸಾಪ್ಟ್ವೇರ್ ಲಿ.
ರೆವೆನ್ಯೂ: ರೂ. 3717 ಕೋಟಿ
ಲಾಭ: ರೂ. 928.85 ಕೋಟಿ
ಒರಾಕಲ್ ಫೈನಾನ್ಸ್ ಸರ್ವಿಸಸ್ ಸಾಪ್ಟ್ವೇರ್ ಲಿಮಿಟೆಡ್ ಒರಾಕಲ್ ಕಾರ್ಪೋರೇಷನ್ ಒಡೆತನದಲ್ಲಿರುವ ಅಂಗಸಂಸ್ಥೆ.
ಇದು ಬ್ಯಾಂಕಿಂಗ್ ವೇದಿಕೆಯಾದ FLEXCUBE ಹೆಸರುವಾಸಿಯಾಗಿದ್ದು, ಹೆಚ್ಚು ಬ್ಯಾಂಕು ಸೇವೆಗಳನ್ನು ಒದಗಿಸುತ್ತದೆ.
1) ಕೋರ್ ಬ್ಯಾಂಕಿಂಗ್
2) ಇನ್ವೆಸ್ಟರ್ ಸರ್ವಿಸಿಂಗ್
3) ಪ್ರೈವೇಟ್ ಬ್ಯಾಂಕಿಂಗ್
4) ನೇರ ಬ್ಯಾಂಕಿಂಗ್
10. ರೊಲ್ಟಾ
ರೆವೆನ್ಯೂ: ರೂ. 3899 ಕೋಟಿ
ಲಾಭ: ರೂ. 165 ಕೋಟಿ
1989ರಲ್ಲಿ ಪ್ರಾರಂಭಿಸಲಾದ ಈ ಐಟಿ ಕಂಪನಿ ಮುಂಬೈನಲ್ಲಿದೆ.
ಇದು ರಕ್ಷಣೆ, ಭದ್ರತೆ, ಸರ್ಕಾರದ ಯೋಜನೆಗಳು, ತೈಲ ಮತ್ತು ಅನಿಲ ಇತ್ಯಾದಿ ಸೇವೆಗಳ ಜತೆಗೆ ವ್ಯಾಪಾರ ಗುಪ್ತಚರ ಮತ್ತು ವಿಶ್ಲೇಷಣೆ ವಲಯದಲ್ಲಿ ಹೆಸರುವಾಸಿಯಾಗಿದೆ.
More From GoodReturns

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Renault Duster 2026: ಕಡಿಮೆ ಬೆಲೆಗೆ ಉತ್ತಮ ಕಾರು; 10.49 ಲಕ್ಷ ಬೆಲೆಯಲ್ಲಿ ಹೊಸ ರೆನಾಲ್ಟ್ ಡಸ್ಟರ್-ವಿಶೇಷತೆ ತಿಳಿಯಿರಿ

Eid ul Fitr 2026: ಭಾರತದಲ್ಲಿ ಯಾವಾಗ ಚಂದ್ರನ ದರ್ಶನ? ರಂಜಾನ್ ಹಬ್ಬ ಯಾವಾಗ?

Silver Rates Today: ಭಾರತೀಯ ಬೆಳ್ಳಿ ಖರೀದಿದಾರರಿಗೆ ಸಿಹಿಸುದ್ದಿ; 5000 ರೂ.ನಷ್ಟು ಇಳಿಕೆ

India Aviation Rules: ವಿಮಾನ ಪ್ರಯಾಣದಲ್ಲಿ ದೊಡ್ಡ ಬದಲಾವಣೆ; 60 ಶೇಕಡಾ ಆಸನಗಳು ಉಚಿತ

PAN Card Rules: ಪ್ಯಾನ್ ಕಾರ್ಡ್ ಇಲ್ಲದವರೇ ಇಲ್ಲಿ ಗಮನಿಸಿ; ನಿಯಮ ಸಂಪೂರ್ಣ ಚೇಂಜ್

Gold Price Bengaluru: ಯುಗಾದಿಗೂ ಮುನ್ನ ಚಿನ್ನದ ಬೆಲೆ ಇಳಿಕೆ; ನಿನ್ನೆಗಿಂತ 3,300 ರೂ. ಕುಸಿತ

Ugadi 2026 Wishes: ಈ ವರ್ಷದ ‘ಯುಗಾದಿ’ ಹೊಸ ಬೆಳಕು ತರಲಿ- ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಶುಭಾಶಯ ತಿಳಿಸಿ

Eid Ul-Fitr 2026: ಯುಎಇ, ಕುವೈತ್, ಕತಾರ್ನಲ್ಲಿ ಮೈದಾನ ಪ್ರಾರ್ಥನೆಗೆ ಬ್ರೇಕ್!

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು



Click it and Unblock the Notifications