ರಿಲಾಯನ್ಸ್ ಇನ್ಫ್ರಾ-ಅದಾನಿ ಗ್ರೂಪ್ ನಡುವೆ 2000 ಕೋಟಿ ವ್ಯವಹಾರ

ಅನಿಲ್ ಅಂಬಾನಿ ನೇತೃತ್ವದ ರಿಲಾಯನ್ಸ್ ಇನ್ಫಾಸ್ಟ್ರಕ್ಚರ್ ಲಿಮಿಟೆಡ್ ತನ್ನ ಒಡೆತನದ ವಿದ್ಯುತ್ ಪ್ರಸರಣ ಆಸ್ತಿಗಳನ್ನು ರೂ. 2000 ಕೋಟಿಗೆ ಅದಾನಿ ಗ್ರೂಪ್ ಗೆ ಮಾರಾಟ ಮಾಡುವ ಒಪ್ಪಂದಕ್ಕೆ ಸಹಿ ಮಾಡಿದೆ.

ರಿಲಾಯನ್ಸ್ ಇನ್ಫ್ರಾ ಒಡೆತನದಲ್ಲಿ ಮಹಾರಾಷ್ಟ್ರ, ಗುಜರಾತ್, ಮಧ್ಯ ಪ್ರದೇಶ ಮತ್ತು ಕರ್ನಾಟಕದಲ್ಲಿ ಎರಡು ವಿದ್ಯುತ್ ಸಂವಹನ ಮಾರ್ಗಗಳು ವ್ಯಾಪಿಸಿವೆ. ಹಿಮಾಚಲ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಲ್ಲಿ ಶೇ. 74ರಷ್ಟು ಪಾಲನ್ನು ಹೊಂದಿದೆ.

ಅದಾನಿ ಪ್ರಸರಣ ಲಿಮಿಟೆಡ್ ನೊಂದಿಗೆ ತನ್ನ ವಿದ್ಯುತ್ ಪ್ರಸರಣದ ಸ್ವತ್ತುಗಳ ಮಾರಾಟಕ್ಕೆ ಸಂಬಂಧಿಸಿದಂತೆ ಕರಾರು ಪತ್ರದ ಮೇಲೆ ಸಹಿ ಮಾಡಲಾಗಿದೆ ಎಂದು ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಬುಧವಾರ ಹೇಳಿದೆ.

ಎರಡು ಕಂಪನಿಗಳು ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿ ಮೌಲ್ಯಮಾಪನದ ಮಾಹಿತಿಯನ್ನು ಒದಗಿಸಿಲ್ಲ. ಬ್ಯಾಂಕಿಂಗ್ ಮೂಲಗಳ ಪ್ರಕಾರ ಈ ಮಾರಾಟ 2000 ಕೋಟಿಗಿಂತಲೂ ಹೆಚ್ಚಿನದಾಗಿದೆ ಎಂದು ಪರಿಗಣಿಸಲಾಗಿದೆ.

ಆರ್ ಇನ್ಫ್ರಾ ಶೇ. 100ರಷ್ಟು ಖಾಸಗಿ ವಲಯದ ವಿದ್ಯುತ್ ಸಂವಹನ ಯೋಜನೆ ಹೊಂದಿದ ದೇಶದ ಮೊದಲ ಸಂಸ್ಥೆಯೆನಿಸಿದೆ.

ರಿಲಾಯನ್ಸ್ ಇನ್ಫ್ರಾ-ಅದಾನಿ ಗ್ರೂಪ್ ನಡುವೆ 2000 ಕೋಟಿ ವ್ಯವಹಾರ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+