2ನೇ ತ್ರೈಮಾಸಿಕದಲ್ಲಿ ಇನ್ಫಿ ಲಾಭ ಶೇ.4.95ರಷ್ಟು ಏರಿಕೆ

ಬೆಂಗಳೂರು, ಅಕ್ಟೋಬರ್ 14 : ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ವರದಿಯನ್ನು ಸಾಫ್ಟ್ ವೇರ್ ದೈದ್ಯ ಇನ್ಫೋಸಿಸ್ ಸಂಸ್ಥೆ ಶುಕ್ರವಾರ ಪ್ರಕಟಿಸಿದ್ದು, ಹೂಡಿಕೆದಾರರು ಮತ್ತು ಹಣಕಾಸು ಪಂಡಿತರ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಭಾರೀ ನಿವ್ವಳ ಲಾಭ ಗಳಿಸಿದೆ.

ಸೆಪ್ಟೆಂಬರ್ 30ರಂದು ಮುಕ್ತಾಯವಾದ ಮೊದಲ ತ್ರೈಮಾಸಿಕದಲ್ಲಿ 3,606 ಕೋಟಿ ರು. ನಿವ್ವಳ ಲಾಭ ಗಳಿಸಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ. 4.95ರಷ್ಟು ಲಾಭದಲ್ಲಿ ಏರಿಕೆ ಕಂಡಿದೆ. ಜೂನ್ 30ರಂದು ಮುಕ್ತಾಯವಾಗಿದ್ದ ಮೊದಲ ತ್ರೈಮಾಸಿಕದಲ್ಲಿ ಇನ್ಫೋಸಿಸ್ 3,436 ಕೋಟಿ ರು. ಲಾಭ ಗಳಿಸಿತ್ತು.

2ನೇ ತ್ರೈಮಾಸಿಕದಲ್ಲಿ ಇನ್ಫಿ ಲಾಭ ಶೇ.4.95ರಷ್ಟು ಏರಿಕೆ
Infosys: Quotes, News
BSE 1130.00BSE Quote26.1 (-2.31%)
NSE 1130.30NSE Quote24.8 (-2.19%)

ಹಣದುಬ್ಬರದ ಏರಿಳಿತದಿಂದಾಗಿ ಲಾಭನಷ್ಟದಲ್ಲಿಯೂ ಏರಿಳಿತಗಳಾಗಬಹುದೆಂದು, ಈ ತ್ರೈಮಾಸಿಕದಲ್ಲಿ ಸಾಕಷ್ಟು ಸವಾಲು ಎದುರಿಸಬಹುದೆಂದು ಇನ್ಫೋಸಿಸ್ ಸಂಸ್ಥೆ ಶೇರು ಮಾರುಕಟ್ಟೆಗೆ ಮೊದಲೇ ಸೂಚನೆ ನೀಡಿತ್ತು. ಇದರಿಂದಾಗಿ ಹಣಕಾಸು ತಜ್ಞರು ಮತ್ತು ಹೂಡಿಕೆದಾರರು ಕೂಡ ಅಂತಹ ನಿರೀಕ್ಷೆಗಳನ್ನು ಇಟ್ಟುಕೊಂಡಿರಲಿಲ್ಲ.

ಡಾಲರ್ ಲೆಕ್ಕಾಚಾರವನ್ನು ತೆಗೆದುಕೊಂಡರೆ ಮೊದಲ ತ್ರೈಮಾಸಿಕದಲ್ಲಿ 2,587 ಮಿಲಿಯನ್ ಡಾಲರ್ ಲಾಭವನ್ನು ಇನ್ಫೋಸಿಸ್ ಕಂಡಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.3.9ರಷ್ಟು ಲಾಭದಲ್ಲಿ ಏರಿಕೆ ಕಂಡಿದೆ. ಇದು ಹಣಕಾಸು ಪಂಡಿತರು ಮತ್ತು ಹೂಡಿಕೆದಾರರು ನಿರೀಕ್ಷಿಸಿದಂತೆಯೇ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+