ಏರ್‌ಏಷ್ಯಾ, ಸ್ಪೈಸ್ ಜೆಟ್‌, ಏರ್ವೇಸ್ ರಿಯಾಯಿತಿ ಆಫರ್!

ವಿಮಾನ ಪ್ರಯಾಣಿಕರಿಗೆ ಇಲ್ಲಿದೆ ಮತ್ತೊಂದು ಸಿಹಿಸುದ್ದಿ! ವಿಮಾನ ಯಾನ ಸಂಸ್ಥೆಗಳಾದ ಏರ್‌ಏಷ್ಯಾ, ಸ್ಪೈಸ್ ಜೆಟ್‌ ಮತ್ತು ಜೆಟ್‌ ಏರ್‌ವೇಸ್ ದಸರಾ-ದೀಪಾವಳಿ ಹಬ್ಬದ ಕೊಡುಗೆ ರೂಪದಲ್ಲಿ ಪ್ರಯಾಣಿಕರಿಗೆ ವಿಶೇಷ ರಿಯಾಯಿತಿ ಆಫರ್ ಪ್ರಕಟಿಸಿವೆ.

ಜೆಟ್ ಏರ್ವೇಸ್ ಆಫರ್

ಜೆಟ್ ಏರ್ವೇಸ್ ಆಫರ್

ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್ವೇಸ್ ಆಯ್ದ ದೇಶೀಯ ಮಾರ್ಗಗಳ ಪ್ರಾರಂಭದ ಕನಿಷ್ಟ ದರ ರೂ. 396ರಿಂದ ಆರಂಭವಾಗಲಿದೆ ಎಂದು ಘೋಷಿಸಿದೆ. ಈ ವಿಶೇಷ ಕೊಡುಗೆ ಯೋಜನೆಯಡಿ ಅ. 7ರವರೆಗೆ ಟಿಕೆಟ್ ಗಳನ್ನು ಮುಂಗಡ ಕಾದಿರಿಸಬಹುದಾಗಿದ್ದು, ನವೆಂಬರ್ 8ರಿಂದ ಪ್ರಯಾಣ ಮಾಡಬಹುದಾಗಿದೆ.

ಏರ್‌ಏಷ್ಯಾ ಕೊಡುಗೆ

ಏರ್‌ಏಷ್ಯಾ ಕೊಡುಗೆ

ಏರ್‌ಏಷ್ಯಾ ವಿಮಾನಯಾನ ಸಂಸ್ಥೆ ದೇಶಿ ಮತ್ತು ವಿದೇಶಿ ಪ್ರಯಾಣಕ್ಕೆ ವಿನಾಯ್ತಿ ಕೊಡುಗೆ ದರ ಘೋಷಿಸಿದೆ. ವರ್ಷಾಂತ್ಯದ ಮಾರಾಟ ಆಫರ್ ಆಗಿ, ಸ್ಥಳೀಯವಾಗಿ ಸಂಚರಿಸಲು ಒಂದು ಮಾರ್ಗದ ಟಿಕೆಟ್ ದರ ₹999 (ಎಲ್ಲಾ ತೆರಿಗೆಗಳನ್ನೂ ಒಳಗೊಂಡು) ಆಗಿದೆ. ವಿದೇಶಿ ಪ್ರಯಾಣದ ಟಿಕೆಟ್ ದರ ಒಂದು ಮಾರ್ಗಕ್ಕೆ ₹3,599ರಿಂದ ಆರಂಭವಾಗಲಿದೆ.

ಅ.16ಕ್ಕೆ ಬುಕಿಂಗ್ ಅಂತ್ಯವಾಗಲಿದ್ದು, ಈ ಅವಧಿಯಲ್ಲಿ ಟಿಕೆಟ್ ಬುಕ್‌ ಮಾಡಿದವರು 2017ರ ಏಪ್ರಿಲ್‌ 27ರ ಒಳಗಾಗಿ ಪ್ರಯಾಣಿಸಬಹುದಾಗಿದೆ.

 

ಸ್ಪೈಸ್ ಜೆಟ್‌ ಆಫರ್

ಸ್ಪೈಸ್ ಜೆಟ್‌ ಆಫರ್

ಸ್ಪೈಸ್ ಜೆಟ್‌ ಕಂಪನಿ ಹಬ್ಬದ ಕೊಡುಗೆ ಅಂಗವಾಗಿ ದೇಶಿ ವಿಮಾನ ಯಾನಕ್ಕೆ ರೂ. 888 ಮತ್ತು ಅಂತರಾಷ್ಟ್ರೀಯ ಪ್ರಯಾಣಕ್ಕೆ ರೂ.3,699ರ ಕನಿಷ್ಠ ಬೆಲೆಯ ಪ್ರಯಾಣ ದರ ಘೋಷಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+